ಐಪಿಎಲ್​ ಹರಾಜಿನಲ್ಲಿ ಗೆದ್ದಿದ್ದು ಈ ತಂಡ... ಕ್ರಿಕೆಟ್​ ಪ್ರಿಯರ ಕುತೂಹಲ ಹೆಚ್ಚಿಸಿದ ಕೆವಿನ್ ಪೀಟರ್ಸನ್ | IPL Auction

IPL Auction
Published on

ನವದೆಹಲಿ: ಎರಡು ದಿನಗಳ ಕಾಲ (ನ.24,25) ನಡೆದ ಐಪಿಎಲ್​ ಹರಾಜಿನಲ್ಲಿ (IPL Auction) ಸ್ಟಾರ್​ ಆಟಗಾರರ ಜತೆ ಯುವ ಕ್ರಿಕೆಟಿಗರನ್ನು ಖರೀದಿ ಮಾಡಿದ 10 ಫ್ರಾಂಚೈಸಿಗಳು, ನಾ ಮುಂದು ತಾ ಮುಂದು ಎಂದು ಬಿಡ್ಡಿಂಗ್​ನಲ್ಲಿ ಪೈಪೋಟಿ ಕೊಟ್ಟು ತಂಡಕ್ಕೆ ಅಗತ್ಯವಿದ್ದ ಆಟಗಾರರನ್ನು ಕರೆದುಕೊಳ್ಳುವಲ್ಲಿ ಇದೀಗ ಯಶಸ್ವಿಯಾಗಿದೆ. ಸದ್ಯ ಹರಾಜು ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಇದೇ ತಂಡದ ಪಾಲಾಗ್ತಾರೆ ಎಂದು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಆಟಗಾರರು ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಆಯಾ ಟೀಮ್​ಗಳನ್ನು ಸೇರಿಕೊಂಡಿದ್ದೇ ಆದರೂ ಪೂರ್ಣ ಪ್ರಮಾಣದ ಸಂತಸ ಕ್ರಿಕೆಟ್ ಪ್ರಿಯರಿಗೆ ಸಿಕ್ಕಿಲ್ಲ. ಅದಕ್ಕೆ ಒಂದಷ್ಟು ತಂಡಗಳ ಮ್ಯಾನೇಜ್​ಮೆಂಟ್​ ತೆಗೆದುಕೊಂಡ ನಿರ್ಧಾರಗಳೇ ಸಾಕ್ಷಿ. ಇನ್ನು ಐಪಿಎಲ್​ನ 10 ತಂಡಗಳ ಪೈಕಿ ಯಾರು ಅದ್ಭುತವಾಗಿ ಬಿಡ್ಡಿಂಗ್​ ಮಾಡಿದರು? ಯಾರು ಅತ್ಯುತ್ತಮ ಪೈಪೋಟಿ ನೀಡಿದರು ಎಂಬುದನ್ನು ಇಂಗ್ಲೆಂಡ್​ನ ಮಾಜಿ ಕ್ರಿಕೆಟಿಗ ಕೆವಿನ್​ ಪೀಟರ್ಸನ್​ ಹೆಸರಿಸಿದ್ದಾರೆ.

ಐಪಿಎಲ್​ ಹರಾಜಿನ ಇತಿಹಾಸದಲ್ಲಿ 27 ಕೋಟಿ ರೂ. ಮೊತ್ತಕ್ಕೆ ಖರೀದಿಯಾದ ಸ್ಟಾರ್​ ಆಟಗಾರ ಎಂಬ ಪಟ್ಟಿಗೆ ರಿಷಬ್ ಪಂತ್ ಸೇರಿದರೆ, ನಂತರದಲ್ಲಿ ಶ್ರೇಯಸ್​ ಅಯ್ಯರ್​ ಇದ್ದಾರೆ. ಪಂತ್​ ಲಖನೌ ಸೂಪರ್ ಜೈಂಟ್ಸ್​ ತಂಡದ ಪಾಲಾದರೆ, ಅಯ್ಯರ್​ ಪಂಜಾಬ್​ ಕಿಂಗ್ಸ್​ ಸೇರಿಕೊಂಡಿದ್ದಾರೆ. ಒಟ್ಟಾರೆ ಎರಡು ತಂಡಗಳಿಗೂ ಹೊಸ ಕ್ಯಾಪ್ಟನ್​ಗಳು ಆಯ್ಕೆಯಾಗಿದ್ದು, ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದಾರೆ. ಇನ್ನು ಬಿಡ್ಡಿಂಗ್​ನಲ್ಲಿ ಯಾವ ತಂಡ ಗೆದ್ದಿತು ಎಂಬುದನ್ನು ಹಂಚಿಕೊಂಡಿರುವ ಕೆವಿನ್​, ನನ್ನ ನೆಚ್ಚಿನ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿಯ ಆಕ್ಷನ್​ನಲ್ಲಿ ಜಯ ಸಾಧಿಸಿದೆ. ಈಗ ಮೈದಾನದಲ್ಲಿ ಗೆಲ್ಲುವ ಸಮಯ ಎಂದು ತಮ್ಮ ಟ್ವಿಟರ್ (ಪ್ರಸ್ತುತ ಎಕ್ಸ್​)​ ಖಾತೆಯಲ್ಲಿ ಬರೆದು ಹಂಚಿಕೊಂಡಿದ್ದಾರೆ.

ಐಪಿಎಲ್​ 2025ರ ಡೆಲ್ಲಿ ಕ್ಯಾಪಿಟಲ್ಸ್ ತಂಡ

ಕೆ.ಎಲ್​. ರಾಹುಲ್​ (ಕ್ಯಾಪ್ಟನ್​), ಮೋಹಿತ್ ಶರ್ಮಾ, ಫಾಫ್ ಡು ಪ್ಲೆಸಿಸ್, ಮುಖೇಶ್ ಕುಮಾರ್, ದರ್ಶನ್ ನಲ್ಕಂಡೆ, ವಿಪ್ರಜ್ ನಿಗಮ್, ದುಷ್ಮಂತ ಚಮೀರಾ, ಡೊನೊವನ್ ಫೆರೇರಾ, ಅಜಯ್ ಮಂಡಲ್, ಮನ್ವಂತ್ ಕುಮಾರ್, ತ್ರಿಪುರಾಣ ವಿಜಯ್, ಮಾಧವ್ ತಿವಾರಿ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಟ್ರಿಸ್ಟಾನ್ ಸ್ಟಬ್ಸ್, ಅಭಿಷೇಕ್ ಪೊರೆಲ್, ಮಿಚೆಲ್, ಮಿಚೆಲ್ ರಾಹುಲ್, ಹ್ಯಾರಿ ಬ್ರೂಕ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಟಿ.ನಟರಾಜನ್, ಕರುಣ್ ನಾಯರ್, ಸಮೀರ್ ರಿಜ್ವಿ, ಅಶುತೋಷ್ ಶರ್ಮಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net