

ಲಂಡನ್: ಕ್ರಿಕೆಟ್ ಆಟವನ್ನು ಇನ್ನಷ್ಟು ಆಸಕ್ತಿದಾಯಕವಾಗಿಸಲು ಸ್ಕೋರಿಂಗ್ ಪದ್ಧತಿಯನ್ನು ಬದಲಾಯಿಸುವ ಹೊಸ ಐಡಿಯಾವನ್ನು ಇಂಗ್ಲೆಂಡ್ನ ಮಾಜಿ ಬ್ಯಾಟರ್ ಕೆವಿನ್ ಪೀರ್ಟಸೆನ್ ಜಗತ್ತಿನ ಮುಂದಿಟ್ಟಿದ್ದಾರೆ.
100 ಮೀಟರ್ಗಿಂತ ದೂರ ಹೋಗುವ ಬೃಹತ್ ಸಿಕ್ಸರ್ಗಳಿಗೆ 12 ರನ್ಗಳನ್ನು ನೀಡಬೇಕೆಂದು ಅವರು ವಾದಿಸಿದ್ದಾರೆ. ಆಗ ಹೆಚ್ಚಿನ ಬ್ಯಾಟರ್ಗಳು ಬೃಹತ್ ಸಿಕ್ಸರ್ಗಳನ್ನು ಸಿಡಿಸಲು ಪ್ರಯತ್ನಿಸುತ್ತಾರೆ. ಇದರಿಂದ ಹೆಚ್ಚಿನ ಮನರಂಜನೆಯೂ ಸಿಗುತ್ತದೆ ಎಂದು ಪೀರ್ಟಸೆನ್ ವಿವರಿಸಿದ್ದಾರೆ. ಅವರ ಈ ಅಭಿಪ್ರಾಯಕ್ಕೆ ಕ್ರಿಕೆಟ್ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ದೊರೆತಿದೆ.
ಇದು ಅಪ್ರಾಯೋಗಿಕ ಎಂದು ಕೆಲವರು ಇದನ್ನು ತಳ್ಳಿಹಾಕಿದ್ದರೆ, ಇನ್ನು ಕೆಲವರು ಇದನ್ನು ಬೆಂಬಲಿಸಿದ್ದಾರೆ. ಬೌಲರ್ಗಳಿಗೂ ಇದೇ ರೀತಿಯ ಬಹುಮಾನ ನೀಡಬೇಕು. ಅಂದರೆ ಬೌಲರ್ ಬೌಲ್ಡ್ ಮಾಡುವಾಗ ಮಧ್ಯದ ವಿಕೆಟ್ ಉರುಳಿಸಿದರೆ, ನಂತರ ಬರಬೇಕಿರುವ ಬ್ಯಾಟರ್ ಅನ್ನು ಕೂಡ ಔಟ್ ಎಂದು ಘೋಷಿಸಬೇಕೆಂದು ಅಭಿಮಾನಿಯೊಬ್ಬರು ವಾದ ಮಂಡಿಸಿದ್ದಾರೆ.