ಉದ್ಯಾನನಗರಿಯಿಂದ ಐಸಿಸಿ ಟೂರ್ನಿ ಶಿಫ್ಟ್: ಬದಲಿ ತವರಿಗೆ ಐಪಿಎಲ್ ಚಾಂಪಿಯನ್ ಆರ್​ಸಿಬಿ ಹುಡುಕಾಟ!

New Project (1)
Published on

ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆ (ಕೆಎಸ್​ಸಿಎ) ನಡುವಿನ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದ್ದು, ಮುಂಬರುವ ಮಹಿಳೆಯರ ಏಕದಿನ ವಿಶ್ವಕಪ್​ 13ನೇ ಆವೃತ್ತಿಯ ಪಂದ್ಯಗಳನ್ನು ಪ್ರತಿಷ್ಠಿತ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲು ರಾಜ್ಯ ಸರ್ಕಾರ ಅನುಮತಿ ನೀಡಲು ನಿರಾಕರಿಸಿದೆ. ಇದರಿಂದ ಟೂರ್ನಿಯ ಉದ್ಘಾಟನಾ ಹಾಗೂ ಫೈನಲ್​ ಪಂದ್ಯಗಳ ಜತೆಗೆ ಒಟ್ಟು 5 ಪಂದ್ಯಗಳು ಬೇರೆ ನಗರಕ್ಕೆ ಸ್ಥಳಾಂತರಗೊಳ್ಳುವುದು ಖಾತ್ರಿಗೊಂಡಿದ್ದು, ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್​ ಸಮಿತಿ (ಐಸಿಸಿ) ಶ್ರೀದಲ್ಲಿಯೇ ಪರಿಷತ ವೇಳಾಪಟ್ಟಿ ಬಿಡುಗಡೆಗೊಳಿಸುವ ನಿರೀಕ್ಷೆ ಹರಡಿದೆ.

ಮಹಿಳಾ ವಿಶ್ವಕಪ್​ ಟೂರ್ನಿ ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ಸೆಪ್ಟೆಂಬರ್​ 30ರಿಂದ ನವೆಂಬರ್​ 2ರವರೆಗೆ ನಡೆಯಲಿದ್ದು, ಸೋಮವಾರವಷ್ಟೇ ಟೂರ್ನಿಯ 50 ದಿನಗಳ ದಿನಗಣನೆಗೆ ಚಾಲನೆ ನೀಡಲಾಗಿತ್ತು. ಆದರೆ ಆರ್​ಸಿಬಿ ತಂಡದ ಐಪಿಎಲ್​ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತ ಮತ್ತು ಅನಂತರ ಬೆಳವಣಿಗೆಗಳಿಂದ ಮಹಾರಾಜ ಟ್ರೋಫಿ ಟಿ20 ಟೂರ್ನಿಯನ್ನು ಪ್ರೇಕ್ಷರಿಲ್ಲದೆ ಆಯೋಜಿಸಲು ನಗರ ಪೊಲೀಸರು, ಕೆಎಸ್​ಸಿಎಗೆ ಅನುಮತಿ ನೀಡಿರಲಿಲ್ಲ. ಇದರ ಬೆನ್ನಲ್ಲೇ ಪಂದ್ಯಗಳನ್ನು ಮೈಸೂರಿಗೆ ಸ್ಥಳಾಂತರಿಸಲಾಗಿತ್ತು. ಈಗ ಎಂಟು ತಂಡಗಳು ಭಾಗವಹಿಸುವ ಐಸಿಸಿ ಟೂರ್ನಿಯ ಉದ್ಘಾಟನಾ ಸಮಾರಂಭ ಸೇರಿ ಇತರ ಎಲ್ಲ ಪಂದ್ಯಗಳನ್ನು ಬೇರೆ ನಗರಕ್ಕೆ ಸ್ಥಳಾಂತರಗೊಳಿಸುವುದನ್ನು ಕೆಎಸ್​ಸಿಎ ಮೂಲಗಳು ಖಚಿತಪಡಿಸಿವೆ. ಜತೆಗೆ ಭದ್ರತಾ ಕಾರಣಗಳನ್ನು ನೀಡಿ ಸರ್ಕಾರ ಅನುಮತಿ ನಿರಾಕರಿಸಿರುವುದಕ್ಕೆ ಅಸಮಾಧಾನ ಹೊರಹಾಕಿದೆ.

ಟೂರ್ನಿಯ ಆತಿಥ್ಯ ಹಕ್ಕು ಹೊಂದಿರುವ ಬಿಸಿಸಿಐ ಈಗಾಗಲೆ ಪ್ರಕಟಿಸಿರುವ ವೇಳಾಪಟ್ಟಿಯಲ್ಲಿ ಸೆ.30ರಂದು ಭಾರತ-ಶ್ರೀಲಂಕಾ ನಡುವೆ ಉದ್ಘಾಟನಾ ಪಂದ್ಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಿಗದಿಯಾಗಿದೆ. ಇದಲ್ಲದೆ,ಫೈನಲ್​​, ಸೆಮಿಫೈನಲ್​​ ಸಹಿತ ಇನ್ನೂ 3 ಲೀಗ್​ ಪಂದ್ಯಗಳು ಇದೇ ಮೈದಾನದಲ್ಲಿ ನಿಗದಿಯಾಗಿವೆ. ಟೂರ್ನಿಗೆ ರಾಜ್ಯ ಸರ್ಕಾರ ಮತ್ತು ಪೊಲೀಸರ ಅನುಮತಿ ಪಡೆಯಲು ಕೆಎಸ್​ಸಿಎಗೆ ಆಗಸ್ಟ್​ 10ರ ಗಡುವು ನೀಡಲಾಗಿತ್ತು.

ತಿರುವನಂತಪುರಕ್ಕೆ ಸ್ಥಳಾಂತರ?

ಬೆಂಗಳೂರು ಬದಲಿಗೆ ಮಹಿಳಾ ವಿಶ್ವಕಪ್​ ಪಂದ್ಯಗಳ ಆಯೋಜನೆಗೆ ತಿರುವನಂತಪುರದ ಗ್ರೀನ್​ಫೀಲ್ಡ್​ ಕ್ರೀಡಾಂಗಣದ ಹೆಸರು ಮುಂಚೂಣಿಯಲ್ಲಿದ್ದು, ಬಿಸಿಸಿಐ ತನ್ನ ಅಂತಿಮ ನಿರ್ಧಾರವನ್ನು ಇನ್ನಷ್ಟೇ ಘೋಷಿಸಬೇಕಿದೆ. ಟೂರ್ನಿಯ ಕೆಲ ಅಭ್ಯಾಸ ಪಂದ್ಯಗಳು ಇದೇ ಮೈದಾನದಲ್ಲಿ ನಡೆಯಲಿವೆ ಎನ್ನಲಾಗಿದೆ. ತಿರುವನಂತಪುರದಲ್ಲಿ ಆಗಸ್ಟ್​ 21ರಿಂದ ಸೆಪ್ಟೆಂಬರ್​ 7ರವರೆಗೆ ಕೇರಳ ಕ್ರಿಕೆಟ್​ ಲೀಗ್​ ನಿಗದಿಯಾಗಿದ್ದರೂ, ಅದನ್ನು ಬೇರೆ ತಾಣಕ್ಕೆ ಸ್ಥಳಾಂತರಿಸಲು ಕೇರಳ ಕ್ರಿಕೆಟ್​ ಸಂಸ್ಥೆ ಮುಂದಾಗಿದೆ ಎನ್ನಲಾಗಿದೆ. ಹೈದರಾಬಾದ್​ ಕೂಡ ಬದಲಿ ತಾಣವಾಗಿ ರೇಸ್​ನಲ್ಲಿದ್ದರೂ, ತಿರುವನಂತಪುರವೇ ಫೇವರಿಟ್​ ಎನಿಸಿದೆ.

ಕೆಎಸ್​ಸಿಎಗೆ ಮತ್ತೆ ಹಿನ್ನಡೆ?

ಮಹಾರಾಜ ಟ್ರೋಫಿ ಆಯೋಜನೆಗೆ ಅನುಮತಿ ಪಡೆಯವಲ್ಲಿ ವಿಲವಾಗಿದ್ದ ಕೆಎಸ್​ಸಿಎಗೆ, ಐಸಿಸಿ ಟೂರ್ನಿ ಸ್ಥಳಾಂತರವೂ ಮತ್ತೊಂದು ಹಿನ್ನಡೆ ಎನಿಸಿದೆ. ಆರ್​ಸಿಬಿ ವಿಜಯೋತ್ಸವ ಕಾಲ್ತುಳಿತ ದುರಂತದ ಬಳಿಕ ವೈಭವವನ್ನು ಕಳೆದುಕೊಂಡಿರುವ ಕೆಎಸ್​ಸಿಎ, ಮಹಿಳಾ ಏಕದಿನ ವಿಶ್ವಕಪ್​ ಟೂರ್ನಿಯ ಆಯೋಜನೆ ಮೂಲಕ ಮರಳಿ ಪಡೆಯುವ ನಿರೀೆಯಲ್ಲಿತ್ತು. ಆದರೆ ನ್ಯಾಯಮೂರ್ತಿ ಮೈಕಲ್​ ಡಿ ಕುನ್ಹಾ ಆಯೋಗದ ವರದಿಯಲ್ಲಿನ ಶಿಫಾರಸುಗಳನ್ನು ಸಚಿವ ಸಂಪುಟವು ಅಂಗೀಕರಿಸಿದ ನಂತರ ಪ್ರೇಕ್ಷಕರಿಲ್ಲದೆ ಮಹಾರಾಜ ಟ್ರೋಫಿ ಆಯೋಜನೆಗೂ ಕೆಎಸ್​ಸಿಎಗೆ ಅನುಮತಿ ನೀಡಲು ಪೊಲೀಸ್​ ಇಲಾಖೆ ನಿರಾಕರಿಸಿತ್ತು.

ಚಿನ್ನಸ್ವಾಮಿ ಕ್ರೀಡಾಂಗಣ ದೊಡ್ಡ ಮಟ್ಟದ ಕಾರ್ಯಕ್ರಮ, ಹೆಚ್ಚು ಜನರು ಸೇರುವ ಸಭೆ-ಸಮಾರಂಭಗಳನ್ನು ಆಯೋಜಿಸಲು ಅಸುರತ ಎಂದು ಆಯೋಗ ವರದಿಯಲ್ಲಿ ಉಲ್ಲೇಖಿಸಿದೆ. ಆದರೆ ಕಾಲ್ತುಳಿತ ಪ್ರಕರಣಕ್ಕೂ ಮುನ್ನ ಹಲವು ಅಂತಾರಾಷ್ಟ್ರೀಯ ಟೂರ್ನಿಗಳ ಜತೆಗೆ ಇತ್ತೀಚೆಗೆ 2023ರ ಪುರುಷರ ಏಕದಿನ ವಿಶ್ವಕಪ್​ ಟೂರ್ನಿಗೆ ಚಿನ್ನಸ್ವಾಮಿ ಮೈದಾನ ಆತಿಥ್ಯವಹಿಸಿತ್ತು.

ಸರ್ಕಾರದ ವಿರುದ್ಧ ಅಸಮಾಧಾನ

2025ರ ಜೂನ್​ವರೆಗೂ 750ಕ್ಕೂ ಹೆಚ್ಚು ಪಂದ್ಯಗಳ ಜತೆಗೆ 15 ಐಪಿಎಲ್​ ಆವೃತ್ತಿಗಳನ್ನು ಯಾವುದೇ ಅಹಿತಕರ ಟನೆಗೆ ಅವಕಾಶ ನೀಡದೆ ಯಶಸ್ವಿಯಾಗಿ ನಿರ್ವಹಿಸಿರುವ ದಾಖಲೆ ಹೊಂದಿರುವ ಕೆಎಸ್​ಸಿಎಗೆ ಸರ್ಕಾರದ ಈ ನಿರ್ಧಾರ ನಿರಾಸೆ ತಂದಿದೆ. ಪ್ರೇಕ್ಷಕರಿಲ್ಲದೆ ಪಂದ್ಯಗಳನ್ನು ಆಯೋಜಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಆದರೆ ನಮ್ಮ ಬೇಡಿಕೆಗಳಿಗೆ ಸರಿಯಾಗಿ ಸ್ಪಂದಿಸಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಈಗ ಬೇರೆ ಬೇರೆ ಕಡೆಗಳಲ್ಲಿ ಆಡಿಸಲಾಗುತ್ತಿದೆ. ಜೂನ್​ 4ರಂದು ನಡೆದದ್ದು ಕ್ರಿಕೆಟ್​ ಪಂದ್ಯವಲ್ಲ, ಅದೊಂದು ಖಾಸಗಿ ಕಾರ್ಯಕ್ರಮ. ಚಿನ್ನಸ್ವಾಮಿಯಲ್ಲಿ ಕ್ರಿಕೆಟ್​ ಪಂದ್ಯಗಳ ವೇಳೆ ಯಾವುದೇ ಅಹಿತಕರ ಟನೆ ನಡೆದ ದೃಷ್ಟಾಂತವಿಲ್ಲ ಎಂದು ಕೆಎಸ್​ಸಿಎ ಅಧಿಕಾರಿಯೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.

ಬದಲಿ ತವರಿಗೆ ಆರ್​ಸಿಬಿ ಹುಡುಕಾಟ!

ಮಹಿಳಾ ವಿಶ್ವಕಪ್​ ಸ್ಥಳಾಂತರದಿಂದ ಇನ್ನು ಆರ್​ಸಿಬಿ ತಂಡವೂ ಮುಂದಿನ ವರ್ಷದ ಐಪಿಎಲ್​ ಟೂರ್ನಿಗೆ ಬದಲಿ ತವರು ತಾಣವನ್ನು ಹುಡುಕಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಮುಂದಿನ ವರ್ಷ ಆರ್​ಸಿಬಿ ತಂಡಕ್ಕೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ತವರಿನ ಪಂದ್ಯಗಳನ್ನು ಆಡಲು ಅನುಮತಿ ದೊರೆಯುವ ಸಾಧ್ಯತೆ ಈಗ ದೂರವಾಗಿದೆ.

ತಿರುವನಂತಪುರದ ಗ್ರೀನ್​ಫೀಲ್ಡ್​ ಮೈದಾನವೇ ಈಗ ಆರ್​ಸಿಬಿಗೂ ಬದಲಿ ತವರು ತಾಣವಾಗಿ ನೆಚ್ಚಿನ ಮೈದಾನವೆನಿಸಿದೆ. ಇದು ಚಿನ್ನಸ್ವಾಮಿಗಿಂತ ಅಧಿಕ ಅಂದರೆ 50 ಸಾವಿರ ಆಸನ ವ್ಯವಸ್ಥೆಯನ್ನೂ ಹೊಂದಿದೆ. ಉಳಿದಂತೆ ವಿಶಾಖಪಟ್ಟಣ, ಧರ್ಮಶಾಲಾ, ನವಿ ಮುಂಬೈನ ಡಿವೈ ಪಾಟೀಲ್​ ಸ್ಟೇಡಿಯಂ, ಪುಣೆಯ ಎಂಸಿಎ ಸ್ಟೇಡಿಯಂ, ಕಾನ್ಪುರದ ಗ್ರೀನ್​ಪಾರ್ಕ್​ ಸ್ಟೇಡಿಯಂ ಕೂಡ ಆರ್​ಸಿಬಿಗೆ ಬದಲಿ ತವರು ತಾಣ ಆಗಬಹುದಾದ ಮೈದಾನಗಳೆನಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net