

ಬೆಂಗಳೂರು: ದೇಶದ ಅತಿ ದೊಡ್ಡ ಕರಾಟೆ ಶಾಲೆ ಎನಿಸಿಕೊಂಡಿರುವ ಒಎಸ್‌ಕೆ ಫೆಡೆರೇಷನ್ ಆಫ್ ಇಂಡಿಯಾ, ಸತತ 30ನೇ ವರ್ಷದ ಮಹಿಳಾ ದಿನಾಚರಣೆ ಅಂಗವಾಗಿ, ರಕ್ಷಣಾತ್ಮಕ ಕಲೆಗಳನ್ನು ಮಹಿಳೆಯರಿಗೆ ತಿಳಿಸಿಕೊಟ್ಟಿದೆ. ಮಹಿಳೆಯರ ರಕ್ಷಣೆಯನ್ನು ಕರಾಟೆ ಕೌಶಲ್ಯಗಳ ಮೂಲಕ ಹೇಗೆ ಭವಿಷ್ಯದ ಅಪಾಯಗಳನ್ನು ತಡೆಗಟ್ಟಬಹುದು ಎಂಬ ಉದ್ದೇಶದಿಂದ, ನಗರದ ಜೆ.ಪಿ.ನಗರದ ಕರಾಟೆ ಶಾಲೆಯಲ್ಲಿ 40ಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ನೀಡಿದೆ.
ಇದೇ ವೇಳೆ ಕರಾಟೆಯಲ್ಲಿ ಬಹುಮುಖ್ಯ ಕೌಶಲ್ಯವಾಗಿರುವ ಟೈಲ್ಸ್ ಬ್ರೇಕಿಂಗ್ ಬಗ್ಗೆ ಇರುವ ಆತಂಕ ದೂರ ಮಾಡಿಸುವ ಸಲುವಾಗಿ, ತರಬೇತಿಯಲ್ಲೇ ಯಾವ ರೀತಿ ಟೈಲ್ಸ್ ಬ್ರೇಕಿಂಗ್ ಮಾಡಬಹುದೆಂದು ಅಧ್ಯಕ್ಷ ಸುರೇಶ್ ಕೆಣಿಚಿರಾ ತಿಳಿಸಿಕೊಟ್ಟರು.
ಈ ರಕ್ಷಣಾತ್ಮಕ ಕಲೆಗಳನ್ನು ಕಲಿತ ಮಹಿಳೆಯರು ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಅನುಭವವಾಗಿದೆ ಎಂದಿದ್ದು, ಮಹಿಳೆಯರು ಕರಾಟೆ ಕಲಿತುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಸುರೇಶ್ ಕೆಣಿಚಿರಾ ತಿಳಿಸಿದರು.