ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ; ವಿದರ್ಭ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ ಕರ್ನಾಟಕ

ktk win FOR WEB
Published on

ನವದೆಹಲಿ: ಅಂತಿಮ ಕ್ಷಣದವರೆಗೂ ಕುತೂಹಲ ಕಾಯ್ದುಕೊಂಡ ಹಣಾಹಣಿಯಲ್ಲಿ ಎರಡು ಬಾರಿ ಚಾಂಪಿಯನ್ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ವಿದರ್ಭ ತಂಡದ ಎದುರು ರೋಚಕ ಜಯ ದಾಖಲಿಸಿತು. ಅರುಣ್ ಜೇಟ್ಲಿ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ 4 ರನ್‌ಗಳಿಂದ ಜಯ ದಾಖಲಿಸಿ 3ನೇ ಬಾರಿಗೆ ಫೈನಲ್ ಪ್ರವೇಶಿಸಿತು. ಟೂರ್ನಿಯಲ್ಲಿ ಅಜೇಯ ಸಾಧಿಸಿದ್ದ ಮಾಡಿದ್ದ ವಿದರ್ಭ ತಂಡದ ಚೊಚ್ಚಲ ಪ್ರಶಸ್ತಿ ಸುತ್ತಿನ ಕನಸು ಭಗ್ನಗೊಂಡಿತು.

ಟಾಸ್ ಜಯಿಸಿದ ವಿದರ್ಭ ತಂಡದ ನಾಯಕ ಅಕ್ಷಯ್ ವಾಡ್ಕರ್ ಕರ್ನಾಟಕ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. ರೋಹನ್ ಕದಂ (87ರನ್, 56 ಎಸೆತ, 7 ಬೌಂಡರಿ, 4 ಸಿಕ್ಸರ್) ಹಾಗೂ ನಾಯಕ ಮನೀಷ್ ಪಾಂಡೆ (54ರನ್, 42 ಎಸೆತ, 2 ಬೌಂಡರಿ, 3 ಸಿಕ್ಸರ್) ಜೋಡಿ ಮೊದಲ ವಿಕೆಟ್‌ಗೆ ಪೇರಿಸಿದ 132 ರನ್ ಲವಾಗಿ ಕರ್ನಾಟಕ ತಂಡ 7 ವಿಕೆಟ್‌ಗೆ 176 ರನ್ ಕಲೆಹಾಕಿತು. ಪ್ರತಿಯಾಗಿ ವಿದರ್ಭ ತಂಡ ಬ್ಯಾಟರ್‌ಗಳ ಸಂಘಟಿತ ಹೋರಾಟದ ನಡುವೆಯೂ 6 ವಿಕೆಟ್‌ಗೆ 172 ರನ್‌ಗಳಿಸಲಷ್ಟೇ ಶಕ್ತವಾಯಿತು.

ಕರ್ನಾಟಕ: 7 ವಿಕೆಟ್‌ಗೆ 176 (ರೋಹನ್ ಕದಂ 87, ಮನೀಷ್ ಪಾಂಡೆ 54, ಅಭಿನವ್ ಮನೋಹರ್ 27, ದರ್ಶನ್ ನಲ್ಕಂಡೆ 28ಕ್ಕೆ 4, ಲಲಿತ್ ಎಂ ಯಾದವ್ 36ಕ್ಕೆ 2), ವಿದರ್ಭ: 6 ವಿಕೆಟ್‌ಗೆ 172 (ಅಥರ್ವ ತೈದೆ 32, ಗಣೇಶ್ ಸತೀಶ್ 31, ಶುಭಮ್ ದುಬೆ 24, ಅಪೂರ್ವ ವಾಂಖೆಡೆ 27*, ಅಕ್ಷಯ್ ಕಣೇವರ್ 22, ಕೆಸಿ ಕಾರ್ಯಪ್ಪ 27ಕ್ಕೆ 2, ದರ್ಶನ್ ಎಂಬಿ 39ಕ್ಕೆ 1, ವಿದ್ಯಾಧರ್ ಪಾಟೀಲ್ 29ಕ್ಕೆ 1, ಜೆ.ಸುಚಿತ್ 34ಕ್ಕೆ 1, ಕರುಣ್ ನಾಯರ್ 10ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net