ಖೇಲ್​ರತ್ನ ಪ್ರಶಸ್ತಿ ಸಿಗದ ನಿರಾಸೆಯಲ್ಲಿ ನ್ಯಾಯಾಲಯದ ಮೆಟ್ಟಿಲೇರಲು ಮುಂದಾದ ಬಿಲ್ಗಾರ್ತಿ ಜ್ಯೋತಿ!

jyothi khelratna web
Published on

ನವದೆಹಲಿ: ಮಹಿಳೆಯರ ಕಂಪೌಂಡ್​ ಸಿಂಗಲ್ಸ್​ನಲ್ಲಿ ವಿಶ್ವ ನಂ. 1 ಬಿಲ್ಗಾರ್ತಿಯಾಗಿರುವ ಜ್ಯೋತಿ ಸುರೇಖಾ ಕಳೆದ 6 ತಿಂಗಳಲ್ಲಿ ಏಷ್ಯನ್​ ಗೇಮ್ಸ್​ ಚಿನ್ನ ಸಹಿತ 13 ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಇದರ ನಡುವೆಯೂ ಖೇಲ್​ರತ್ನ ಪ್ರಶಸ್ತಿಗೆ ತನ್ನನ್ನು ಪರಿಗಣಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ನ್ಯಾಯಾಲಯದ ಮೆಟ್ಟಿಲೇರುವ ಚಿಂತನೆ ನಡೆಸಿದ್ದಾರೆ.

ಖೇಲ್​ರತ್ನ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದವರಲ್ಲಿ ಪದಕ ಗೆದ್ದ ಆಧಾರದಲ್ಲಿ ನನಗೆ ಗರಿಷ್ಠ 148.74 ಅಂಕ ಲಭಿಸುತ್ತದೆ. ಆದರೂ ನನ್ನನ್ನು ಕಡೆಗಣಿಸಲಾಗಿದೆ ಎಂದು ಆಂಧ್ರದ ಜ್ಯೋತಿ ಅಳಲು ತೋಡಿಕೊಂಡಿದ್ದಾರೆ. ಜ್ಯೋತಿ ಈ ಹಿಂದೆಯೇ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಈ ಬಾರಿ ಬ್ಯಾಡ್ಮಿಂಟನ್​ ತಾರೆಯರಾದ ಚಿರಾಗ್​ ಶೆಟ್ಟಿ ಮತ್ತು ಸಾತ್ವಿಕ್​ ಸಾಯಿರಾಜ್​ಗೆ ಮಾತ್ರ ಖೇಲ್​ರತ್ನ ಪ್ರಶಸ್ತಿ ನೀಡಲು ಕೇಂದ್ರ ಕ್ರೀಡಾ ಸಚಿವಾಲಯ ನಿರ್ಧರಿಸಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net