14ನೇ ಐಪಿಎಲ್‌ನಲ್ಲೂ ಸನ್‌ರೈಸರ್ಸ್‌ ಪರ ಕೇನ್ ವಿಲಿಯಮ್ಸನ್ ಆಟ..?

kane williamson for web
Published on

ಹೈದರಾಬಾದ್: ಸನ್‌ರೈಸರ್ಸ್‌ ಹೈದರಾಬಾದ್ ತಂಡದಲ್ಲಿ ಪ್ರತಿಭಾನ್ವಿತ ವಿದೇಶಿ ಆಟಗಾರರೇ ತುಂಬಿದ್ದಾರೆ. ವಿದೇಶಿ ಆಟಗಾರರ ಕೋಟಾದಲ್ಲಿ ಸ್ಥಾನ ಪಡೆಯುವುದೇ ದೊಡ್ಡ ಸಾಹಸ. ನಾಯಕ ಡೇವಿಡ್ ವಾರ್ನರ್, ರಶೀದ್ ಖಾನ್ ಕಾಯಂ ಸದಸ್ಯರು, ಉಳಿದ ಎರಡು ಸ್ಥಾನಗಳಿಗೆ ಕೇನ್ ವಿಲಿಯಮ್ಸನ್, ಜಾನಿ ಬೇರ್‌ಸ್ಟೋ, ಮೊಹಮದ್ ನಬಿ ನಡುವೆ ಪ್ರಬಲ ಪೈಪೋಟಿ ಏರ್ಪಡುವುದು ಗ್ಯಾರಂಟಿ. ಕಳೆದ ಆವೃತ್ತಿಗಳಿಗೆ ಹೋಲಿಸಿದರೆ, ಈ ಬಾರಿ ವಿಲಿಯಮ್ಸನ್ ನಿರ್ವಹಣೆ ಅಷ್ಟಕಷ್ಟೆ. ಇದರಿಂದಾಗಿ ಬಹುತೇಕ ಅಭಿಮಾನಿಗಳು ಮುಂದಿನ ಆವೃತ್ತಿಗೆ ಕೇನ್ ವಿಲಿಯಮ್ಸನ್ ಅವರನ್ನು ತಂಡದಿಂದ ಕೈಬಿಡಲಾಗುತ್ತಿದೆ ಎಂದೆಲ್ಲಾ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ, ವಿಲಿಯಮ್ಸನ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲಾಗುವುದು ಎಂದು ನಾಯಕ ಡೇವಿಡ್ ವಾರ್ನರ್ ಭರವಸೆ ನೀಡಿದ್ದಾರೆ.

ಮುಂದಿನ ಆವೃತ್ತಿಗೂ ಮೊದಲೇ ಬಿಸಿಸಿಐ ಮೆಗಾ ಹರಾಜು ಪ್ರಕ್ರಿಯೆ ಕೈಗೊಳ್ಳಲಿದ್ದು, ಮತ್ತೊಂದು ತಂಡವನ್ನು ಸೇರ್ಪಡೆಗೊಳಿಸುವ ಸಾಧ್ಯತೆಗಳಿವೆ. ಹೀಗಾಗಿ ವಿಲಿಯಮ್ಸನ್‌ ಅವರನ್ನು ತಂಡದಿಂದ ಕೈಬಿಡಲಾಗುತ್ತಿದೆ ಎಂದೆಲ್ಲಾ ಹೇಳಲಾಗಿತ್ತು. ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ವಾರ್ನರ್, ಕೇನ್ ವಿಲಿಯಮ್ಸನ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಪ್ರಸಕ್ತ ಐಪಿಎಲ್‌ನಲ್ಲಿ ವಿಲಿಯಮ್ಸನ್ ಆಡಿದ 12 ಪಂದ್ಯಗಳಿಂದ 317 ರನ್ ಪೇರಿಸಿದ್ದರು. ಒಂದು ವೇಳೆ ಸನ್‌ರೈಸರ್ಸ್‌ ತಂಡದಿಂದ ಕೈಬಿಟ್ಟರೂ ಸಿಎಸ್‌ಕೆ ಹಾಗೂ ಕೆಕೆಆರ್ ತಂಡಗಳು ನ್ಯೂಜಿಲೆಂಡ್ ತಂಡದ ನಾಯಕ ವಿಲಿಯಮ್ಸನ್ ಅವರನ್ನು ಕೊಂಡುಕೊಳ್ಳಲು ಆಸಕ್ತಿ ತೋರಿವೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net