

ಧಾರವಾಡ: ಕರ್ನಾಟಕ ಕಾಲೇಜು ಮೈದಾನದ ಕುಸ್ತಿ ಅಖಾಡದಲ್ಲಿ ನಡೆಯುತ್ತಿರುವ ಕರ್ನಾಟಕ ಕುಸ್ತಿ ಹಬ್ಬ 2020ರ ಮಹಿಳೆಯರ 59-76 ಕೆಜಿ ವಿಭಾಗದ ಅತ್ಯುನ್ನತ ಪುರಸ್ಕಾರ ಮಹಿಳಾ ಕೇಸರಿ ಪ್ರಶಸ್ತಿ ಲೀನಾ ಸಿದ್ಧಿ ಅವರ ಪಾಲಾಗಿದೆ.
ಮಹಿಳಾ ಕೇಸರಿ ಪ್ರಶಸ್ತಿಗಾಗಿ ಮಂಗಳವಾರ ಲೀನಾ ಸಿದ್ಧಿ ಹಾಗೂ ಗದಗನ ಶ್ವೇತಾ ನಡುವೆ ತುರುಸಿನ ಪೈಪೋಟಿ ನಡೆಯಿತು. ಕೇವಲ ನಡೆದು 7 ನಿಮಿಷದಲ್ಲಿ ಶ್ವೇತಾ ಅವರನ್ನು ಚಿತ್ ಮಾಡಿದ ಲೀನಾ ಅವರು ಮಹಿಳಾ ಕರ್ನಾಟಕ ಕೇಸರಿಯಾಗಿ ಹೊರಹೊಮ್ಮಿದರು.
ಪ್ರಶಸ್ತಿಯು 1,50,000 ನಗದು ಒಳಗೊಂಡಿದೆ. ಎರಡನೇ ಬಹುಮಾನ 1 ಲಕ್ಷ ರೂಪಾಯಿಯದ್ದಾಗಿದೆ.