ಕರ್ನಾಟಕ ಕುಸ್ತಿ ಹಬ್ಬ- 2020: ಶ್ವೇತಾ ಅಣ್ಣಿಕೇರಿ ಬಾಲಕೇಸರಿ

Shwetha annikeri balakesari 25 FEB 20
Published on

ಧಾರವಾಡ: ಕರ್ನಾಟಕ ಕಾಲೇಜು ಮೈದಾನದ ಕುಸ್ತಿ ಅಖಾಡದಲ್ಲಿ ನಡೆಯುತ್ತಿರುವ ಕರ್ನಾಟಕ ಕುಸ್ತಿ ಹಬ್ಬದ 14 ವರ್ಷದೊಳಗಿನ ಬಾಲಕಿಯರ 46 ಕೆಜಿ ವಿಭಾಗದದಲ್ಲಿ ಶ್ವೇತಾ ಅಣ್ಣಿಗೇರಿ ಬಾಲಕೇಸರಿ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಕೊನೆಯ ದಿನವಾದ ಮಂಗಳವಾರ ರೋಚಕ ಸೆಣಸಾಟಕ್ಕೆ ಸಾಕ್ಷಿಯಾದ ಕುಸ್ತಿ ಅಖಾಡದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಶ್ವೇತಾ ಅಣ್ಣಿಕೇರಿ ಅವರು ಬೆಳಗಾವಿಯ ಸ್ವಾತಿ ಅವರನ್ನು 4-0 ಅಂಕಗಳಿಂದ ಸೋಲಿಸಿ ಬಾಲ ಕೇಸರಿ ಪ್ರಶಸ್ತಿ ಪಡೆದುಕೊಂಡರು.

ಪ್ರಶಸ್ತಿಯು 50 ಸಾವಿರ ರೂ. ನಗದು ಒಳಗೊಂಡಿದೆ. ದ್ವಿತೀಯ ಸ್ಥಾನ ಪಡೆದ ಸ್ವಾತಿ 32,500 ರೂ. ನಗದು ಪುರಸ್ಕಾರಕ್ಕೆ ಭಾಜನರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net