Video: ಭರ್ಜರಿ ಸಿಕ್ಸರ್​​ನೊಂದಿಗೆ ಶತಕ ಸಿಡಿಸಿದ ಕಿಂಗ್ ಕೊಹ್ಲಿ

#Sports #Trending #ViratKohli #INDvsBAN #IshanKishan #3rdODI
Published on

ಚಟ್ಟೋಗ್ರಾಮ್​: ಬಾಂಗ್ಲಾದೇಶ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ದ್ವಿಶತಕ ಸಿಡಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಭರ್ಜರಿ ಸಿಕ್ಸರ್ ಸಿಡಿಸಿ ಮಿಂಚಿದರು.

ಎರಡನೇ ವಿಕೆಟ್​​ಗೆ ಇಶಾನ್ ಕಿಶನ್​ ಜತೆಗೂಡಿದ ಕೊಹ್ಲಿ, ಆರಂಭದಲ್ಲಿ ಇಶಾನ್​ಗೆ ಸಾಥ್​​ ನೀಡುತ್ತಾ ಬಂದರು. ದ್ವಿಶತಕದೊಂದಿಗೆ 210 ರನ್​ ಗಳಿಸಿ ಕಿಶನ್ ಔಟ್ ಆಗುತ್ತಿದ್ದಂತೆ, ಕೊಹ್ಲಿ ಭರ್ಜರಿ ಸಿಕ್ಸರ್ ಸಿಡಿಸಿ ತಮ್ಮ ಶತಕ ಪೂರೈಸಿದರು. ಇದರೊಂದಿಗೆ ಏಕದಿನ ಪಂದ್ಯದಲ್ಲಿ ಕೊಹ್ಲಿ 44ನೇ ಶತಕ ದಾಖಲಿಸಿದರು.

ವಿರಾಟ್ ಕೊಹ್ಲಿ 86 ಬಾಲ್​ಗಳಲ್ಲಿ ಒಂದು ಸಿಕ್ಸರ್ ಹಾಗೂ ಹನ್ನೊಂದು ಫೋರ್​​ ಸಿಡಿಸಿ ಶತಕ ಪೂರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net