

ಕ್ಯಾಲಿಫೋರ್ನಿಯಾ: ಅವನೀಶ್ ಬೆಂಕಿಯವರು ಇದೇ ಏಪ್ರಿಲ್ 13 ರಿಂದ 15 ರವರೆಗೆ ಶಾರ್ಲೆಟ್, ನಾರ್ತ್ ಕ್ಯಾರೋಲಿನಾದಲ್ಲಿ ನಡೆದ "ನ್ಯಾಷನಲ್ ಕಾಲೇಜಿಯೇಟ್ ಬಾಕ್ಸಿಂಗ್" ಟೂರ್ನಮೆಂಟಿನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.
ಫೈನಲ್ ಪಂದ್ಯದಲ್ಲಿ ಕ್ಯಾಲಿಫೋರ್ನಿಯಾ ರಾಜ್ಯದ ಸಂತಾಕ್ಲಾರದ ಬಾಕ್ಸಿಂಗ್ ಚಾಂಪಿಯನ್ ಇತನ್ ಚುಂಗ್ ಅವರನ್ನು ಸೋಲಿಸಿ, ವಿಜಯೋತ್ಸವ ಆಚರಿಸಿದರು.
ಕರ್ನಾಟಕ ಮೂಲದ ಅಪ್ಪಟ ಕನ್ನಡಿಗ ಬೆಂಕಿ ಬಸಣ್ಣನವರ ಹೆಮ್ಮೆಯ ಮಗ 19 ವರ್ಷದ ಅವನೀಶ್ ಬೆಂಕಿ, ವಿಶ್ವವಿಖ್ಯಾತ ಪ್ರತಿಷ್ಠಿತ ಯುನೈಟೆಡ್ ಸ್ಟೇಟ್ಸ್ ಮಿಲ್ಟ್ರಿ ಅಕಾಡೆಮಿ, ವೆಸ್ಟ್ ಪಾಯಿಂಟ್ನಲ್ಲಿ ವಿದ್ಯಾಭಾಸ ಮಾಡುತ್ತಿದ್ದಾರೆ. ಅವನೀಶ್ ತನ್ನ ಕಾಲೇಜು ಜೀವನದ ಮೊದಲ ವರ್ಷವೇ ತನ್ನ ತೂಕದ ಕೆಟಗರಿಯಲ್ಲಿ ನ್ಯಾಷನಲ್ ಕಾಲೇಜಿಯಟ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗಳಿಸಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ.
ಈ ಹಿಂದೆ 2013ರಲ್ಲಿ ಕೇವಲ 9 ವರ್ಷದವನಿದ್ದಾಗ ಬ್ಲಾಕ್ ಬೆಲ್ಟ್ ಪಡೆದಿದ್ದ ಅವನೀಶ್ ಬೆಂಕಿ, ಫ್ಲೋರಿಡಾ ರಾಜ್ಯದ ಪೋರ್ಟ್ ಲಾಡರ್ಡೇಲ್ನಲ್ಲಿ ನಡೆದ ನ್ಯಾಷನಲ್ ಲೆವೆಲ್ ತೈ ಕ್ವಾನ್ ಡೊ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದರು. ಹಾಗೆಯೇ ಟೆನ್ನಿಸ್ನಲ್ಲಿ ಸಹಿತ ಒಳ್ಳೆಯ ಆಟಗಾರನಾಗಿರುವ ಅವನೀಶ್, ನ್ಯೂಯಾರ್ಕ್ ಟೆನಿಸ್ ಪಂದ್ಯಾವಳಿಯಲ್ಲಿ ತನ್ನ ನಿಸ್ಕಯುನಾ ಹೈಸ್ಕೂಲ್ ಅನ್ನು ಪ್ರತಿನಿಧಿಸಿದ್ದಾರೆ.