ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ ನಡುಗಿದ್ದರಂತೆ ಈ ಕನ್ನಡಿಗ; ಎರಡನೇ ಅವಕಾಶ ವ್ಯರ್ಥವಾಯಿತೆಂದ ಇರ್ಫಾನ್ ಪಠಾಣ್ | Irfan Pathan

Karun Irfan
Published on

Irfan Pathan: ಇತ್ತೀಚೆಗೆ ಮುಕ್ತಾಯಗೊಂಡ ಆಂಡರ್ಸನ್-ತೆಂಡೂಲ್ಕರ್ ಟೂರ್ನಿಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಮರಳಿದ್ದ ಕನ್ನಡಿಗ ಕರುಣ್ ನಾಯರ್ ಬ್ಯಾಟಿಂಗ್​ ವೈಫಲ್ಯವನ್ನು ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಟೀಕಿಸಿದ್ದಾರೆ

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಇರ್ಫಾನ್, ನಾಯರ್​ಗೆ ಕ್ರಿಕೆಟ್ ನೀಡಿದ್ದ ಎರಡನೇ ಅವಕಾಶವನ್ನು ಅವರು ವ್ಯರ್ಥ ಮಾಡಿದ್ದಾರೆ, ಸರಣಿಯುದ್ದಕ್ಕೂ ಉತ್ತಮ ಆರಂಭ ಪಡೆಯುತ್ತಲೇ ಇದ್ದರು, ಆದರೆ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಿಕೊಳ್ಳುವಲ್ಲಿ ಅವರು ಎಡವಿದರು ಎಂದರು.

ಲಾರ್ಡ್ಸ್ ಟೆಸ್ಟ್​ ಪಂದ್ಯವನ್ನು ವಿಶೇಷವಾಗಿ ಉಲ್ಲೇಖಿಸಿರುವ ಹಿರಿಯ ಆಲ್​​ರೌಂಡರ್​ ಪಠಾಣ್​​, ಕರುಣ್​​ ಈ ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಕಷ್ಟು ಅವಕಾಶ ಹೊಂದಿದ್ದರು, ಆದರೆ ಅವರು ಅದನ್ನು ಬಳಸಿಕೊಳ್ಳಲಿಲ್ಲ ಎಂದರು. ಇಂಗ್ಲೆಂಡ್​​ ಸರಣಿಯಲ್ಲಿ ನಾಯರ್​​ ಬ್ಯಾಟಿಂಗ್​​ ಕೌಶಲ್ಯ ಗಮನಿಸಿದಾಗ ಚೆನ್ನಾಗಿ ಆಡುತ್ತಿದ್ದಾರೆ ಅನಿಸುತ್ತಿತ್ತು, ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಅವರು ಇದ್ದಕ್ಕಿದ್ದಂತೆ ಔಟ್ ಆಗುತ್ತಿದ್ದರು, ಆ ಸಮಯದಲ್ಲಿ ಅವರು ಸ್ವಲ್ಪ ನಡುಗಿದಂತೆ, ಅಸ್ಥಿರವಾದಂತೆ ಕಾಣುತ್ತಿದ್ದರು ಎಂದು ಅಭಿಪ್ರಾಯಪಟ್ಟರು.

ಇತ್ತೀಚಿನ ಸರಣಿಯಲ್ಲಿ ಕರುಣ್​​ 25.62 ಸರಾಸರಿಯಲ್ಲಿ ಒಂದು ಅರ್ಧಶತಕದೊಂದಿಗೆ ಕೇವಲ 205 ರನ್‌ಗಳನ್ನು ಗಳಿಸಿದ್ದು, ನಾಯರ್​ಗೆ​ ಹತ್ತರಲ್ಲಿ ನಾಲ್ಕು ಅಂಕಗಳನ್ನು ನೀಡಬಹುದೆಂದು ಪಠಾಣ್​ ತಿಳಿಸಿದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net