ಕರ್ನಾಟಕ ಅಂಧರ ಕ್ರಿಕೆಟ್​ ತಂಡಕ್ಕೆ ಜವರೇಗೌಡ ನಾಯಕ, ಪ್ರಕಾಶ್​ ಉಪನಾಯಕ

blind cricket web
Published on

ಬೆಂಗಳೂರು: ಕರ್ನಾಟಕ ಅಂಧರ ಕ್ರಿಕೆಟ್ ಸಂಸ್ಥೆ (ಕೆಸಿಎಬಿ) ಮತ್ತು ಸಮರ್ಥನಂ ಅಂಗವಿಕಲರ ಸಂಸ್ಥೆ ಕರ್ನಾಟಕ ಪುರುಷರ ಅಂಧರ ಕ್ರಿಕೆಟ್ ತಂಡಕ್ಕೆ ಜವರೇಗೌಡ ಅವರನ್ನು ನಾಯಕ ಮತ್ತು ಪ್ರಕಾಶ್​ ಜಯರಾಮಯ್ಯ ಅವರನ್ನು ಉಪನಾಯಕರನ್ನಾಗಿ ನೇಮಿಸಿದೆ.

ಡಿಸೆಂಬರ್ 4ರಿಂದ 8ರವರೆಗೆ ಕರ್ನಾಟಕ ಅಂಧರ ಕ್ರಿಕೆಟ್ ತಂಡದ ಬಿ ಗುಂಪಿನ ಲೀಗ್ ಪಂದ್ಯಗಳನ್ನು ಡೆಹ್ರಾಡೂನ್​ನಲ್ಲಿ ಆಡಲಿದೆ. ಕರ್ನಾಟಕ ತಂಡ ಮಹಾರಾಷ್ಟ್ರ, ಪಾಂಡಿಚೇರಿ, ದೆಹಲಿ ಮತ್ತು‌ ಉತ್ತರಾಖಂಡ ವಿರುದ್ಧ ಒಟ್ಟು 4 ಲೀಗ್ ಪಂದ್ಯಗಳನ್ನು ಆಡಲಿದೆ. ಗುಂಪಿನ ಅಗ್ರ 2 ತಂಡಗಳು ಮುಂದಿನ ಸುತ್ತಿಗೆ ತೆರಳಲಿವೆ.

2023-24ರ ಇಂಡಸ್‌ಇಂಡ್ ಬ್ಯಾಂಕ್ ನಾಗೇಶ್ ಟ್ರೋಫಿ ಪುರುಷರ ರಾಷ್ಟ್ರೀಯ ಟಿ20 ಕ್ರಿಕೆಟ್‌ಗಾಗಿ ಕರ್ನಾಟಕ ಪುರುಷರ ತಂಡ:

ಬಿ1 ವರ್ಗದ ಆಟಗಾರರು (ಸಂಪೂರ್ಣ ಅಂಧರು)

1. ಶರತ್ ಬಿ ಎನ್ - ಬೆಂಗಳೂರು ಗ್ರಾಮಾಂತರ

2. ಗುಡದಪ್ಪ ಅರಿಕೆರೆ - ಕೊಪ್ಪಳ

3. ಬಸವರಾಜ ಎಂ ಹುಲ್ಲೇನವರ್ - ಬೆಳಗಾವಿ

4. ಕೃಷ್ಣಮೂರ್ತಿ - ಚಿತ್ರದುರ್ಗ

5. ಶ್ರೀನಾಥ್ - ಬೆಂಗಳೂರು ಗ್ರಾಮಾಂತರ

ಬಿ2 ವರ್ಗದ ಆಟಗಾರರು (2 ಮೀಟರ್‌ವರೆಗೆ ನೋಡಬಹುದಾದ ಆಟಗಾರರು)

6. ಲೋಕೇಶ - ಕೊಪ್ಪಳ

7. ಜವರೇಗೌಡ ಬಿ (ನಾಯಕ) - ರಾಮನಗರ

8. ಭಾಸ್ಕರ್ ಕೆ - ಬೆಂಗಳೂರು ಗ್ರಾಮಾಂತರ

9. ಅಭಿ ಎ ಎಸ್ - ಮೈಸೂರು

ಬಿ3 ವರ್ಗದ ಆಟಗಾರರು (6 ಮೀಟರ್‌ವರೆಗೆ ನೋಡಬಹುದಾದ ಆಟಗಾರರು)

10.ಪ್ರಕಾಶ ಜಯರಾಮಯ್ಯ (ಉಪನಾಯಕ) - ರಾಮನಗರ

11. ಸುನಿಲ್ ಆರ್ - ಚಿಕ್ಕಮಗಳೂರು

12. ಸಾಯಿ ಕೃಷ್ಣ ಎಂ - ಬೆಂಗಳೂರು ನಗರ

13. ಹುಸೇನ್ - ಕೊಪ್ಪಳ

14. ತಾಯಪ್ಪ - ಬೆಂಗಳೂರು ನಗರ

ಕೋಚ್: ಆಸಿಫ್ ಬಾಷಾ ಎಸ್

ಮ್ಯಾನೇಜರ್​: ಚಂದ್ರಕಾಂತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net