ಪದಾರ್ಪಣೆಯ ಪಂದ್ಯದಲ್ಲಿ ವಿಶೇಷ ದಾಖಲೆ ಬರೆದ ಕನ್ನಡಿಗ ದೇವದತ್​ ಪಡಿಕ್ಕಲ್​; ಸಚಿನ್​, ಕೊಹ್ಲಿಗೂ ಈ ಅವಕಾಶ ಸಿಕ್ಕಿರಲಿಲ್ಲ!

padikkal web
Published on

ಧರ್ಮಶಾಲಾ: ಕನ್ನಡಿಗ ದೇವದತ್​ ಪಡಿಕ್ಕಲ್​ (65 ರನ್​, 103 ಎಸೆತ, 10 ಬೌಂಡರಿ, 1 ಸಿಕ್ಸರ್​) ಕಳೆದ 37 ವರ್ಷಗಳಲ್ಲಿ ಭಾರತ ಪರ ಪದಾರ್ಪಣೆಯ ಟೆಸ್ಟ್​ನಲ್ಲೇ 4ನೇ ಕ್ರಮಾಂಕದಲ್ಲಿ ಆಡಿದ ಮೊದಲ ಬ್ಯಾಟರ್​ ಎನಿಸಿದರು. ಸಚಿನ್​ ತೆಂಡುಲ್ಕರ್​, ವಿರಾಟ್​ ಕೊಹ್ಲಿ ಅವರಂಥ ಬ್ಯಾಟರ್​ಗಳು ಟೆಸ್ಟ್​ ಕ್ರಿಕೆಟ್​ನಲ್ಲಿ ಈ ಕ್ರಮಾಂಕದಲ್ಲೇ ಹೆಚ್ಚಿನ ರನ್​ ಸಿಡಿಸಿದ್ದಾರೆ. ಆದರೆ, ಪಡಿಕ್ಕಲ್​ಗೆ ಮುನ್ನ 1988ರಲ್ಲಿ ಕೊನೆಯದಾಗಿ ಡಬ್ಲ್ಯುವಿ ರಾಮನ್​ ಕೊನೆಯದಾಗಿ ಪದಾರ್ಪಣೆಯ ಟೆಸ್ಟ್​ನಲ್ಲೇ 4ನೇ ಕ್ರಮಾಂಕದಲ್ಲಿ ಆಡಿದ್ದರು. ಸಚಿನ್​, ಕೊಹ್ಲಿಗೂ ಪದಾರ್ಪಣೆಯ ಟೆಸ್ಟ್​ನಲ್ಲಿ 4ನೇ ಕ್ರಮಾಂಕದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.

ಇದಕ್ಕೆ ಮುನ್ನ ಸಿಕೆ ನಾಯ್ಡು, ವಿಜಯ್​ ಹಜಾರೆ, ಹೇಮು ಅಧಿಕಾರಿ, ಮನ್ಸೂರ್​ ಅಲಿ ಖಾನ್​ ಪಟೌಡಿ, ಜಿಆರ್​ ವಿಶ್ವನಾಥ್​ರಂಥ ದಿಗ್ಗಜರು ಚೊಚ್ಚಲ ಟೆಸ್ಟ್​ನಲ್ಲೇ 4ನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆದಿದ್ದರು. ಈ ಪೈಕಿ ಪಡಿಕ್ಕಲ್​ (65) ಪದಾರ್ಪಣೆ ಟೆಸ್ಟ್​ನಲ್ಲಿ 4ನೇ ಕ್ರಮಾಂಕದಲ್ಲಿ 2ನೇ ಗರಿಷ್ಠ ರನ್​ ಗಳಿಸಿದ ಭಾರತೀಯರಾಗಿದ್ದಾರೆ. ಮತ್ತೋರ್ವ ಕನ್ನಡಿಗ ಜಿಆರ್​ ವಿಶ್ವನಾಥ್​ 1969ರಲ್ಲಿ ಕಾನ್ಪುರದಲ್ಲಿ ಆಸೀಸ್​ ವಿರುದ್ಧ ಪದಾರ್ಪಣೆಯ ಪಂದ್ಯದಲ್ಲೇ 137 ರನ್​ ಗಳಿಸಿದ್ದು ಸರ್ವಾಧಿಕವೆನಿಸಿದೆ.

ಪಂದ್ಯಕ್ಕೆ ಮುನ್ನಾದಿನ ಅಭ್ಯಾಸದ ವೇಳೆ ರಜತ್​ ಪಾಟೀದಾರ್​ ಗಾಯಗೊಂಡಿದ್ದರಿಂದ ನನಗೆ ರಾತ್ರಿಯೇ, ನಾನು ಆಡಲೂಬಹುದು ಎಂಬ ಸಂದೇಶ ಬಂದಿತ್ತು. ನಾನಾಗ ನರ್ವಸ್​ ಆಗಿದ್ದೆ. ರಾತ್ರಿ ನಿದ್ರಿಸುವುದೇ ಕಷ್ಟವಾಗಿತ್ತು. ಆದರೆ ಅದನ್ನು ನಾನು ಆನಂದಿಸಿದೆ. ನನ್ನ ಮೊದಲ ಬೌಂಡರಿ ಹೆಚ್ಚು ಖುಷಿ ನೀಡಿತು ಎಂದು ದೇವದತ್​ ಪಡಿಕ್ಕಲ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net