

ಚೆನ್ನೈ: ಭಾರತದ ವೈಷ್ಣವಿ ಅಡ್ಕರ್ ಮತ್ತು ಋತುಜಾ ಬೋಸಲೆ ಜೋಡಿ ಡಬ್ಲ್ಯುಟಿಎ 250 ಚೆನ್ನೈ ಓಪನ್ ಮಹಿಳಾ ಟೆನಿಸ್ ಟೂರ್ನಿಯಲ್ಲಿ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದೆ.
ಡಬ್ಲ್ಯುಟಿಎ ಟೂರ್ ಮಟ್ಟದಲ್ಲಿ ಡಬಲ್ಸ್ ಫೈನಲ್ಗೇರಿದ ಭಾರತದ ಮೊದಲ ಜೋಡಿ ಎನಿಸಿದ್ದ ವೈಷ್ಣವಿ-ಋತುಜಾ ಜೋಡಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸ್ವಿರ್ಜಲೆಂಡ್ನ ಸಿಮೋನಾ ವಾಲ್ಟರ್ಟ್ ಮತ್ತು ನೈಮಾ ಕರಮೊಕೊ ಜೋಡಿ ಎದುರು 2-6, 0-6 ನೇರಸೆಟ್ಗಳಿಂದ ಏಕಪಕ್ಷೀಯ ಸೋಲು ಅನುಭವಿಸಿತು. ಭಾರತದ ಜೋಡಿ ಪಂದ್ಯದ ಯಾವುದೇ ಹಂತದಲ್ಲಿ ಎದುರಾಳಿಗೆ ಸಮರ್ಥ ಪ್ರತಿರೋಧ ಒಡ್ಡಲು ವಿಫಲವಾಯಿತು.
ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಭಾರತೀಯರು ಕ್ವಾರ್ಟರ್ಫೈನಲ್ಗಿಂತ ಮೇಲೇರಲು ವಿಫಲರಾಗಿದ್ದರು. ಇದು ಭಾರತದಲ್ಲಿ ನಡೆದ ಟೂರ್ನಿಯ ಕೊನೇ ಆವೃತ್ತಿಯಾಗಿದ್ದು, ಮುಂದಿನ ವರ್ಷದಿಂದ ಈ ಡಬ್ಲ್ಯುಟಿಎ 250 ಟೂರ್ನಿ ಫಿಲಿಪ್ಪಿನ್ಸ್ನ ಮನಿಲಾ ಆತಿಥ್ಯದಲ್ಲಿ ನಡೆಯಲಿದೆ.