ಇಂದಿನಿಂದ ರಣಜಿ ಹಣಾಹಣಿ: ಹೊಸ ಹುರುಪಿನಲ್ಲಿ ಕರ್ನಾಟಕ ತಂಡ, ವೇಳಾಪಟ್ಟಿ , ಗುಂಪುಗಳ ವಿವರ ಇಲ್ಲಿದೆ!

New-Project-1-3
Published on

ಹುಬ್ಬಳ್ಳಿ/ಬೆಂಗಳೂರು: ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಹಬ್ಬ ರಣಜಿ ಟ್ರೋಫಿಯ 89ನೇ ಆವೃತ್ತಿಗೆ ಶುಕ್ರವಾರ ಚಾಲನೆ ಸಿಗಲಿದೆ. ಎಂಟು ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಸಿ ಗುಂಪಿನಲ್ಲಿದ್ದು, ತನ್ನ ಮೊದಲ ಪಂದ್ಯದಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ಚಾಂಪಿಯನ್ ಪಂಜಾಬ್ ಸವಾಲು ಎದುರಿಸಲಿದೆ. ಹುಬ್ಬಳ್ಳಿಯ ರಾಜನಗರ ಕೆಎಸ್‌ಸಿಎ ಮೈದಾನದಲ್ಲಿ ಈ ಪಂದ್ಯ ನಡೆಯಲಿದ್ದು, ಮಯಾಂಕ್ ಅಗರ್ವಾಲ್ ಪಡೆ ಶುಭಾರಂಭ ಕಾಣುವ ತವಕದಲ್ಲಿದೆ.

ಈ ಬಾರಿ ಒಂದೇ ಹಂತದಲ್ಲಿ ಸತತ 10 ವಾರ ಟೂರ್ನಿ ಆಯೋಜಿಸಲಾಗಿದೆ. ೆಬ್ರವರಿ ಅಂತ್ಯದವರೆಗೆ ಲೀಗ್ ಹಂತ ನಡೆದರೆ, ಮಾರ್ಚ್‌ನಲ್ಲಿ ೈನಲ್ ಪಂದ್ಯ ನಡೆಯಲಿದೆ. 38 ತಂಡಗಳ ಟೂರ್ನಿಯಲ್ಲಿ ಒಟ್ಟು 138 ಪಂದ್ಯಗಳು 48 ತಾಣಗಳಲ್ಲಿ ನಡೆಯಲಿವೆ. ಸೌರಾಷ್ಟ್ರ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲಿದೆ. ಕರ್ನಾಟಕ ತಂಡ ತನ್ನ ಗುಂಪಿನಲ್ಲಿ ಸಾಂಪ್ರದಾಯಿಕ ಎದುರಾಳಿ ತಮಿಳುನಾಡಿನ ಸವಾಲನ್ನೂ ಎದುರಿಸಲಿದೆ. ಸೌರಾಷ್ಟ್ರ, ಎರಡು ಬಾರಿ ಚಾಂಪಿಯನ್ ವಿದರ್ಭ, ವಿಜಯ್ ಹಜಾರೆ ಟ್ರೋಫಿ ಚಾಂಪಿಯನ್ ಹರಿಯಾಣ ಎ ಗುಂಪಿನಲ್ಲಿವೆ. 41 ಬಾರಿಯ ಚಾಂಪಿಯನ್ ಮುಂಬೈ, ಆಂಧ್ರ, ಹಾಲಿ ರನ್ನರ್ ಅಪ್ ಬಂಗಾಳ ಬಿ ಗುಂಪಿನಲ್ಲಿವೆ.

ಗುಂಪುಗಳು:

ಎ: ಹರಿಯಾಣ, ಜಾರ್ಖಂಡ್, ಮಹಾರಾಷ್ಟ್ರ, ಮಣಿಪುರ, ರಾಜಸ್ಥಾನ, ಸೌರಾಷ್ಟ್ರ, ಸರ್ವೀಸಸ್, ವಿದರ್ಭ.

ಬಿ: ಆಂಧ್ರ, ಅಸ್ಸಾಂ, ಬಂಗಾಳ, ಬಿಹಾರ, ಛತ್ತೀಸ್‌ಗಢ, ಕೇರಳ, ಮುಂಬೈ, ಉತ್ತರ ಪ್ರದೇಶ.

ಸಿ: ಕರ್ನಾಟಕ, ಚಂಡೀಗಢ, ಗೋವಾ, ಗುಜರಾತ್, ಪಂಜಾಬ್, ರೈಲ್ವೇಸ್, ತಮಿಳುನಾಡು, ತ್ರಿಪುರ.

ಡಿ: ಬರೋಡ, ದೆಹಲಿ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಮಧ್ಯಪ್ರದೇಶ, ಒಡಿಶಾ, ಪುದುಚೇರಿ, ಉತ್ತರಾಖಂಡ.

ಪ್ಲೇಟ್: ನಾಗಾಲ್ಯಾಂಡ್, ಹೈದರಾಬಾದ್, ಮೇಘಾಲಯ, ಸಿಕ್ಕಿಂ, ಮಿಜೋರಾಂ, ಅರುಣಾಚಲಪ್ರದೇಶ.

ಕರ್ನಾಟಕದ ಪಂದ್ಯಗಳು

ದಿನಾಂಕ ಎದುರಾಳಿ ಸ್ಥಳ

ಜನವರಿ 5-8 ಪಂಜಾಬ್  ಹುಬ್ಬಳ್ಳಿ

ಜನವರಿ 12-15 ಗುಜರಾತ್  ಅಹಮದಾಬಾದ್

ಜನವರಿ 19-22 ಗೋವಾ  ಮೈಸೂರು

ಜನವರಿ 26-29 ತ್ರಿಪುರ  ಅಗರ್ತಲಾ

ೆಬ್ರವರಿ 2-5 ರೈಲ್ವೇಸ್  ಸೂರತ್

ೆಬ್ರವರಿ 9-12 ತಮಿಳುನಾಡು  ಚೆನ್ನೈ

ೆಬ್ರವರಿ 16-19 ಚಂಡೀಗಢ  ಹುಬ್ಬಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net