ಬಡ ವಿದ್ಯಾರ್ಥಿಯ ಕಾಲೇಜು ಫೀಸ್​ ಕಟ್ಟುತ್ತಿರೋ ಕನ್ನಡಿಗ KL Rahul

kl rahul
Published on

ಬೆಂಗಳೂರು: ಕೆ.ಎಲ್.ರಾಹುಲ್.. ( KL Rahul ) ಅದ್ಭುತ ನಾಯಕ ಹಾಗೂ ಓಪನರ್. ತಂಡದ ಅಗತ್ಯಕ್ಕೆ ತಕ್ಕಂತೆ ಓಪನರ್​, ಮಿಡಲ್​ ಆರ್ಡರ್​ನಲ್ಲಿ ಬ್ಯಾಟ್ ಕೂಡ ಬೀಸಬಲ್ಲರು. ತನ್ನ ಬ್ಯಾಟಿಂಗ್​ ಮೂಲಕವೇ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದ ಕೆ.ಎಲ್​ ರಾಹುಲ್​ ಮೈದಾನದ ಹೊರಗೂ ಹೀರೋನೆ ಆಗಿದ್ದಾರೆ.

KL Rahul

ಅಪರೂಪದ ಕಾಯಿಲೆಯೊಂದಿಗೆ ಹೋರಾಡುತ್ತಿರುವ 11 ವರ್ಷದ ಮಗುವಿನ ಜೀವ ಉಳಿಸಲು 31 ಲಕ್ಷ ರೂ. ದೇಣಿಗೆ ನೀಡಿ ಕೆ.ಎಲ್​ ರಾಹುಲ್​ ಸುದ್ದಿಯಾಗಿದ್ದರು. ಈಗ ಬಡ  ವಿದ್ಯಾರ್ಥಿಯ ಸಂಪೂರ್ಣ ಓದಿನ ಜವಾಬ್ದಾರಿ ಹೊತ್ತಿದ್ದಾರಂತೆ.

ಕೆ.ಎಲ್​ ರಾಹುಲ್​ ಅವರಿಂದ ಸಹಾಯ ಪಡೆದ ವಿದ್ಯಾರ್ಥಿಯೇ ಮಾತಾಡಿ, ನನ್ನ ಹೆಸರು ಅಮೃತ್​ ಮಾವಿನಕಟ್ಟಿ. ನಾನು ಬಾಗಲಕೋಟೆ ಕಾಲೇಜಿನಲ್ಲಿ ಡಿಗ್ರಿ ಓದುತ್ತಿರೋ ವಿದ್ಯಾರ್ಥಿ. ಕಳೆದ ವರ್ಷ ನನ್ನ ಕಾಲೇಜು ಫೀಸ್​ ಕಟ್ಟಿದ್ದು ಕೆ.ಎಲ್​ ರಾಹುಲ್​ ಅವರು. ಇದರ ಫಲವಾಗಿ ನಾನು ಶೇ.90ಕ್ಕೂ ಹೆಚ್ಚು ಅಂಕ ಪಡೆದು ಕೆ.ಎಲ್​ ರಾಹುಲ್​ ಹೆಸರಿಗೆ ಕೀರ್ತಿ ತಂದಿದ್ದೇನೆ. ಈ ವರ್ಷ ಕೂಡ ಕೆ.ಎಲ್​ ರಾಹುಲ್​ ಅವರು 75 ಸಾವಿರ ರೂ. ನನ್ನ ಕಾಲೇಜು ಫೀಸ್​ ಕಟ್ಟಿದ್ರು. ನನ್ನ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ ಎಂದರು.

ಕೆ.ಎಲ್.ರಾಹುಲ್ ಅವರ ಈ ಸಹಾಯ ಗುಣಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.   ಆರ್​ಸಿಬಿಗೆ ಬರ್ತಾರೆ ಅನ್ನೋ ಸುದ್ದಿ ಇದೆ. ರೆಡ್ ಆರ್ಮಿಗೆ ಬಿಗ್ ಅಡ್ವಾಂಟೇಜ್​​​​​​​​​​​​​​​ ಆಗುತ್ತೆ. ಚಿನ್ನಸ್ವಾಮಿಯಲ್ಲಿ ಆಡಿ, ಬೆಳೆದ ರಾಹುಲ್​ ಆರ್​​ಸಿಬಿ ಕ್ಯಾಪ್ಟನ್​ ಆದ್ರೆ, ಫ್ಯಾನ್ಸ್​ ಫುಲ್​ ಖುಷ್​ ಆಗ್ತಾರೆ. ಕೆ.ಎಲ್​ ರಾಹುಲ್​ ಆರ್​​ಸಿಬಿಗೆ ಬರಲಿ ಎಂದು ಫ್ಯಾನ್ಸ್​ ಕಾಯ್ತಾ ಇದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net