ವಿಜಯ್ ಹಜಾರೆ ಟ್ರೋಫಿಯಲ್ಲಿ ಕೇರಳ ತಂಡವನ್ನು ಮಣಿಸಿ ಸೆಮೀಸ್‌ಗೇರಿದ ಕರ್ನಾಟಕ ತಂಡ

samartha and devdutt
Published on

ನವದೆಹಲಿ: ಆರಂಭಿಕರಾದ ನಾಯಕ ಆರ್.ಸಮರ್ಥ್ (192ರನ್, 158 ಎಸೆತ, 22 ಬೌಂಡರಿ, 3 ಸಿಕ್ಸರ್) ಹಾಗೂ ದೇವದತ್ ಪಡಿಕಲ್ (101ರನ್, 119 ಎಸೆತ, 10 ಬೌಂಡರಿ, 2 ಸಿಕ್ಸರ್) ಜೋಡಿಯ ಭರ್ಜರಿ ನಿರ್ವಹಣೆ ಹಾಗೂ ವೇಗಿ ರೋಹಿತ್ ಮೋರೆ (36 ಕ್ಕೆ 5) ಮಾರಕ ದಾಳಿ ನೆರವಿನಿಂದ ಹಾಲಿ ಚಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಪಾಲಂನ ಏರ್ ಫೋರ್ಸ್​ ಕ್ರಿಕೆಟ್ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ 80 ರನ್‌ಗಳಿಂದ ಕೇರಳ ತಂಡವನ್ನು ಸೋಲಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ, ಸಮರ್ಥ್ ಹಾಗೂ ಪಡಿಕಲ್ ಜೋಡಿ ಮೊದಲ ವಿಕೆಟ್‌ಗೆ ಪೇರಿಸಿದ 249 ರನ್ ಜತೆಯಾಟದ ಫಲವಾಗಿ 338 ರನ್ ಪೇರಿಸಿತು. ಪ್ರತಿಯಾಗಿ ಕೇರಳ ತಂಡ ವತ್ಸಲ್ (92ರನ್, 96 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ಮೊಹಮದ್ ಅಜರುದ್ದೀನ್ (52ರನ್, 34 ಎಸೆತ, 5 ಬೌಂಡರಿ, 2 ಸಿಕ್ಸರ್) ಪ್ರತಿಹೋರಾಟದ ನಡುವೆಯೂ 43.4 ಓವರ್‌ಗಳಲ್ಲಿ 258 ರನ್‌ಗಳಿಗೆ ಸರ್ವಪತನ ಕಂಡಿತು.

ಕರ್ನಾಟಕ : 3 ವಿಕೆಟ್‌ಗೆ 338 (ಸಮರ್ಥ್.ಆರ್ 192, ದೇವದತ್ ಪಡಿಕಲ್ 101, ಮನೀಷ್ ಪಾಂಡೆ 34*, ಬಸಿಲ್ ಎನ್‌ಪಿ 57ಕ್ಕೆ 3), ಕೇರಳ: 43.4 ಓವರ್‌ಗಳಲ್ಲಿ 258 (ರಾಬಿನ್ ಉತ್ತಪ್ಪ 2, ವಿಷ್ಣು ವಿನೋದ್ 28, ವತ್ಸಲ್ 92, ಮೊಹಮದ್ ಅಜರುದ್ದೀನ್ 52, ಸಚಿನ್ ಬೇಬಿ 27, ರೋಹಿತ್ ಮೋರೆ 36 ಕ್ಕೆ 5, ಶ್ರೇಯಸ್ ಗೋಪಾಲ್ 64ಕ್ಕೆ 2, ಕೆ.ಗೌತಮ್ 73ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net