

ಅಗರ್ತಲ: ವೇಗಿಗಳಾದ ವಿದ್ವತ್ ಕಾವೇರಪ್ಪ (44ಕ್ಕೆ 4) ಹಾಗೂ ವೈಶಾಕ್ ವಿಜಯ್ ಕುಮಾರ್ (62ಕ್ಕೆ 3) ಸಂಟಿತ ದಾಳಿಯ ನೆರವಿನಿಂದ ಪ್ರವಾಸಿ ಕರ್ನಾಟಕ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಗೆಲುವಿನ ಹಳಿಗೆ ಮರಳಿದೆ. ಬ್ಯಾಟರ್ ಸುದೀಪ್ ಚಟರ್ಜಿ (82 ರನ್, 144 ಎಸೆತ, 10 ಬೌಂಡರಿ) ಪ್ರತಿರೋದ ನಡುವೆಯೂ ಎಂಟು ಬಾರಿಯ ಚಾಂಪಿಯನ್ ಕರ್ನಾಟಕ ತಂಡ 29 ರನ್ಗಳಿಂದ ತ್ರಿಪುರ ತಂಡವನ್ನು ಮಣಿಸಿತು. ಇದರೊಂದಿಗೆ ಮಯಾಂಕ್ ಅಗರ್ವಾಲ್ ಬಳಗ "ಸಿ' ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಎಂಬಿಬಿ ಕ್ರೀಡಾಂಗಣದಲ್ಲಿ ಸೋಮವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಕರ್ನಾಟಕದ 193 ರನ್ಗಳ ಗುರಿಗೆ ಎರಡನೇ ಸರದಿಯಲ್ಲಿ 3 ವಿಕೆಟ್ಗೆ 59 ರನ್ಗಳಿಂದ ದಿನದ ಆಟ ಆರಂಭಿಸಿದ ತ್ರಿಪುರ 55.2 ಓವರ್ಗಳಲ್ಲಿ 163 ರನ್ಗಳಿಗೆ ಆಲೌಟ್ ಆಯಿತು. ಗೆಲುವಿನೊಂದಿಗೆ ಪೂರ್ಣ ಆರು ಅಂಕ ಕಲೆಹಾಕಿದ ಕರ್ನಾಟಕ, ಸಿ ಗುಂಪಿನ ಅಂಕಪಟ್ಟಿಯಲ್ಲಿ ಆಡಿದ 4 ಪಂದ್ಯಗಳಿಂದ ಒಟ್ಟು 15 ಅಂಕ ಕಲೆಹಾಕಿದೆ.
ಕರ್ನಾಟಕ: 241 ಹಾಗೂ 151.
ತ್ರಿಪುರ: 200 ಹಾಗೂ 55.2 ಓವರ್ಗಳಲ್ಲಿ 163 (ಗಣೇಶ್ ಸತಿಶ್ 22, ಸುದೀಪ್ 82, ಬಿಕ್ರಮ್ಜೀತ್ 9, ಮುರಾ ಸಿಂಗ್ 8, ವಿದ್ವತ್ ಕಾವೇರಪ್ಪ 44ಕ್ಕೆ 4, ವೈಶಾಕ್ ವಿಜಯ್ ಕುಮಾರ್ 62ಕ್ಕೆ 3).
ಕರ್ನಾಟಕಕ್ಕೆ ಮುಂದಿನ ಪಂದ್ಯ
ಎದುರಾಳಿ: ರೈಲ್ವೇಸ್
ಯಾವಾಗ: ೆ.2&5
ಎಲ್ಲಿ: ಸೂರತ್.