ಒಲಿಂಪಿಯನ್‌ಗಳಿಗೆ ಪ್ರೋತ್ಸಾಹ, ಪ್ರಧಾನಿ ಮೋದಿಗೆ ಕಪಿಲ್ ದೇವ್ ಶ್ಲಾಘನೆ

modi kapil web
Published on

ನವದೆಹಲಿ: ಭಾರತದ ಒಲಿಂಪಿಕ್ಸ್ ಸ್ಪರ್ಧಿಗಳಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಪ್ರೋತ್ಸಾಹದ ಬಗ್ಗೆ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೋದಿಗೆ ಮುನ್ನ ದೇಶದ ಯಾವ ಪ್ರಧಾನಿ ಕೂಡ ಕ್ರೀಡಾ ಸಂಸ್ಕೃತಿ ತರುವ ಬಗ್ಗೆ ಮಾತನಾಡಿರಲಿಲ್ಲ. ಮಕ್ಕಳಿಗೆ ಕ್ರೀಡೆಯಲ್ಲಿ ತೊಡಗಿಕೊಳ್ಳಲು ಅವಕಾಶ ನೀಡುವಂತೆ ಪೋಷಕರನ್ನು ಒತ್ತಾಯಿಸಿರಲಿಲ್ಲ. ಅಲ್ಲದೆ ಸ್ವತಃ ಪ್ರಧಾನಿ ಕೂಡ ಕ್ರೀಡಾ ಚಟುವಟಿಕೆ ಮತ್ತು ಕ್ರೀಡಾಪಟುಗಳ ಬಗ್ಗೆ ಇಷ್ಟೊಂದು ಆಸಕ್ತಿ ತೋರಿರಲಿಲ್ಲ ಎಂದು ಕಪಿಲ್ ಶ್ಲಾಸಿದ್ದಾರೆ.

ಕ್ರೀಡಾಪಟುಗಳು ಯಶಸ್ಸು ಕಂಡಾಗ ಹಿಂದೆಯೂ ಸನ್ಮಾನಿಸಲಾಗುತ್ತಿತ್ತು. ಆದರೆ ಸೋತಾಗಲೂ ಕ್ರೀಡಾಪಟುಗಳನ್ನು ಹುರಿದುಂಬಿಸಿರುವುದು ಮತ್ತು ಅವರ ಅತ್ಯುತ್ತಮ ನಿರ್ವಹಣೆಯನ್ನು ಗುರುತಿಸಿರುವುದು ಇದೇ ಮೊದಲು ಎಂದೂ ಕಪಿಲ್ ಹೇಳಿದ್ದಾರೆ.

ಭಾಷಣ, ಔಪಚಾರಿಕತೆ ಇಲ್ಲದೆ ಒಲಿಂಪಿಯನ್‌ಗಳ ಜತೆಗೆ ಮೋದಿ ಸಹಜವಾಗಿಯೇ ಬೆರೆತು ಮಾತನಾಡಿದ ಬಗ್ಗೆಯೂ ಕಪಿಲ್ ಪ್ರಶಂಸಿಸಿದ್ದಾರೆ. ‘ಮೋದಿ ಜೀ, ನೀವು ಇಡೀ ಕ್ರೀಡಾ ಜಗತ್ತಿನ ಹೃದಯ ಗೆದ್ದಿದ್ದೀರಿ’ ಎಂದು 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ಪತ್ರಿಕಾ ಅಂಕಣವೊಂದರಲ್ಲಿ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net