ಅಲ್ಪಮೊತ್ತಕ್ಕೆ ಕುಸಿದ ಕೆಎಸ್‌ಸಿಎ ಕೋಲ್ಟ್ಸ್

himachal pradesh-ksca
Published on

ವೇಗಿ ದಿವೇಶ್ ಶರ್ಮ ಹ್ಯಾಟ್ರಿಕ್ ವಿಕೆಟ್ ಸಾಧನೆ(42ಕ್ಕೆ 3), ಅರ್ಪಿತ್ ಗುಲೇರಿಯ(21ಕ್ಕೆ 3) ಹಾಗೂ ವಿಪಿನ್ ಶರ್ಮ(54ಕ್ಕೆ3) ಅವರ ಮಾರಕ ದಾಳಿಗೆ ನಲುಗಿದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಕೋಲ್ಟ್ಸ್ ತಂಡ ಕ್ಯಾಪ್ಟನ್ ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ವಿರುದ್ಧ ಅಲ್ಪ ಮೊತ್ತಕ್ಕೆ ಕುಸಿದಿದೆ.

ಇದರೊಂದಿಗೆ ಕೋಲ್ಟ್ಸ್ ತಂಡ ಮೊದಲ ಇನಿಂಗ್ಸ್ ಹಿನ್ನಡೆಯ ಭೀತಿಯಲ್ಲಿದ್ದರೆ, ಹಿಮಾಚಲ ಪ್ರದೇಶ ತಂಡ ಪಂದ್ಯದ ಮೇಲೆ ಬಿಗಿಹಿಡಿತ ಸಾಧಿಸುವತ್ತ ಪ್ರಯತ್ನದಲ್ಲಿದೆ.

ನಗರದ ಎಸ್‌ಜೆಸಿಇ ಕ್ರಿಕೆಟ್ ಮೈದಾನದಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಎಸ್‌ಸಿಎ ಕೋಲ್ಟ್ಸ್ ಭರ್ತಿ 41 ಓವರ್‌ಗಳಲ್ಲಿ 140 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಹಿಮಾಚಲ ಪ್ರದೇಶ ತಂಡ ದಿನದ ಅಂತ್ಯಕ್ಕೆ 39 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ ಕೇವಲ 134 ರನ್ ಪೇರಿಸಿದೆ.

ಆರಂಭಿಕ ರವಿ ಠಾಕೂರ್(5) ನಿರ್ಗಮದ ಬಳಿಕ 2ನೇ ವಿಕೆಟ್‌ಗೆ 128 ರನ್‌ಗಳ ಅಜೇಯ ಜತೆಯಾಟದ ಮೂಲಕ ಹಿಮಾಚಲ ಪ್ರದೇಶ ತಂಡಕ್ಕೆ ಭದ್ರ ಬುನಾದಿ ಹಾಕಿರುವ ಅಂಕುಶ್ ಬೈನ್ಸ್(76ರನ್, 121 ಎಸೆತ, 12 ಬೌಂಡರಿ, 1 ಸಿಕ್ಸರ್) ಹಾಗೂ ಸಿದ್ಧಾಂತ್ ಪುರೋಹಿತ್(52 ರನ್, 103 ಎಸೆತ, 6 ಬೌಂಡರಿ) 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net