ಟಿ20 ವಿಶ್ವಕಪ್​ಗೆ ಇಂಗ್ಲೆಂಡ್ ತಂಡದ ಸಹಾಯಕ ಕೋಚ್ ಆಗಿ ನೇಮಕಗೊಂಡ ಕೈರಾನ್ ಪೊಲ್ಲಾರ್ಡ್​!

pollard web
Published on

ಲಂಡನ್​: ವೆಸ್ಟ್​ ಇಂಡೀಸ್​ ಮಾಜಿ ನಾಯಕ ಕೈರಾನ್​ ಪೊಲ್ಲಾರ್ಡ್​ ಮುಂದಿನ ವರ್ಷದ ಟಿ20 ವಿಶ್ವಕಪ್​ಗೆ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ತಂಡದ ಸಹಾಯಕ ಕೋಚ್​ ಆಗಿ ನೇಮಕಗೊಂಡಿದ್ದಾರೆ. ಜೂನ್​ 4ರಿಂದ ಅಮೆರಿಕ-ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ಟೂರ್ನಿ ನಡೆಯಲಿದ್ದು, ಪೊಲ್ಲಾರ್ಡ್​ ಕೆರಿಬಿಯನ್​ ವಾತಾವರಣದ ಬಗ್ಗೆ ಸೂಕ್ತ ಮಾಹಿತಿ ನೀಡುವ ಮೂಲಕ ಆಂಗ್ಲರಿಗೆ ನೆರವಾಗಲಿದ್ದಾರೆ.

2022ರ ಏಪ್ರಿಲ್​ನಲ್ಲಿ ಎಲ್ಲ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ ಪೊಲ್ಲಾರ್ಡ್​, ವಿಶ್ವದೆಲ್ಲೆಡೆ 637 ಟಿ20 ಪಂದ್ಯ ಆಡಿದ ಅನುಭವ ಹೊಂದಿದ್ದಾರೆ. 2012ರಲ್ಲಿ ಟಿ20 ವಿಶ್ವಕಪ್​ ಗೆದ್ದ ವಿಂಡೀಸ್​ ತಂಡದ ಭಾಗವಾಗಿದ್ದರು. ವಿಂಡೀಸ್​ ಪರ 101 ಟಿ20 ಪಂದ್ಯ ಆಡಿರುವ ಅವರು 1,569 ರನ್​ ಮತ್ತು 42 ವಿಕೆಟ್​ ಗಳಿಸಿದ್ದಾರೆ. ಈ ಪೈಕಿ 63 ಟಿ20 ಪಂದ್ಯಗಳಲ್ಲಿ ನಾಯಕರಾಗಿದ್ದರು.

ಪೊಲ್ಲಾರ್ಡ್​ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡದಿಂದ ನಿವೃತ್ತಿ ಹೊಂದಿದ್ದರೂ, ಇತರ ಕೆಲ ಟಿ20 ಲೀಗ್​ಗಳಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಕೆರಿಬಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಟ್ರಿನಿಡಾಡ್​ ನೈಟ್​ರೈಡರ್ಸ್​ ತಂಡವನ್ನು ಪ್ರಶಸ್ತಿ ಸುತ್ತಿಗೇರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net