ಇಂಡಿಯನ್ ರೇಸಿಂಗ್ ಫೆಸ್ಟಿವಲ್​ನಲ್ಲಿ ಕಿಚ್ಚಾಸ್​ ಕಿಂಗ್ಸ್ ಬೆಂಗಳೂರಿನ ನೀಲ್​ ಜನಿ 2ನೇ ರನ್ನರ್​ಅಪ್​

web kicha1
Published on

ಬೆಂಗಳೂರು: ಇಂಡಿಯನ್ ರೇಸಿಂಗ್ ಫೆಸ್ಟಿವಲ್​ನಲ್ಲಿ (ಐ.ಆರ್.ಎಫ್.) ಭಾನುವಾರದಂದು ಕರಿ ಸ್ಪೀಡ್ವೇಯಲ್ಲಿ ಮತ್ತೊಂದು ಆಕ್ಷನ್-ಸನ್ನದ್ಧ ದಿನಕ್ಕೆ ಸಾಕ್ಷಿಯಾಯಿತು. 1ನೇ ದಿನ ರೌಲ್ ಹೈಮನ್ ಐ.ಆರ್.ಎಲ್. ಡ್ರೈವರ್ ಎ ರೇಸ್ ನಲ್ಲಿ ಪ್ರಭಾವ ಬೀರಿದ್ದು ಇದು ಈ ಉತ್ಸವಕ್ಕೆ ಮಹತ್ತರ ಮುನ್ನುಡಿಯಾಯಿತು. 2ನೇ ದಿನದಂದು ಅಭಿಮಾನಿಗಳಿಗೆ ಸ್ಪೀಡ್ ಡೆಮೊನ್ಸ್ ದೆಹಲಿಯ ಸಾಯಿ ಸಂಜಯ್ ಅವರು ಕೊಯಮತ್ತೂರಿನಲ್ಲಿ ನಡೆದ ಐ.ಆರ್.ಎಲ್. ಡ್ರೈವರ್ ಬಿ ರೇಸ್ ನಲ್ಲಿ ಮಹತ್ತರ ವಿಜಯ ಸಾಧಿಸಿದರು.

ಪ್ರಾರಂಭದಿಂದಲೇ ಮೊದಲ ಸಾಲಿನ ರೇಸರ್ ಗಳಾದ ಅಕ್ಷಯ್ ಬೊಹ್ರಾ ಮತ್ತು ನಟ ಸುದೀಪ್​ ಒಡೆತನದ ಕಿಚ್ಚಾಸ್​ ಕಿಂಗ್ಸ್​ ಬೆಂಗಳೂರು ತಂಡದ ನೀಲ್ ಜನಿ ಅವರು ಮುನ್ನುಗ್ಗಿ ತೀವ್ರ ಹಣಾಹಣಿ ನೀಡಿದರು. ಬೊಹ್ರಾ ಮುಂಚೂಣಿಯ ಸ್ಥಾನ ಪಡೆದರೆ ನೀಲ್ ಜನಿ ಟಾಪ್ 3 ಗಿಂತ ಕೆಳಕ್ಕೆ ಕುಸಿದರು. ಬೊಹ್ರಾ ಉಳಿದವರಿಗಿಂತ ಪ್ರತ್ಯೇಕವಾಗಿ ಉತ್ತಮ ಸಾಧನೆ ನೀಡಿದರೂ ದಿಢೀರನೆ ವೇಗ ಕಳೆದುಕೊಂಡರು ಮತ್ತು ಸಾಯಿ ಸಂಜಯ್ ಅವರಿಗಿಂತ ಹಿಂದೆ ಬಿದ್ದರು ಮತ್ತು ಟಾಪ್ 5ರಲ್ಲಿ ಒಬ್ಬರಾದರು.

ಸಾಯಿ ಅವರನ್ನು ಗೋವಾ ಏಸಸ್ ಚಾಲಕ ಫ್ಯಾಬಿಯೆನ್ನೆ ವೊಹ್ಲ್ ವೆಂಡ್ ಅವರು ಕೊಂಚ ಅನುಸರಿಸಿದರು. ಈ ರೇಸ್ ನ ಅತ್ಯಂತ ಮುಖ್ಯ ಅಂಶಗಳಲ್ಲಿ ಒಂದೆಂದರೆ 3ನೇ ಸ್ಥಾನಕ್ಕೆ ನಡೆದ ಹಣಾಹಣಿ. ಆಕಾಶ್ ಗೌಡ ಅವರು ಟಿಜಿಲ್ ರಾವ್ ಮತ್ತು ನೀಲ್ ಜನಿ ಅವರನ್ನು ಅನುಸರಿಸುತ್ತಿದ್ದು ಅವರ ನಡುವೆ ಬಹಳ ಕಡಿಮೆ ಅಂತರವಿತ್ತು. ಚೆನ್ನೈ ಟರ್ಬೊ ರೈಡರ್ಸ್ ನ ರಾವ್ ಅವರು ಮುನ್ನುಗ್ಗಿ ಗೌಡ ಅವರನ್ನು ಹಿಂದುಳಿಯುವಂತೆ ಮಾಡಿ 3ನೇ ಸ್ಥಾನಕ್ಕೆ ಚಲಿಸಿದರು. ಆದಾಗ್ಯೂ ರಾವ್ ಗೌಡ ಅವರಿಗೆ ಕೊಂಚ ಗ್ಯಾಪ್ ನೀಡಿದರು ಮತ್ತು ಜನಿ ಅವರನ್ನು ಮೀರಿ ಮುನ್ನಡೆದರು. ಆದರೆ ಹಣಾಹಣಿ ಅಲ್ಲಿಗೆ ಮುಗಿಯಲಿಲ್ಲ. ಕೊನೆಯ ಕೆಲ ಹಂತಗಳಲ್ಲಿ ಕಿಚ್ಚ ಕಿಂಗ್ಸ್ ಬೆಂಗಳೂರಿನ ನೀಲ್ ಜನಿ ಅತ್ಯಂತ ತೀವ್ರವಾಗಿ ಮುನ್ನುಗ್ಗಿ ಆಕಾಶ್ ಗೌಡರಿಂದ ಅಂತಿಮ ಪೋಡಿಯಂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.

ರೇಸ್ ಪ್ರಾರಂಭದಲ್ಲಿ 3ನೇ ಸ್ಥಾನವು ಜನಿ ಅವರಿಗೆ ಸೂಕ್ತವಾಗೇನೂ ಇರಲಿಲ್ಲ. ಆದರೆ ಲ್ಯಾಪ್ 1ರಲ್ಲಿ ಅವರ ವೈಫಲ್ಯದ ನಂತರ ಅವರ ಪಿ3 ಫಿನಿಷ್ ಈ ಸ್ವಿಸ್ ಚಾಲಕರಿಗೆ ಮಹತ್ತರ ಹಿಂದಿರುಗುವಿಕೆ ಆಯಿತು. ಈ ಎಲ್ಲ ನಾಟಕೀಯ ಬೆಳವಣಿಗೆಗಳು ಅವರ ಹಿಂದೆ ನಡೆಯುತ್ತಿದ್ದಂತೆ ಸಾಯಿ ಸಂಜಯ್ ಕರಿ ಮೋಟಾರ್ ಸ್ಪೀಡ್ವೇಯ ರೇಸ್ 2 ರೌಂಡ್ 1ರಲ್ಲಿ ಗೆಲುವಿನತ್ತ ಮುನ್ನಡೆದರು.

ಸಾಯಿ ಸಂಜಯ್, “ನಮಗೆ ಇಡೀ ವಾರಾಂತ್ಯ ಪೂರಕವಾಗಿತ್ತು ಎನಿಸುತ್ತದೆ. ನಾವು ಶುಕ್ರವಾರ ಅರ್ಹತೆ ಪಡೆಯುವಲ್ಲಿ ಅತ್ಯಂತ ದುರಾದೃಷ್ಟಕರವಾಗಿದ್ದು ಅದರಲ್ಲಿ ಕೊಂಚ ಗೊಂದಲಕ್ಕೆ ಒಳಗಾದೆ ಮತ್ತು ಅಂತಿಮವಾಗಿ ಪಿ3ಯಲ್ಲಿ ಪೂರೈಸಬೇಕಾಯಿತು. ಆದರೆ ನಮಗೆ ದೊಡ್ಡ ಗೆಲುವು ಸಾಧ್ಯ ಎಂದು ತಿಳಿದಿದ್ದೆ. ತಂಡವು ಕಾರಿನೊಂದಿಗೆ ಅದ್ಭುತವಾಗಿ ಮುನ್ನಡೆಯಿತು. ತಂಡವು ಈಗ ಚೆನ್ನೈನಲ್ಲಿನ ಮುಂದಿನ ಸುತ್ತಿಗೆ ಆದ್ಯತೆ ನೀಡಿದೆ” ಎಂದರು.

ರೌಂಡ್ 1- ಇಂಡಿಯನ್ ರೇಸಿಂಗ್ ಲೀಗ್ (ಗ್ರೂಪ್ ಬಿ) ತಾತ್ಕಾಲಿಕ ಫಲಿತಾಂಶಗಳು

ವಿಜೇತರು: ಸಾಯಿ ಸಂಜಯ್ (ಸ್ಪೀಡ್ ಡೆಮೊನ್ಸ್ ದೆಹಲಿ)- 26:51.373

ರನ್ನರ್-ಅಪ್: ಫ್ಯಾಬಿಯೆನ್ನೆ ವೊಹ್ಲ್ ವೆಂಡ್ (ಗೋವಾ ಏಸಸ್)- 26:59.120

2ನೇ ರನ್ನರ್-ಅಪ್: ನೀಲ್ ಜನಿ (ಕಿಚ್ಚಾಸ್ ಕಿಂಗ್ಸ್ ಬೆಂಗಳೂರು)- 27:10.506

ಫಾರ್ಮುಲಾ 4 ಇಂಡಿಯನ್ ಚಾಂಪಿಯನ್ ಶಿಪ್

ಇಂಡಿಯನ್ ರೇಸಿಂಗ್ ಫೆಸ್ಟಿವಲ್ ನ 2ನೇ ದಿನವು ಎಫ್.ಐ.ಎ. ಸರ್ಟಿಫೈಡ್ ಫಾರ್ಮುಲಾ 4 ಕಾರುಗಳ ಹಣಾಹಣಿಯನ್ನು ಈ ವರ್ಷದ ಮೊಟ್ಟಮೊದಲ ಬಾರಿಗೆ ವೆಟ್ ಟ್ರ್ಯಾಕ್ ನಲ್ಲಿ ನಡೆಸಿದ್ದನ್ನು ಕಂಡಿತು. ಭಾನುವಾರ ಚಾಂಪಿಯನ್ ಶಿಪ್ ಗೆ ಒಟ್ಟು 2 ರೇಸ್ ಗಳಿದ್ದವು.

ರೇಸ್ 1ರಲ್ಲಿ ಹೈದರಾಬಾದ್ ಬ್ಲಾಕ್ ಬರ್ಡ್ಸ್ ಪ್ರತಿನಿಧಿಸುವ ಗ್ರೀಸ್ ನಿಂದ ವಸಿಲಿಸ್ ಅಪೊಸ್ಟೊಲಿಡಿಸ್ ಅವರ ಪೋಲ್ ಸ್ಥಾನವನ್ನು ರೇಸ್ ಗೆಲುವಿನತ್ತ ಪರಿವರ್ತಿಸಿದರು. ವಿಯಾನ್ ಬೊಶೊಫ್ ಅವರಿಗೆ ಸವಾಲಿನ ರೇಸ್ 1 ಇತ್ತು. ಅವರು ಬಲವಾದ ಅರ್ಹತಾ ಸುತ್ತಿನಲ್ಲಿ ರೇಸ್ ನಲ್ಲಿ ಪಿ3ಯ ಸ್ಥಾನ ಲಭಿಸಿತು, ಆದರೆ ಅವರು ಅದನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಅವರು ರೇಸ್ ನಲ್ಲಿ 5ನೆಯವರಾಗಿ ಪೂರೈಸಿದರು. ಚೆನ್ನೈ ಟರ್ಬೊ ರೈಡರ್ಸ್ ಶೇನ್ ಚಂದಾರಿಯಾ 3ನೆಯ ಸ್ಥಾನಕ್ಕೆ ಪೂರೈಸಿದ ಇಶಾನ್ ಮಾದೇಶ್ ಅವರೊಂದಿಗೆ ತೀವ್ರ ಹಣಾಹಣಿ ನಡೆಸಿ 2ನೇ ಸ್ಥಾನ ಗಳಿಸಿದರು.

ವಸಿಲಿಸ್ ಅಪೊಸ್ಟೊಲಿಡಿಸ್: “ರೇಸ್ ನಿಜಕ್ಕೂ ಅತ್ಯುತ್ತಮವಾಗಿತ್ತು. ನಾನು ಮಳೆ ಸುರಿಯುತ್ತಿದ್ದ ದಾರಿಯಲ್ಲಿ ಅಪಾರ ಶ್ರಮಿಸಿದೆ. ಅದು ಕಠಿಣ ರೇಸ್ ಆಗಿತ್ತು, ನಾನು ಒದ್ದೆ ನೆಲದಲ್ಲಿದ್ದೆ, ಆದರೆ ಅದು ಕೊನೆಯಲ್ಲಿ ಒಣಗುತ್ತಿತ್ತು ಮತ್ತು ನಾನು ಬಯಸಿದ್ದಕ್ಕಿಂತ ವೇಗವಾಗಿ ಸಾಗಿದೆ” ಎಂದರು.

ರೇಸ್ 2 ಕೊಲ್ಕತಾ ರಾಯಲ್ ಡೈಗರ್ಸ್ ನ ಇಶಾನ್ ಮಾದೇಶ್ ಅವರಿಗೆ ಉತ್ತಮ ಫಲಿತಾಂಶ ನೀಡಿದ್ದು ಅವರು ಪಿ4ನಿಂದ ಪಿ1ಕ್ಕೆ ಬೃಹತ್ ಪ್ರಾರಂಭ ಪಡೆದರು. ಅವರು ಉಳಿದ ರೇಸ್ ನೇತೃತ್ವ ವಹಿಸಲು ಶಕ್ತರಾದರೆ ಅವರ ಹಿಂದಿನ ಚಾಲಕರು ಅವರಿಗೆ ಯಾವುದೇ ತಪ್ಪುಗಳನ್ನು ಮಾಡಲು ಅವಕಾಶ ನೀಡಲಿಲ್ಲ. ಅವರು ಫ್ರೆಂಚ್ ಚಾಲಕ ಸಷೆಲ್ ರೊಟ್ಗೆ ಅವರಿಗಿಂತ ಕೇವಲ 1 ಸೆಕೆಂಡ್ ಮುಂಚೆ ಪೂರೈಸಿದರು. ವಸಿಲಿಸ್ ಅಪೊಸ್ಟೊಲಿಡಿಸ್ ಪಿ5ರಿಂದ ಗ್ರಿಡ್ ಮೇಲ್ ಹಣಾಹಣಿ ನಡೆಸಿ ರೇಸ್ 2ರಲ್ಲಿ 3ನೇ ಸ್ಥಾನ ಪಡೆದರು.

ರೌಂಡ್ 1- ಫಾರ್ಮುಲಾ 4 ಇಂಡಿಯನ್ ಚಾಂಪಿಯನ್ ಶಿಪ್ ತಾತ್ಕಾಲಿಕ ಫಲಿತಾಂಶಗಳು

ರೇಸ್ 1 ವಿಜೇತರು: ವಸಿಲಿಸ್ ಅಪೊಸ್ಟೊಲಿಡ್ಸ್ (ಬ್ಯಾಕ್ ಬರ್ಡ್ಸ್ ಹೈದರಾಬಾದ್)- 26:20.630

ರೇಸ್ 2 ವಿಜೇತರು: ಇಶಾನ್ ಮಾದೇಶ್ (ಕೊಲ್ಕತಾ ರಾಯಲ್ ಟೈಗರ್ಸ್)- 26:35.769

ಜೆಕೆ ಟೈರ್ ಎಫ್.ಎಂ.ಎಸ್.ಸಿ.ಐ. ನ್ಯಾಷನಲ್ ರೇಸಿಂಗ್ ಚಾಂಪಿಯನ್ಶಿಪ್- ಅಂತಿಮ ಹಣಾಹಣಿ

ಧ್ರುವ್ ಗೋಸ್ವಾಮಿ ಎಲ್.ಜಿ.ಬಿ.ಎಫ್.4 ವಿಭಾಗವನ್ನು ಕರಿ ಮೋಟಾರ್ ಸ್ಪೀಡ್ವೇಯ ಮೊದಲ ದಿನ ಪ್ರಭಾವಿಸಿದರು. ಆದಾಗ್ಯೂ ಅವರ ಗೆಲುವನ್ನು ಹಿಂದಕ್ಕೆ ಪಡೆಯಲಾಯಿತು, ಏಕೆಂದರೆ ಪರೀಕ್ಷೆಗೆ ಒಳಪಡಿಸಿದಾಗ ತಾಂತ್ರಿಕ ಉಲ್ಲಂಘನೆ ಕಂಡುಬಂದಿದ್ದು ಇದರಿಂದ ದಿಲ್ಜಿತ್ ಅವರನ್ನು ರೇಸ್ 1 ಮತ್ತು ರೇಸ್ 2ರಲ್ಲಿ ವಿಜೇತರೆಂದು ಘೋಷಿಸಲಾಯಿತು.

ರೇಸ್ 3ರಲ್ಲಿ ಧ್ರುವ್ ಗೋಸ್ವಾಮಿ ಮತ್ತೊಮ್ಮೆ ರೇಸ್ ಮೇಲೆ ನಿಯಂತ್ರಣ ಪಡೆದುಕೊಂಡರು ಮತ್ತು ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಅವರ ಹಿಂದೆ ಸರನ್ ವಿಕ್ರಮ್ ಟಿಮರ್ಸ್ ಮತ್ತು ರಘು ರಂಗಸ್ವಾಮಿ ರೋಮಾಂಚಕ ಸ್ಪರ್ಧೆಯಲ್ಲಿ ವ್ಹೀಲ್-ಟು-ವ್ಹೀಲ್ ಹೋರಾಟ ನಡೆಸಿ ಕ್ರಮವಾಗಿ ಪಿ2 ಮತ್ತು ಪಿ3 ಪೂರೈಸಿದರು. ರೇಸ್ 3ರ ತಾತ್ಕಾಲಿಕ ಫಲಿತಾಂಶಗಳು ಹೀಗಿದ್ದು ಪರೀಕ್ಷೆಯ ಫಲಿತಾಂಶಗಳನ್ನು ಕಾಯಲಾಗುತ್ತಿದೆ.

ರೌಂಡ್-1- ಜೆಕೆ ಟೈರ್ ಎಫ್.ಎಂ.ಎಸ್.ಸಿ.ಐ. ನ್ಯಾಷನಲ್ ರೇಸಿಂಗ್ ಚಾಂಪಿಯನ್ ಶಿಪ್ ರೇಸ್ 3 ತಾತ್ಕಾಲಿಕ ಫಲಿತಾಂಶಗಳು

ವಿಜೇತರು: ಧ್ರುವ್ ಗೋಸ್ವಾಮಿ- 26:34.071

ರನ್ನರ್-ಅಪ್: ಸರನ್ ವಿಕ್ರಂ ಟಿಮರ್ಸ್-26:37.166

2ನೇ ರನ್ನರ್-ಅಪ್: ರಗುಲ್ ರಂಗಸಾಮಿ- 26:37.430

ಕೊಯಮತ್ತೂರಿನ ರೌಂಡ್ 1 ಪೂರ್ಣಗೊಂಡ ನಂತರ ಇಂಡಿಯನ್ ರೇಸಿಂಗ್ ಫೆಸ್ಟಿವಲ್ ಈಗ ಚೆನ್ನೈನ ಮದ್ರಾಸ್ ಇಂಟರ್ನ್ಯಾಷನಲ್ ಸರ್ಕ್ಯೂಟ್ ಗೆ ವರ್ಗಾವಣೆಯಾಗಲಿದೆ. ಎರಡು ದಿನಗಳ ರೋಮಾಂಚಕ ರೇಸಿಂಗ್ ನಂತರ ಗೋವಾ ಏಸಸ್ ಐ.ಆರ್.ಎಲ್.ನಲ್ಲಿ ಸೋಲಿಸಬೇಕಾದ ತಂಡವಾಗಿ ಹೊರಹೊಮ್ಮಿದೆ. ಚೆನ್ನೈನ ಸರ್ಕ್ಯೂಟ್ ತಂಡಗಳು ಮತ್ತು ಚಾಲಕರಿಗೆ ವಿವಿಧ ಬಗೆಯ ಸವಾಲುಗಳನ್ನು ಒದಗಿಸಲಿದೆ. ಇದು ಕರಿ ಮೋಟಾರ್ ಸ್ಪೀಡ್ವೇಯ 2.1 ಕಿ.ಮೀ.ಯಂತೆ ಅಲ್ಲದೆ 3.7 ಕಿ.ಮೀ. ಡಾಂಬರು ರಸ್ತೆಯ ಹೊಂದಿರುವ ಉದ್ದದ ಸರ್ಕ್ಯೂಟ್ ಆಗಿದೆ. ಮದ್ರಾಸ್ ಇಂಟರ್ನ್ಯಾಷನಲ್ ಸರ್ಕ್ಯೂಟ್ ನಲ್ಲಿನ ಐ.ಆರ್.ಎಲ್. ಲ್ಯಾಪ್ ದಾಖಲೆಯು 1:30.681ರಲ್ಲಿ ನಿಗದಿಯಾಗಿದ್ದು ಇದನ್ನು 2022ರ 2ನೇ ಐ.ಆರ್.ಎಲ್.ನಲ್ಲಿ ದಾಖಲೆಯಾಗಿದೆ. ಈ ವಾರಾಂತ್ಯದಲ್ಲಿ ಈ ದಾಖಲೆಯನ್ನು ಯಾರಾದರೂ ಮುರಿಯುತ್ತಾರೋ ಎನ್ನುವುದನ್ನು ನೋಡಬೇಕಾಗಿದೆ. ಇಂಡಿಯನ್ ರೇಸಿಂಗ್ ಫೆಸ್ಟಿವಲ್ ಅನ್ನು ಜಿಯೊಹಾಟ್ ಸ್ಟಾರ್ ಮತ್ತು ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 2ರಲ್ಲಿ ಲೈವ್ ವೀಕ್ಷಿಸಿ. ಮುಂದಿನ ರೇಸ್ ಗಳಿಗೆ ಟಿಕೆಟ್ ಗಳು ವಿಶೇಷವಾಗಿ ಜೊಮ್ಯಾಟೊ ಡಿಸ್ಟ್ರಿಕ್ಟ್ ಆಪ್ ನಲ್ಲಿ ಲಭ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net