

ಧಾರವಾಡ: ಇಲ್ಲಿನ ಕರ್ನಾಟಕ ಕಾಲೇಜು ಮೈದಾನದ ಕುಸ್ತಿ ಅಖಾಡದಲ್ಲಿ ನಡೆಯುತ್ತಿರುವ ಕರ್ನಾಟಕ ಕುಸ್ತಿ ಹಬ್ಬದ 17 ವರ್ಷದೊಳಗಿನ ಬಾಲಕಿಯರ 53 ಕೆಜಿ ವಿಭಾಗದಲ್ಲಿ ಶಾಲಿನಿ ಸಿದ್ಧಿ ಕರ್ನಾಟಕ ಕಿಶೋರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರೋಚಕ ಕುಸ್ತಿ ಪಂದ್ಯದಲ್ಲಿ ಶಾಲಿನಿ ಸಿದ್ಧಿ ಅವರು ತಮ್ಮ ಎದುರಾಳಿ ಗಾಯತ್ರಿ ತಾಳೆ ಅವರನ್ನು 6-2 ಅಂಕಗಳಿಂದ ಮಣಿಸಿ ಕರ್ನಾಟಕ ಕೇಸರಿ ಪ್ರಶಸ್ತಿ ಪಡೆದರು.
ಪ್ರಶಸ್ತಿ 75 ಸಾವಿರ ರೂ. ನಗದು ಒಳಗೊಂಡಿದೆ. ಎರಡನೇ ಸ್ಥಾನಕ್ಕೆ 50 ಸಾವಿರ ರೂ. ಬಹುಮಾನ ನೀಡಲಾಗುತ್ತಿದೆ