ಖೋಖೋ-ಥ್ರೋಬಾಲ್‌ನಲ್ಲಿ ಉತ್ತಮ ಪ್ರದರ್ಶನ

Kurugodu Taluka Level Sports
ಕುರುಗೋಡಿನಲ್ಲಿ ಬುಧವಾರ ತಾಲೂಕು ಮಟ್ಟದ ಕ್ರೀಡಾಕೂಟದ ಕಬಡ್ಡಿ ಪಂದ್ಯಾವಳಿಯಲ್ಲಿ ಎಮ್ಮಿಗನೂರು ಹಾಗೂ ಮುಷ್ಟಗಟ್ಟೆ ಶಾಲೆ ವಿದ್ಯಾರ್ಥಿಗಳ ನಡುವಿನ ಸೆಣಸಾಟ.
Published on

ಕುರುಗೋಡು: ಪಟ್ಟಣದ ಸೇಕ್ರಡ್ ಹಾರ್ಟ್ ಶಾಲೆಯಲ್ಲಿ ಬುಧವಾರ ತಾಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ನಡೆಯಿತು.

ಖೋಖೋ ಪಂದ್ಯದ ಬಾಲಕಿಯರ ವಿಭಾಗದಲ್ಲಿ ಓರ‌್ವಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಂಡವು ಯಲ್ಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮಣಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಯಿತು.

ಥ್ರೋ ಬಾಲ್ ಬಾಲಕರ ವಿಭಾಗದಲ್ಲಿ ಹೊಸ ಗೆಣಿಕೆಹಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಂಡವು ಗುತ್ತಿಗೆನೂರು ಶಾಲೆ ವಿರುದ್ಧ ಜಯಗಳಿಸಿತು.

ಬಾಲಕಿಯರ ವಿಭಾಗದಲ್ಲಿ ಬಳ್ಳಾರಿಯ ವಿಯನ್ನಾ ವಿದ್ಯಾಲಯದ ತಂಡವನ್ನು ಹೊಸಗೆಣಿಕೆಹಾಳು ತಂಡ ಸೋಲಿಸಿತು.

ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಗುತ್ತಿಗನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯರಿಂಗಳಿಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಂಡವನ್ನು 14-16, 23-11 ಅಂಕಗಳಿಂದ ಪರಭಾವಗೊಳಿಸಿತು.

ಬಾಲಕರ ವಿಭಾಗದಲ್ಲಿ ಎಮ್ಮಿಗನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಂಡವು ಮುಷ್ಟಗಟ್ಟೆ ಮುರಾರ್ಜಿ ದೇಸಾಯಿ ವಸತಿ ಶಾಲೆ ತಂಡದ ವಿರುದ್ಧ 24-7, 1-14 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಯಿತು.

ಖೋಖೋ ಬಾಲಕರ ವಿಭಾಗದಲ್ಲಿ ವದ್ದಟ್ಟಿ ಮತ್ತು ಓರ‌್ವಾಯಿ ತಂಡ ಅಂತಿಮ ಸುತ್ತಿನ ಸೆಣಸಾಟದ ವೇಳೆ ತೀರ್ಪುಗಾರರು ಸರಿಯಾಗಿ ಗಮನಿಸದೆ ಪಾಯಿಂಟ್ ನೀಡಿದ್ದರಿಂದ ಗೊಂದಲಮಯ ವಾತಾವರಣ ನಿರ್ಮಾಣವಾಯಿತು. ಹೀಗಾಗಿ ತೀರ್ಪುಗಾರರು ಫಲಿತಾಂಶ ತಡೆ ಹಿಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net