

ವಿಜಯವಾಣಿ ಸುದ್ದಿಜಾಲ ಬೆಂಗಳೂರು
"ಕರ್ನಾಟಕದ ಐಪಿಎಲ್' ಎಂದೇ ಕರೆಯಬಹುದಾದ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಟೂರ್ನಿಗೆ ಗುರುವಾರ ಚಾಲನೆ ಸಿಗಲಿದೆ. ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಸೆಣಸಲಿವೆ. ಶಿವಮೊಗ್ಗ ಲಯನ್ಸ್ ಹಾಗೂ ಹಾಲಿ ರನ್ನರ್ ಅಪ್ ಮೈಸೂರು ವಾರಿಯರ್ಸ್ ಮೊದಲ ದಿನದ 2ನೇ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್ ತಂಡ ಆಗಸ್ಟ್ 16ರಂದು ಮಂಗಳೂರು ಡ್ರಾಗನ್ಸ್ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ. ಈ ಬಾರಿ ಟೂರ್ನಿಯ ಎಲ್ಲ ಪಂದ್ಯಗಳು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನಡೆಯಲಿವೆ. ಯುವ ಆಟಗಾರರಿಗೆ ಐಪಿಎಲ್ ಫ್ರಾಂಚೈಸಿಗಳ ಗಮನಸೆಳೆಯಲು ಈ ಟೂರ್ನಿ ಉತ್ತಮ ವೇದಿಕೆ ಎನಿಸಿದೆ. ಟೀಮ್ ಇಂಡಿಯಾದ ಮಾಜಿ ಕೋಚ್ ಹಾಗೂ ದಿಗ್ಗಜ ಬ್ಯಾಟರ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ (ಮೈಸೂರು ವಾರಿಯರ್ಸ್) ಈ ಬಾರಿ ಮಹಾರಾಜ ಟ್ರೋಫಿಯ ವಿಶೇಷ ಆಕರ್ಷಣೆ ಎನಿಸಿದ್ದಾರೆ.
ತಂಡ: 6
ಪಂದ್ಯ: 33
ದಿನ: 18
ಸ್ಟಾರ್ ಕ್ರಿಕೆಟಿಗರ ಹಾಜರಿ
ಟೀಮ್ ಇಂಡಿಯಾ ಬ್ಯಾಟರ್ ಕೆಎಲ್ ರಾಹುಲ್ ಹೊರತಾಗಿ ರಾಜ್ಯದ ಎಲ್ಲ ಪ್ರಮುಖ ಆಟಗಾರರು ಈ ಬಾರಿ ಮಹಾರಾಜ ಟ್ರೋಫಿಯಲ್ಲಿ ಆಡಲಿದ್ದಾರೆ. ಮೈಸೂರು ತಂಡದಲ್ಲಿರುವ ವೇಗಿ ಪ್ರಸಿದ್ಧಕೃಷ್ಣ ಪಾಲ್ಗೊಳ್ಳುವಿಕೆ ಮಾತ್ರ ಫಿಟ್ನೆಸ್ಅನ್ನು ಅವಲಂಬಿಸಿದೆ. ಉಳಿದಂತೆ ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ, ದೇವದತ್ ಪಡಿಕಲ್, ಕೆ. ಗೌತಮ್, ವೈಶಾಕ್ ವಿಜಯ್ಕುಮಾರ್ ಮುಂತಾದ ಎಲ್ಲ ಪ್ರಮುಖ ಆಟಗಾರರು ಕಣಕ್ಕಿಳಿಯಲಿದ್ದಾರೆ.
ತಂಡಗಳು
*ಹುಬ್ಬಳ್ಳಿ ಟೈಗರ್ಸ್
ನಾಯಕ: ಮನೀಷ್ ಪಾಂಡೆ
ಪ್ರಮುಖ ಆಟಗಾರರು: ವಿದ್ವತ್ ಕಾವೇರಪ್ಪ, ಕೆಸಿ ಕಾರ್ಯಪ್ಪ, ರಿಷಿ ಬೋಪಣ್ಣ, ಮೊಹಮದ್ ತಾಹ.
*ಮೈಸೂರು ವಾರಿಯರ್ಸ್
ನಾಯಕ: ಕರುಣ್ ನಾಯರ್
ಪ್ರಮುಖ ಆಟಗಾರರು: ಕೆ. ಗೌತಮ್, ಪ್ರಸಿದ್ಧ ಕೃಷ್ಣ, ಜೆ. ಸುಚಿತ್, ಮನೋಜ್ ಭಾಂಡಗೆ.
*ಶಿವಮೊಗ್ಗ ಲಯನ್ಸ್
ನಾಯಕ: ನಿಹಾಲ್ ಉಲ್ಲಾಳ್
ಪ್ರಮುಖ ಆಟಗಾರರು: ಅಭಿನವ್ ಮನೋಹರ್, ವಿ. ಕೌಶಿಕ್, ಟಿ. ಪ್ರದಿಪ್, ಹಾರ್ದಿಕ್ ರಾಜ್.
*ಗುಲ್ಬರ್ಗಾ ಮಿಸ್ಟಿಕ್ಸ್
ನಾಯಕ: ದೇವದತ್ ಪಡಿಕ್ಕಲ್
ಪ್ರಮುಖ ಆಟಗಾರರು: ವೈಶಾಕ್ ವಿಜಯ್ಕುಮಾರ್, ಲವನೀತ್ ಸಿಸೋಡಿಯಾ, ಪ್ರವಿಣ್ ದುಬೆ, ಸ್ಮರಣ್ ಆರ್.
*ಬೆಂಗಳೂರು ಬ್ಲಾಸ್ಟರ್ಸ್
ನಾಯಕ: ಮಯಾಂಕ್ ಅಗರ್ವಾಲ್
ಪ್ರಮುಖ ಆಟಗಾರರು: ಶುಭಾಂಗ್ ಹೆಗ್ಡೆ, ಅನಿರುದ್ಧ ಜೋಶಿ, ಪ್ರತಿಕ್ ಜೈನ್, ಚೇತನ್ ಎಲ್ಆರ್.
*ಮಂಗಳೂರು ಡ್ರ್ಯಾಗನ್ಸ್
ನಾಯಕ: ಶ್ರೇಯಸ್ ಗೋಪಾಲ್
ಪ್ರಮುಖ ಆಟಗಾರರು: ಸಿದ್ಧಾರ್ಥ್ ಕೆವಿ, ನಿಕಿನ್ ಜೋಸ್, ರೋಹನ್ ಪಾಟೀಲ್, ಅಭಿಲಾಷ್ ಶೆಟ್ಟಿ.
ಟೂರ್ನಿ ಸ್ವರೂಪ
ಟೂರ್ನಿಯಲ್ಲಿ ಆಡುವ ಎಲ್ಲ 6 ತಂಡಗಳು ಲೀಗ್ ಹಂತದಲ್ಲಿ ತಲಾ 2 ಬಾರಿ ಪರಸ್ಪರ ಮುಖಾಮುಖಿ ಆಗಲಿವೆ. ಆಗಸ್ಟ್ 29ರವರೆಗೆ ಲೀಗ್ ಪಂದ್ಯಗಳು ನಡೆಯಲಿದ್ದು, ಪ್ರತಿದಿನ 2 ಲೀಗ್ ಪಂದ್ಯಗಳು ನಡೆಯಲಿವೆ. ಕೊನೆಗೆ ಅಂಕಪಟ್ಟಿಯ ಅಗ್ರ 4 ತಂಡಗಳು ಉಪಾಂತ್ಯಕ್ಕೆ ಅರ್ಹತೆ ಪಡೆಯಲಿವೆ. ಆಗಸ್ಟ್ 30, 31ರಂದು ಸೆಮಿೈನಲ್ಸ್ ಹಾಗೂ ಸೆಪ್ಟೆಂಬರ್ 1ಕ್ಕೆ ೈನಲ್ ನಿಗದಿಯಾಗಿದೆ.
*35: ಟೂರ್ನಿಯು ಒಟ್ಟು 35 ಲಕ್ಷ ರೂ. ಬಹುಮಾನ ಮೊತ್ತ ಒಳಗೊಂಡಿದ್ದು, ವಿಜೇತರು 15 ಲಕ್ಷ ರೂ., ರನ್ನರ್ ಅಪ್ 10 ಲಕ್ಷ ರೂ. ಪಡೆಯಲಿದ್ದಾರೆ. ಉಳಿದ ಮೊತ್ತವನ್ನು 3-4ನೇ ಸ್ಥಾನ ಪಡೆದ ತಂಡಗಳಿಗೆ ಹಂಚಲಾಗುತ್ತದೆ.
ಇಂದಿನ ಪಂದ್ಯಗಳು
ಬೆಂಗಳೂರು-ಗುಲ್ಬರ್ಗಾ
ಆರಂಭ: ಮಧ್ಯಾಹ್ನ 3.00
ಶಿವಮೊಗ್ಗ-ಮೈಸೂರು
ಆರಂಭ: ರಾತ್ರಿ 7.00
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 2, ಸ್ಟಾರ್ ಸ್ಪೋರ್ಟ್ಸ್ ಕನ್ನಡ; ಫ್ಯಾನ್ ಕೋಡ್ (ಒಟಿಟಿ).