ದೇಶೀಯ ಟಿ20 ಟೂರ್ನಿಯಲ್ಲಿ ಕರ್ನಾಟಕಕ್ಕೆ ಇಂದು ಬರೋಡ ಎದುರಾಳಿ

kar web
Published on

ಗುವಾಹಟಿ: ಹ್ಯಾಟ್ರಿಕ್ ಜಯದೊಂದಿಗೆ ವಿಶ್ವಾಸದಿಂದ ಬೀಗುತ್ತಿರುವ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯಲ್ಲಿ ಸೋಮವಾರ ಬರೋಡ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲೂ ಜಯಿಸಿದರೆ ಮನೀಷ್ ಪಾಂಡೆ ಬಳಗಕ್ಕೆ ನಾಕೌಟ್ ಪ್ರವೇಶ ಬಹುತೇಕ ಖಚಿತವಾಗಲಿದೆ.

ಮೊದಲ 3 ಪಂದ್ಯಗಳಲ್ಲಿ ಮುಂಬೈ, ಛತ್ತೀಸ್‌ಗಢ ಮತ್ತು ಸರ್ವೀಸಸ್ ವಿರುದ್ಧ ಜಯಿಸಿರುವ 2 ಬಾರಿಯ ಚಾಂಪಿಯನ್ ಕರ್ನಾಟಕ ತಂಡ, ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡರೆ ಕ್ವಾರ್ಟರ್​ಫೈನಲ್‌ಗೆ ನೇರಅರ್ಹತೆ ಪಡೆಯುವ ಅವಕಾಶ ಹೊಂದಿದೆ. 2ನೇ ಸ್ಥಾನಕ್ಕಿಳಿದರೆ ಪ್ರಿ ಕ್ವಾರ್ಟರ್​ಫೈನಲ್‌ನಲ್ಲಿ ಆಡಬೇಕಾಗುತ್ತದೆ.

ಮತ್ತೊಂದೆಡೆ ಟಿ20 ತಜ್ಞ ಆಟಗಾರರಿಂದ ಕೂಡಿರುವ ಬರೋಡ ತಂಡ ಇದುವರೆಗೆ ಆಡಿದ 3 ಪಂದ್ಯಗಳಲ್ಲಿ 1ರಲ್ಲಷ್ಟೇ ಗೆದ್ದು, 2ರಲ್ಲಿ ಸೋತಿದೆ. ಹೀಗಾಗಿ ನಾಕೌಟ್ ಆಸೆ ಜೀವಂತವಿಡಲು ಕೃನಾಲ್ ಪಾಂಡ್ಯ ಬಳಗಕ್ಕೂ ಗೆಲುವು ಅನಿವಾರ‌್ಯವಾಗಿದೆ.
*ಪಂದ್ಯ ಆರಂಭ: ಮಧ್ಯಾಹ್ನ 12.30

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net