

ಧಾರವಾಡ: ಕರ್ನಾಟಕ ಕುಸ್ತಿ ಹಬ್ಬ 2020ರ ರೋಚಕ ಪಂದ್ಯಗಳು ಮಂಗಳವಾರ ಕರ್ನಾಟಕ ಕಾಲೇಜು ಮೈದಾನದ ಕುಸ್ತಿ ಅಖಾಡದಲ್ಲಿ ನಡೆದಿದ್ದು, 14 ವರ್ಷ ವಯೊಮಿತಿಯ 52 ಕೆಜಿ ವಿಭಾಗದ ಬಾಲಕೇಸರಿ ಪ್ರಶಸ್ತಿ ಬಾಗಲಕೋಟೆಯ ಆದರ್ಶ ತೊಡದಾರ ಅವರ ಮುಡಿಗೇರಿದೆ.
ರೋಚಕ ಪಂದ್ಯದಲ್ಲಿ ಬಾಗಲಕೋಟೆಯ ಆದರ್ಶ ತೊಡದಾರ ಹಾಗೂ ಧಾರವಾಡದ ಸಚಿನ್ ನಡುವೆ ಬಿರುಸಿನ ಪೈಪೋಟಿ ನಡೆದು 6.3 ನಿಮಿಷದಲ್ಲಿ ಸಚಿನ್ ಅವರನ್ನು ಚಿತ್ ಮಾಡಿದ ಆದರ್ಶ ತೋಡದಾರ ಬಾಲಕೇಸರಿಯಾಗಿ ಹೊರಹೊಮ್ಮಿದ್ದಾರೆ.
ಪ್ರಶಸ್ತಿಯು 50 ಸಾವಿರ ರೂ. ನಗದು ಒಳಗೊಂಡಿದೆ. 2ನೇ ಬಹುಮಾನ 32,500 ರೂ. ಒಳಗೊಂಡಿದೆ.