

ಮುಂಬೈ: ಕರ್ನಾಟಕದ ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ಹಾಗೂ 19 ವಯೋಮಿತಿ ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕಿ ನಿಕಿ ಪ್ರಸಾದ್ ಅವರನ್ನು ಮುಂಬರುವ 4ನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ಗೆ (ಡಬ್ಲುಪಿಎಲ್) ಕ್ರಮವಾಗಿ ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ರಿಟೇನ್ ಮಾಡಿಕೊಂಡಿವೆ.
ಭಾರತ ತಂಡದ ನಾಯಕಿ ಹರ್ಮಾನ್ಪ್ರೀತ್ ಕೌರ್, ಸ್ಮೃತಿ ಮಂದನಾರನ್ನು ಮುಂಬೈ, ಆರ್ಸಿಬಿ ತಂಡಗಳು ಉಳಿಸಿಕೊಂಡಿದ್ದು, ಡೆಲ್ಲಿ ತಂಡ ನಾಯಕಿ ಮೆಗ್ ಲ್ಯಾನಿಂಗ್ ಮತ್ತು ಯುಪಿ ವಾರಿಯರ್ಸ್ ತಂಡ ದೀಪ್ತಿ ಶರ್ಮರನ್ನು ಕೈಬಿಟ್ಟು ಅಚ್ಚರಿ ಮೂಡಿಸಿದೆ. ನ.27ಕ್ಕೆ ಆಟಗಾರ್ತಿಯರ ಮೆಗಾ ಹರಾಜು ನಡೆಯಲಿದೆ.
ಸ್ಮೃತಿ ಮಂದನಾ, ನ್ಯಾಟ್ ಸೀವರ್ ಬ್ರಂಟ್ ಮತ್ತು ಆಶ್ಲೆ ಗಾರ್ಡ್ನರ್ ಸರ್ವಾಧಿಕ 3.5 ಕೋಟಿ ರೂ. ಮೊತ್ತಕ್ಕೆ ರಿಟೇನ್ ಆಗಿದ್ದಾರೆ.
ರಿಟೇನ್ ಆಟಗಾರ್ತಿರು: ಮುಂಬೈ ಇಂಡಿಯನ್ಸ್: ಹರ್ಮಾನ್ಪ್ರೀತ್ ಕೌರ್ (2.5 ಕೋಟಿ ರೂ.), ನ್ಯಾಟ್ ಸೀವರ್ ಬ್ರಂಟ್ (3.5 ಕೋಟಿ ರೂ), ಅಮನ್ಜೋತ್ ಕೌರ್ (1 ಕೋಟಿ ರೂ.), ಜಿ.ಕಮಿಲಿನಿ (50 ಲಕ್ಷ ರೂ.), ಹ್ಯಾಲೆ ಮ್ಯಾಥ್ಯೂಸ್ (1.75 ಕೋಟಿ ರೂ.);
ಡೆಲ್ಲಿ ಕ್ಯಾಪಿಟಲ್ಸ್: ಅನ್ನಾಬೆಲ್ ಸುದರ್ಲ್ಯಾಂಡ್ (2.2 ಕೋಟಿ ರೂ), ಮಾರಿಜಾನ್ನೆ ಕಾಪ್ (2.2 ಕೋಟಿ ರೂ), ಜೆಮೀಮಾ ರೋಡ್ರಿಗಸ್ (2.2 ಕೋಟಿ ರೂ.), ಶೆಾಲಿ ವರ್ಮ (2.2 ಕೋಟಿ ರೂ.), ನಿಕಿ ಪ್ರಸಾದ್ (50 ಲಕ್ಷ ರೂ);
ಆರ್ಸಿಬಿ: ಸ್ಮೃತಿ ಮಂದನಾ (3.5 ಕೋಟಿ ರೂ), ಎಲ್ಲಿಸ್ ಪೆರ್ರಿ (2 ಕೋಟಿ ರೂ), ರಿಚಾ ಘೋಷ್ (2.75 ಕೋಟಿ ರೂ), ಶ್ರೇಯಾಂಕಾ ಪಾಟೀಲ್ (60 ಲಕ್ಷ ರೂ);
ಗುಜರಾತ್ ಜೈಂಟ್ಸ್: ಆಶ್ಲೇ ಗಾರ್ಡ್ನರ್ (3.5 ಕೋಟಿ ರೂ), ಬೆಥ್ ಮೂನಿ (2.5 ಕೋಟಿ ರೂ;
ಯುಪಿ ವಾರಿಯರ್ಸ್: ಶ್ವೇತಾ ಸೆಹ್ರಾವತ್ (50 ಲಕ್ಷ ರೂ.).