

ತರೌಬ: ಚುಟುಕು ಕ್ರಿಕೆಟ್ಗೂ ವೆಸ್ಟ್ ಇಂಡೀಸ್ ಆಟಗಾರರಿಗೂ ಅವಿನಾಭಾವ ಸಂಬಂಧ. ಟಿ20 ಲೀಗ್ಗಳಲ್ಲಿ ಅವರದ್ದೇ ಪ್ರಭುತ್ವ. ಬಹುತೇಕ ದಾಖಲೆಗಳ ಒಡೆಯರಾಗಿದ್ದಾರೆ ವಿಂಡೀಸ್ ಆಟಗಾರರು. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ವಿಂಡೀಸ್ ಆಟಗಾರರಿಗೆ ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಚುಟುಕು ಕ್ರಿಕೆಟ್ನಲ್ಲಿ ಎಂದಿಗೂ ಅಭಿಮಾನಿಗಳಿಗೆ ನಿರಾಸೆ ಮಾಡುವುದಿಲ್ಲ ವಿಂಡೀಸ್ ಆಟಗಾರರು. ಅವರಲ್ಲಿ ಆಲ್ರೌಂಡರ್ ಕೈರಾನ್ ಪೊಲ್ಲಾರ್ಡ್ ಕೂಡ ಪ್ರಮುಖರು. ಕೆರಿಬಿಯನ್ನಲ್ಲೇ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೈರಾನ್ ಪೊಲ್ಲಾರ್ಡ್ ಒಂದೇ ಕೈಯಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಗಮನಸೆಳೆದಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ಟ್ರಿನ್ಬಾಗೊ ನೈಟ್ ರೈಡರ್ಸ್ (ಟಿಕೆಆರ್) ತಂಡದ ನಾಯಕನಾಗಿರುವ ಪೊಲ್ಲಾರ್ಡ್ ಒಂದೇ ಕೈಯಲ್ಲಿ ಸಿಕ್ಸರ್ ಸಿಡಿಸಿದರು.
ಟಿಕೆಆರ್ ತಂಡದ ನಾಯಕ ಎದುರಿಸಿದ ಕೇವಲ 17 ಎಸೆತಗಳಲ್ಲಿ 41 ರನ್ ಸಿಡಿಸಿ ಗಮನಸೆಳೆದರು. ಡರೇನ್ ಬ್ರಾವೊ (54ರನ್, 36 ಎಸೆತ, 4 ಬೌಂಡರಿ, 4 ಸಿಕ್ಸರ್), ಕಾಲಿನ್ ಮುನ್ರೊ (50ರನ್, 30 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ಕೈರಾನ್ ಪೊಲ್ಲಾರ್ಡ್ ತ್ರಿಮೂತಿರ್ಗಳ ಅಬ್ಬರದ ಫಲವಾಗಿ ಟಿಕೆಆರ್ ತಂಡ 19 ರನ್ಗಳಿಂದ ಬಾರ್ಬಡೊಸ್ ಟ್ರಿಡೆಂಟ್ಸ್ ತಂಡವನ್ನು ಮಣಿಸಿತು. ದಿನದ ಮತ್ತೊಂದು ಪಂದ್ಯದಲ್ಲಿ ದಿನದ ಮತ್ತೊಂದು ಪಂದ್ಯದಲ್ಲಿ ಸೇಂಟ್ ಲೂಸಿಯಾ ಜೌಕ್ಸ್ ತಂಡ 10 ರನ್ಗಳಿಂದ ಗಯಾನ ಅಮೆಜಾನ್ ವಾರಿಯರ್ಸ್ ತಂಡವನ್ನು ಮಣಿಸಿ ಲೀಗ್ನಲ್ಲಿ 3ನೇ ಜಯ ದಾಖಲಿಸಿತು.