ವೆಸ್ಟ್​ ಇಂಡೀಸ್​ ಪ್ರವಾಸಕ್ಕೆ ಕೊಹ್ಲಿ ಗೈರು: ಮತ್ತೆ ಕೆಣಕಿದ ಕಪಿಲ್​ ದೇವ್​!

Kohli-Kapildev
Published on

ನವದೆಹಲಿ: ವಿರಾಟ್​ ಕೊಹ್ಲಿಯನ್ನು ತಂಡದಿಂದ ತೆಗೆದುಹಾಕಬೇಕು ಎಂದು ಹೇಳುವ ಮೂಲಕ ಭಾರೀ ಚರ್ಚೆಗೆ ಕಾರಣವಾಗಿದ್ದ ಕಪಿಲ್​ ದೇವ್​ ಮತ್ತೆ ಕೊಹ್ಲಿಯನ್ನು ಕೆಣಕಿದ್ದಾರೆ.

ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿ ವಿರಾಟ್​ ಕೊಹ್ಲಿ ಇಲ್ಲದಿರುವುದನ್ನು ಸಮರ್ಥಿಸಿಕೊಂಡಿರುವ ಕಪಿಲ್​ ದೇವ್​, ಇದು ಸರಿಯಾದ ನಿರ್ಧಾರವಾಗಿದ್ದು, ಆಯ್ಕೆ ತಂಡ ವಿರಾಟ್​ ಕೊಹ್ಲಿ ಅವರನ್ನು ವಿಶ್ರಾಂತಿಗಾಗಿ ಕಳುಹಿಸಿದ್ದರೂ ಸ್ವಾಗತಾರ್ಹ ಎಂಬ ಹೇಳಿಕೆಯನ್ನು ನೀಡಿದ್ದಾರೆ.

ಇದೀಗ ಕಪಿಲ್​ ದೇವ್​ ಅವರ ಈ ಹೇಳಿಕೆ ಕೊಹ್ಲಿ ಅಭಿಮಾನಿಗಳನ್ನು ಕೆರಳಿಸಿದ್ದಾರೆ. ಈ ಹಿಂದೆ ಕೊಹ್ಲಿ ವಿರುದ್ಧ ಹೇಳಿಕೆ ನೀಡಿದ್ದ ಕಪಿಲ್​ ದೇವ್​ ಅವರಿಗೆ ನಾಯಕ ರೋಹಿತ್ ಶರ್ಮಾ ಸರಿಯಾದ ತಿರುಗೇಟು ನೀಡಿದ್ದರು.

ವೆಸ್ಟ್​ಇಂಡೀಸ್​ನ ಟಿ20 ಪ್ರವಾಸಕ್ಕೆ ಗುರುವಾರ ತಂಡದ ಸದಸ್ಯರ ಹೆಸರು ಘೋಷಿಸಿರುವ ಬಿಸಿಸಿಐ ಇದರಲ್ಲಿ ವಿರಾಟ್​ ಕೊಹ್ಲಿ ಹಾಗೂ ಜಸ್​ಪ್ರೀತ್​ ಬುಮ್ರಾ ಹೆಸರು ಕೈ ಬಿಡಲಾಗಿದ್ದು, ಕಾರಣವನ್ನೂ ನೀಡಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net