ಇವರೊಬ್ಬರು ಇಲ್ಲ ಅಂದ್ರೆ ಟೀಮ್ ಇಂಡಿಯಾ ಜೀರೋ! ಅಚ್ಚರಿ ಹೇಳಿಕೆ ನೀಡಿದ ಪಾಕ್ ಕ್ರಿಕೆಟಿಗ

ವಿಜಯವಾಣಿ - 2024-08-08T182943.621
Published on

ನವದೆಹಲಿ: ಇತ್ತೀಚೆಗೆ ನಡೆದ ಶ್ರೀಲಂಕಾ ವಿರುದ್ಧದ ಟಿ20 ಸರಣಿ ಗೆದ್ದ ಟೀಮ್ ಇಂಡಿಯಾ ಅದೇ ಸಂತಸದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದ್ರೆ, ನಿನ್ನೆ (ಆ.07) ನಡೆದ ಮೂರನೇ ಪಂದ್ಯದಲ್ಲಿಯೂ ಲಂಕಾ ಬೌಲರ್​​ಗಳ​ ದಾಳಿಗೆ ತತ್ತರಿಸಿದ ಭಾರತ, 138ಕ್ಕೆ ಆಲ್​ಔಟ್ ಆಗುವ ಮುಖೇನ ಸರಣಿಯನ್ನು ಕೈಚೆಲ್ಲಿತು. ಟಿ20 ಸಿರೀಸ್​ ಸೋತಿದ್ದ ಲಂಕಾ ಪಡೆ ಇದೀಗ ಏಕದಿನ ವಶಪಡಿಸಿಕೊಂಡಿದ್ದೇ ತಡ ಸಂಭ್ರಮದಲ್ಲಿ ತೇಲಾಡುತ್ತಿದೆ. ಒಂದೆಡೆ ಶ್ರೀಲಂಕಾಗೆ ಮೆಚ್ಚುಗೆಗಳು ಹರಿದುಬರುತ್ತಿದ್ದರೆ, ಮತ್ತೊಂದೆಡೆ ಟೀಮ್ ಇಂಡಿಯಾ ಸೋಲನ್ನು ಕೆಲವರು ಟೀಕಿಸುತ್ತಿದ್ದಾರೆ.

ಇದೀಗ ಈ ಸಾಲಿಗೆ ಪಾಕಿಸ್ತಾನದ ಕ್ರಿಕೆಟಿಗ ಜುನೈದ್​ ಖಾನ್​ ಕೂಡ ಸೇರಿದ್ದಾರೆ. 2-0 ಅಂತರದಿಂದ ಮೆನ್​ ಇನ್ ಬ್ಲ್ಯೂ ಪಡೆಯನ್ನು ಮಣಿಸಿದ ಶ್ರೀಲಂಕಾವನ್ನು ಉತ್ತುಂಗಕ್ಕೇರಿಸಿದ ಜುನೈದ್​, ಟೀಮ್ ಇಂಡಿಯಾದಲ್ಲಿ ವೇಗಿ ಜಸ್ಪ್ರಿತ್ ಬುಮ್ರಾ ಇಲ್ಲಿದಿದ್ದರೆ ತಂಡ ಜೀರೋ ಆಗುತ್ತದೆ. ಲಂಕಾ ವಿರುದ್ಧ ಬೌಲಿಂಗ್​ನಲ್ಲಿ ಕಮಾಲ್ ಮಾಡದ ಭಾರತೀಯ ಬೌಲರ್​ಗಳು, ಬುಮ್ರಾ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ ಎಂದು ಹೇಳಿದ್ದಾರೆ.

ಟಿ20 ವಿಶ್ವಕಪ್​ ಗೆದ್ದ ಭಾರತ ತಂಡದಲ್ಲಿದ್ದ ಜಸ್ಪ್ರಿತ್ ಬುಮ್ರಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಎದುರಾಳಿ ತಂಡದ ಬ್ಯಾಟ್ಸ್​ಮನ್​ಗಳ ವಿಕೆಟ್ ಕಬಳಿಸುವಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಬುಮ್ರಾಗೆ ವಿಶ್ವಕಪ್ ಟೂರ್ನಿ ಬಳಿಕ ವಿಶ್ರಾಂತಿ ಕೊಡಲಾಗಿದೆ. ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ತಂಡದಿಂದ ಹೊರಗುಳಿದ ಜಸ್ಪ್ರಿತ್, ಶ್ರೀಲಂಕಾ ಸರಣಿಗೂ ಹಾಜರಾಗಲಿಲ್ಲ. ಇದನ್ನೇ ಬಲವಾದ ಕಾರಣವನ್ನಾಗಿಸಿಕೊಂಡ ಜುನೈದ್​, ಟೀಮ್ ಇಂಡಿಯಾಗೆ ಬುಮ್ರಾ ಅವರ ಅವಶ್ಯಕತೆ ಹೆಚ್ಚಿದೆ. ಅವರಿಲ್ಲದೆ ಇದ್ದರೆ ಇಡೀ ಬೌಲಿಂಗ್​ ಯೂನಿಟ್​ ಜೀರೋ ಎಂದು ಟೀಕಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net