

ಪಾಟ್ಚೇಫ್ಸ್ಟ್ರೋಮ್: ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ 104 ರನ್ಗಳಿಂದ ಹೀನಾಯ ಸೋಲುಣಿಸುವ ಮೂಲಕ ಬಾಂಗ್ಲಾದೇಶ ತಂಡ 19 ವಯೋಮಿತಿ ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲಿ 2ನೇ ಬಾರಿಗೆ ಸೆಮಿಫೈನಲ್ಗೇರಿದೆ.
2016ರಲ್ಲಿ ತವರಿನಲ್ಲಿ ನಡೆದ ವಿಶ್ವಕಪ್ನಲ್ಲಿ ಬಾಂಗ್ಲಾ ಮೊದಲ ಬಾರಿ ಈ ಸಾಧನೆ ಮಾಡಿತ್ತು. ಗುರುವಾರ ನಡೆದ ಕ್ವಾರ್ಟರ್ಫೈನಲ್ನಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಬಾಂಗ್ಲಾ, 5 ವಿಕೆಟ್ಗೆ 261 ರನ್ ಪೇರಿಸಿತು.
ಪ್ರತಿಯಾಗಿ ಎಡಗೈ ಸ್ಪಿನ್ನರ್ ರಕಿಬುಲ್ ಹಸನ್ (19ಕ್ಕೆ 5) ದಾಳಿಗೆ ಕುಸಿದ ದ. ಆಫ್ರಿಕಾ, 42.3 ಓವರ್ಗಳಲ್ಲಿ 157 ರನ್ಗೆ ಸರ್ವಪತನ ಕಂಡು ತವರಿನಲ್ಲೇ ನಿರಾಸೆ ಅನುಭವಿಸಿತು. ಫೆಬ್ರವರಿ 6ರಂದು ಇಲ್ಲೇ ನಡೆಯಲಿರುವ ಸೆಮಿಫೈನಲ್ನಲ್ಲಿ ಬಾಂಗ್ಲಾ, ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.