ಬೆಂಗಳೂರು: ಅಂತಿಮ ಎಂಟರ ಘಟ್ಟಕ್ಕೇರಲು ಮಾಡು ಇಲ್ಲವೆ ಮಡಿ ಸ್ಥಿತಿಯಲ್ಲಿರುವ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ 9ನೇ ಹಾಗೂ ಅಂತಿಮ ಸುತ್ತಿನ ಹಣಾಹಣಿಗೆ ಸಜ್ಜಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರದಿಂದ ನಡೆಯಲಿರುವ ಪಂದ್ಯದಲ್ಲಿ, ಈಗಾಗಲೇ ನಾಕೌಟ್ ರೇಸ್ನಿಂದ ಹೊರಬಿದ್ದಿರುವ ಬರೋಡ ತಂಡವನ್ನು ಎದುರಿಸಲಿದೆ. ಕರುಣ್ ನಾಯರ್ ಪಡೆ ಕನಿಷ್ಠ ಇನಿಂಗ್ಸ್ ಮುನ್ನಡೆ ದಕ್ಕಿಸಿಕೊಂಡರಷ್ಟೇ ಅಂತಿಮ 8ರ ಘಟ್ಟಕ್ಕೇರಲಿದೆ.
ವೇಗಿ ಪ್ರಸಿದ್ಧಕೃಷ್ಣ ತಂಡಕ್ಕೆ ವಾಪಸಾಗಿರುವುದು ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಶಿವಮೊಗ್ಗದಲ್ಲಿ ನಡೆದ ಹಿಂದಿನ ಪಂದ್ಯದಲ್ಲಿ ಮಧ್ಯಪ್ರದೇಶ ಎದುರು ಅನಿರೀಕ್ಷಿತ ಇನಿಂಗ್ಸ್ ಹಿನ್ನಡೆ ಅನುಭವಿಸಿದ ಕರ್ನಾಟಕ ತಂಡ, ಫೀಲ್ಡಿಂಗ್ನಲ್ಲಿ ಮಾಡಿದ ಎಡವಟ್ಟುಗಳಿಗೆ ಭಾರೀ ಟೀಕೆ ಎದುರಿಸಿತ್ತು.

ಸುಧಾರಿಸಬೇಕಿದೆ ಬ್ಯಾಟಿಂಗ್-ಫೀಲ್ಡಿಂಗ್: ಟೂರ್ನಿಯಲ್ಲಿ ಇದುವರೆಗೆ ಬ್ಯಾಟ್ಸ್ಮನ್ಗಳಿಗಿಂತ ಬೌಲರ್ಗಳೇ ತಂಡಕ್ಕೆ ಆಧಾರವಾಗುತ್ತಾ ಬಂದಿದ್ದಾರೆ. ತಮಿಳುನಾಡು, ಮುಂಬೈ, ರೈಲ್ವೇಸ್ ಎದುರು ದಕ್ಕಿದ ಗೆಲುವುಗಳಲ್ಲಿ ಬೌಲರ್ಗಳ ಪಾತ್ರವೇ ಗಣನೀಯವಾಗಿದೆ. ಆರ್.ಸಮರ್ಥ್ ಫಾಮರ್್ನಲ್ಲಿರುವುದು ಕೊಂಚ ಸಮಾಧಾನವಾಗಿದ್ದರೂ ಅವರಿಗೆ ಇತರರಿಂದ ಬೆಂಬಲ ಅಗತ್ಯವಾಗಿದೆ. ಪಂದ್ಯದಿಂದ ಪಂದ್ಯಕ್ಕೆ ಯುವ ಬ್ಯಾಟ್ಸ್ಮನ್ ದೇವದತ್ ಪಡಿಕಲ್ ನಿರ್ವಹಣೆ ಕ್ಷೀಣಿಸುತ್ತಿರುವುದು ಆತಂಕ ತಂದಿದ್ದು, ನಾಯಕ ಕರುಣ್ ನಾಯರ್ ಇದುವರೆಗೆ 2 ಅರ್ಧಶತಕ ಬಾರಿಸಲಷ್ಟೇ ಶಕ್ತರಾಗಿದ್ದಾರೆ. ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ನಲ್ಲಿ ಉತ್ತಮ ನಿರ್ವಹಣೆ ಬಂದರಷ್ಟೇ ಬೌಲರ್ಗಳಿಗೆ ಸಾಥ್ ನೀಡಲು ಸಾಧ್ಯ.
ಪ್ರಸಿದ್ಧಕೃಷ್ಣ ಬಲ: ಗಾಯದ ಸಮಸ್ಯೆಯಿಂದ ಕಳೆದ 3 ತಿಂಗಳಿಂದ ಮೈದಾನದಿಂದ ಹೊರಗುಳಿದಿದ್ದ ಯುವವೇಗಿ ಪ್ರಸಿದ್ಧಕೃಷ್ಣ ತಂಡಕ್ಕೆ ವಾಪಸಾಗಿದ್ದಾರೆ. ಪ್ರಸಿದ್ಧಕೃಷ್ಣ ಆಗಮನದಿಂದ ಕರ್ನಾಟಕದ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಪ್ರಸಿದ್ಧಕೃಷ್ಣ ಬೆಂಗಳೂರಿನಲ್ಲಿ ನಡೆದ ವಿಜಯ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ಎಂಟರ ಘಟ್ಟದ ಪಂದ್ಯದಲ್ಲಿ ಕೊನೇ ಬಾರಿ ಆಡಿದ್ದರು. ಬಳಿಕ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ಪೂರ್ತಿ ಹಾಗೂ ರಣಜಿ ಟ್ರೋಫಿ ಆರಂಭಿಕ 7 ಪಂದ್ಯಗಳಿಂದಲೂ ಹೊರಗುಳಿದಿದ್ದರು.
ಕರ್ನಾಟಕ ತಂಡ ಕನಿಷ್ಠ ಇನಿಂಗ್ಸ್ ಮುನ್ನಡೆ ಸಾಧಿಸಿದರಷ್ಟೇ ಕ್ವಾರ್ಟರ್ಫೈನಲ್ಗೇರುವ ಅವಕಾಶ ಹೊಂದಿದೆ. 7 ಪಂದ್ಯಗಳಿಂದ 3 ಗೆಲುವಿನೊಂದಿಗೆ 25 ಅಂಕ ಕಲೆಹಾಕಿರುವ ಕರ್ನಾಟಕ ಎ ಮತ್ತು ಬಿ ಗುಂಪಿನ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇನಿಂಗ್ಸ್ ಮುನ್ನಡೆ ಸಾಧಿಸಿದರೆ 28 ಅಂಕ ಕಲೆಹಾಕುವ ಕರ್ನಾಟಕ ಯಾವುದೇ ಆತಂಕವಿಲ್ಲದೆ ಮುನ್ನಡೆಯಲಿದೆ.
ಟೂರ್ನಿ ಅಂತಿಮ ಸುತ್ತು ಪ್ರವೇಶಿಸಿದರೂ ಅಗ್ರ 5 ತಂಡಗಳು ಮಾತ್ರ ಅಂತಿಮವಾಗಿಲ್ಲ. ಎಲೈಟ್ ಎ ಮತ್ತು ಬಿ ಗುಂಪಿನಿಂದ ಅಗ್ರ 5 ತಂಡಗಳು ಎಂಟರ ಘಟ್ಟಕ್ಕೇರಲಿವೆ. ಸದ್ಯ ಗುಜರಾತ್ (7 ಪಂದ್ಯ, 29 ಅಂಕ) ಅಗ್ರಸ್ಥಾನದಲ್ಲಿದ್ದರೆ, ಕಡೇ ಲೀಗ್ ಪಂದ್ಯದಲ್ಲಿ 3ನೇ ಸ್ಥಾನದಲ್ಲಿರುವ ಆಂಧ್ರ (7 ಪಂದ್ಯ, 27 ಅಂಕ) ತಂಡವನ್ನು ಎದುರಿಸಲಿದೆ. ಗುಜರಾತ್ ತಂಡ ಕನಿಷ್ಠ ಡ್ರಾ ಸಾಧಿಸಿದರೂ 8ರ ಘಟ್ಟಕ್ಕೇರಿದರೆ, ಆಂಧ್ರ ತಂಡಕ್ಕೆ ಕನಿಷ್ಠ ಮುನ್ನಡೆ ಅನಿವಾರ್ಯವಾಗಿದೆ. 2ನೇ ಸ್ಥಾನದಲ್ಲಿರುವ ಸೌರಾಷ್ಟ್ರ (7 ಪಂದ್ಯ, 28 ಅಂಕ) ಕಡೇ ಲೀಗ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಯಾವುದೇ ಅಪಾಯವಾಗದಂತೆ ಎಚ್ಚರವಹಿಸಬೇಕಿದೆ. 4ನೇ ಸ್ಥಾನಿ ಬಂಗಾಳ (7 ಪಂದ್ಯ, 26 ಅಂಕ) ಕಡೇ ಪಂದ್ಯದಲ್ಲಿ 6ನೇ ಸ್ಥಾನದಲ್ಲಿರುವ ಪಂಜಾಬ್ (7ಪಂದ್ಯ, 24ಅಂಕ) ತಂಡವನ್ನು ಎದುರಿಸಲಿದೆ. ಉಭಯ ತಂಡಗಳ ಪಾಲಿಗೂ ಇದು ಪ್ರಿ ಕ್ವಾರ್ಟರ್ಫೈನಲ್ ಪಂದ್ಯವಾಗಿದ್ದು, ಜಯ ದಾಖಲಿಸಿದ ತಂಡ ಕ್ವಾರ್ಟರ್ಫೈನಲ್ಗೇರಲಿದೆ. 7ನೇ ಸ್ಥಾನದಲ್ಲಿರುವ ಉತ್ತರ ಪ್ರದೇಶ ತನ್ನ ಕೊನೇ ಪಂದ್ಯದಲ್ಲಿ ಹಿಮಾಚಲ ತಂಡವನ್ನು ಸೋಲಿಸಿದರೂ, ಕರ್ನಾಟಕ-ಬರೋಡ ಪಂದ್ಯದ ಫಲಿತಾಂಶದ ಮೇಲೆ ಅದರ ಭವಿಷ್ಯ ಅಡಗಿದೆ.
ಈಗಾಗಲೇ ಕ್ವಾರ್ಟರ್ಫೈನಲ್ ರೇಸ್ನಿಂದ ಹೊರಬಿದ್ದಿರುವ ಬರೋಡ, ಎ-ಬಿ ಗುಂಪಿನಲ್ಲಿ 14 ಅಂಕಗಳೊಂದಿಗೆ 13ನೇ ಸ್ಥಾನದಲ್ಲಿದೆ. ಹೀಗಾಗಿ ಬರೋಡ ಪಾಲಿಗೆ ಇದು ಔಪಚಾರಿಕ ಹೋರಾಟವಾಗಿದೆ. ಕೃನಾಲ್ ಪಾಂಡ್ಯ ನಾಯಕತ್ವದ ಬರೋಡ ಪ್ರಬಲ ಹೋರಾಟದೊಂದಿಗೆ ಪ್ರಸಕ್ತ ಟೂರ್ನಿಗೆ ವಿದಾಯ ಹೇಳುವ ಗುರಿಯಲ್ಲಿದೆ.
ಪಂದ್ಯ ಆರಂಭ: ಬೆಳಗ್ಗೆ 9.30