ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತರಾಖಂಡ ಎದುರು ಕರ್ನಾಟಕ ತಂಡಕ್ಕೆ ಜಯ: ದೇವದತ್ ಪಡಿಕಲ್ ಶತಕ

New-Project-2-2
Published on

ಅಹಮದಾಬಾದ್: ಎಡಗೈ ಬ್ಯಾಟರ್ ದೇವದತ್ ಪಡಿಕಲ್ (117 ರನ್, 122 ಎಸೆತ, 13 ಬೌಂಡರಿ, 5 ಸಿಕ್ಸರ್) ಆಕರ್ಷಕ ಶತಕದ ಬಲದಿಂದ ಕರ್ನಾಟಕ ತಂಡ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿ ವಿಜಯ್ ಹಜಾರೆ ಟ್ರೋಫಿಯ ತನ್ನ 2ನೇ ಪಂದ್ಯದಲ್ಲಿ ಉತ್ತರಾಖಂಡ ಎದುರು 52 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇರೊಂದಿಗೆ ಮಯಾಂಕ್ ಅಗರ್ವಾಲ್ ಪಡೆ ಸತತ ಎರಡನೇ ಜಯ ಕಂಡಿದೆ.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಕರ್ನಾಟಕ, ದೇವದತ್ ಪಡಿಕಲ್ ಹಾಗೂ ನಿಕಿನ ಜೋಸ್ (72 ರನ್, 82 ಎಸೆತ, 3 ಬೌಂಡರಿ, 3 ಸಿಕ್ಸರ್) ಜೋಡಿ ಮೂರನೇ ವಿಕೆಟ್‌ಗೆ ಕಲೆಹಾಕಿದ 131 ರನ್‌ಗಳ ಜತೆಯಾಟದ ನೆರವಿನಿಂದ 7 ವಿಕೆಟ್‌ಗೆ 284 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಪ್ರತಿಯಾಗಿ ವಿ. ಕೌಶಿಕ್ (30ಕ್ಕೆ4) ಮಾರಕ ದಾಳಿಯ ನಡುವೆಯೂ, ಕುನಲ್ ಚಂಡೇಲಾ (98) ಹೋರಾಟದಿಂದ ಉತ್ತರಾಖಂಡ 9 ವಿಕೆಟ್‌ಗೆ 232 ರನ್‌ಗಳಿಸಲಷ್ಟೇ ಶಕ್ತವಾಯಿತು.

ಕರ್ನಾಟಕ: 7 ವಿಕೆಟ್‌ಗೆ 284 (ಸಮರ್ಥ್ 11, ಮಯಾಂಕ್ 0, ಪಡಿಕಲ್ 117, ನಿಕಿನ್ 72, ಮನೀಷ್ ಪಾಂಡೆ 56, ಅಗ್ರಿಮ್ ತಿವಾರಿ 45ಕ್ಕೆ3). ಉತ್ತರಾಖಂಡ 9 ವಿಕೆಟ್‌ಗೆ 232 (ಯುವರಾಜ್ 13, ಜೀವನ್‌ಜೋತ್ 46, ದಿಕ್ಷಾಂಶು ನೇಗಿ 21, ಕುನಲ್ 98, ವಿ. ಕೌಶಿಕ್ 30ಕ್ಕೆ4, ವಿದ್ವತ್ 51ಕ್ಕೆ2).

ಪಡಿಕಲ್-ನಿಕಿನ್ ಆಸರೆ

ರಾಜ್ಯದ ಆರಂಭಿಕರಾದ ಮಯಾಂಕ್ ಅಗರ್ವಾಲ್-ಆರ್. ಸಮರ್ಥ್ ಜೋಡಿ ಉತ್ತಮ ಆರಂಭ ಒದಗಿಸಲು ವಿಲವಾಯಿತು. 3ನೇ ವಿಕೆಟ್‌ಗೆ ಜತೆಯಾದ ದೇವದತ್ ಪಡಿಕಲ್ ಹಾಗೂ ನಿಕಿನ್ ಜೋಸ್ ತಂಡಕ್ಕೆ ಆಸರೆಯಾದರು. ಉತ್ತರಾಖಂಡ ಬೌಲರ್‌ಗಳ ಎದುರು ದಿಟ್ಟ ಬ್ಯಾಟಿಂಗ್ ನಡೆಸಿದ ದೇವದತ್ ಪಡಿಕಲ್ ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ 7ನೇ ಶತಕ ದಾಖಲಿಸಿದರು. ಇವರಿಗೆ ಸಾಥ್ ನೀಡಿದ ನಿಕಿನ್ ಜೋಸ್ ಅರ್ಧಶತಕ ಬಾರಿಸಿದರು. ಇವರಿಬ್ಬರು 143 ಎಸೆತಗಳಲ್ಲಿ 132 ರನ್ ಕಸಿದರು. ಪಡಿಕಲ್ ನಿರ್ಗಮನ ಬಳಿಕ ನಿಕಿನ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net