ಏಷ್ಯನ್ ಪವರ್‌ಲಿಫ್ಟಿಂಗ್‌ನಲ್ಲಿ ಭಾರತದ ದಿಶಾಗೆ ಚಿನ್ನದ ಪದಕ

Disha
Published on

ಬೆಂಗಳೂರು: ಇತ್ತೀಚೆಗೆ ನಡೆದ 2024ರ ಏಷ್ಯನ್ ಪವರ್‌ಲಿಫ್ಟಿಂಗ್ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದ್ದು, ಪವರ್‌ಲಿಫ್ಟಿಂಗ್‌ನಲ್ಲಿ ಕರ್ನಾಟಕದ ಮೂಲದ ದಿಶಾ ಮೋಹನ್ ಚಿನ್ನದ ಪದಕ ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ.

ದಿಶಾ ಮೋಹನ್ ಚಿನ್ನದ ಪದಕಕ್ಕೆ ಭಾಜನರಾದರೆ; ಮಂಗೋಲಿಯಾದ ಸ್ಪರ್ಧಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

18 ವರ್ಷದ ದಿಶಾ ಮೋಹನ್ ವಿದ್ಯಾರ್ಥಿಯಾಗಿದ್ದು, 2 ವರ್ಷದಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯ ಫಲವಾಗಿ ದಿಶಾ ಮೋಹನ್ ಸಾಧನೆಗೆ ಜಾಗತಿಕ ಮನ್ನಣೆ ಸಿಕ್ಕಿದೆ.

ದಿಶಾ ಮೋಹನ್ ಜೆಪಿ ನಗರದ ಬಾಲರ್ಕ್ ಫಿಟ್ನೆಸ್ ಸೆಂಟರ್‌ನಲ್ಲಿ ಕೋಚ್ ವಿಶ್ವನಾಥ್ ಭಾಸ್ಕರ್ ಗಾಣಿಗ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದರು. ದಿಶಾ ಸಾಧನೆಗೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net