ಕಾಲಿವುಡ್​ ಖ್ಯಾತ ನಟನನ್ನು ವರಿಸಲಿದ್ದಾರೆ ಬ್ಯಾಡ್ಮಿಂಟನ್​ ತಾರೆ ಜ್ವಾಲಾ ಗುಟ್ಟಾ!

Jwalagutta
Published on

ಚೆನ್ನೈ: ಶುಕ್ರವಾರವಷ್ಟೇ ಕಾಲಿವುಡ್​ ನಟ ವಿಷ್ಣು ವಿಶಾಲ್​ 36ನೇ ಹುಟ್ಟಹಬ್ಬ ಆಚರಿಸಿಕೊಂಡಿದ್ದು, ಗೆಳತಿ ಹಾಗೂ ಬ್ಯಾಡ್ಮಿಂಟನ್​ ತಾರೆ ಜ್ವಾಲಾ ಗುಟ್ಟಾ ವಿಷ್ಣು ಮನೆಗೆ ದಿಢೀರ್​ ಭೇಟಿ ನೀಡುವ ಮೂಲಕ ಸ್ಪೆಷಲ್​ ಸರ್ಪ್ರೈಸ್​ ನೀಡಿದ್ದರು. ಇದೀಗ ಅವರಿಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನಟ ವಿಷ್ಣು, ಜ್ವಾಲಾ ಗುಟ್ಟಾರೊಂದಿಗೆ ಕೇಕ್​ ಕತ್ತರಿಸಿ ಬರ್ತಡೇ ಸಂಭ್ರಮ ಆಚರಿಸಿರುವ ಫೋಟೋಗಳನ್ನು ಟ್ವಿಟರ್​ನಲ್ಲಿ ವಿಶಾಲ್​ ಹಂಚಿಕೊಂಡಿದ್ದಾರೆ. ಇಬ್ಬರ ನಡುವೆ ಲವ್ವಿಡವ್ವಿ ಇದೆ ಎಂದು ಹೇಳಲಾಗುತ್ತಿದೆ. ಶೀಘ್ರದಲ್ಲೇ ಮದುವೆ ಆಗುವ ತಯಾರಿ ಮಾಡಿಕೊಳ್ಳುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಮದುವೆ ಪ್ಲ್ಯಾನ್​ ಮಾಡಿರುವುದಾಗಿ ಸಂದರ್ಶನದಲ್ಲಿ ಜ್ವಾಲಾ ಸಹ ಬಹಿರಂಗಪಡಿಸಿದ್ದರು.

ವಿಶಾಲ್​ ಸಹ ಇತ್ತೀಚೆಗೆ ತಮ್ಮ ಅಭಿಮಾನಿಗಳೊಂದಿಗೆ ನಡೆದ ಪ್ರಶ್ನೊತ್ತರ ಚಟುವಟಿಕೆಯಲ್ಲಿ ಜ್ವಾಲಾ ಗುಟ್ಟ ಬಗ್ಗೆ ಪ್ರಸ್ತಾಪಿಸಿದ್ದರು. ವಿಶಾಲ್​ ತಂಗಿ ಮದುವೆಯ ಸಂಗೀತ ಕಾರ್ಯಕ್ರದಮಲ್ಲಿ ಮೊದಲ ಬಾರಿಗೆ ಜ್ವಾಲರನ್ನು ವಿಶಾಲ್​ ಭೇಟಿ ಮಾಡಿದರಂತೆ. ಅಲ್ಲಿಂದಾಚೆಗೆ ಇಬ್ಬರು ಫ್ರೆಂಡ್ಸ್​ ಆಗಿದ್ದಾರೆ. ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಸದ್ಯ ಇಬ್ಬರು ತಮ್ಮ ಸಂಬಂಧಕ್ಕೆ ಇಂದು ರೂಪ ಕೊಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ವಿಶಾಲ್​, ಎಫ್​ಐಆರ್​ ಮತ್ತು ಮೋಹನ್​ ದಾಸ್​ ಹೆಸರಿನ ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net