ವಿಶ್ವಕಪ್​ ಗೆದ್ದ ಬಳಿಕ ತುಟಿಗೆ ಮುತ್ತಿಟ್ಟಿದ್ದಕ್ಕೆ ಕ್ರಿಮಿನಲ್​ ದೂರು ಸಲ್ಲಿಸಿದ ಸ್ಪೇನ್​ ಆಟಗಾರ್ತಿ!

kiss web
Published on

ಮ್ಯಾಡ್ರಿಡ್​: ಕಳೆದ ತಿಂಗಳು ಆಸ್ಟ್ರೆಲಿಯಾದಲ್ಲಿ ಮುಕ್ತಾಯಗೊಂಡ ಫಿಫಾ ವಿಶ್ವಕಪ್​ನಲ್ಲಿ ಸ್ಪೇನ್​ ಫುಟ್​ಬಾಲ್​ ತಂಡ ಚೊಚ್ಚಲ ವಿಶ್ವಕಪ್​ ಗೆದ್ದು ಬೀಗಿತು. ಆದರೆ, ಟ್ರೋಫಿ ವಿತರಣಾ ಸಮಾರಂಭದ ವೇಳೆ ಸ್ಪೇನ್​ ಫುಟ್​ಬಾಲ್​ ಒಕ್ಕೂಟದ ಅಧ್ಯಕ್ಷ ಲೂಯಿಸ್​ ರುಬಿಯಲೆಸ್​ ವೇದಿಕೆಯ ಮೇಲೆಯೇ ಸ್ಪೇನ್​ ತಂಡದ ಪ್ರಮುಖ ಆಟಗಾರ್ತಿ ಜೆನ್ನಿ ಹೆಮೋರ್ಸೊ ತುಟಿಗೆ ಮುತ್ತಿಟ್ಟಿದ್ದು, ಸ್ಪೇನ್​ ತಂಡದ ವಿಶ್ವಕಪ್​ ಗೆಲುವಿಗಿಂತ ಹೆಚ್ಚು ಸುದ್ದಿಯಾಯಿತು. ಪರ-ವಿರೋಧದ ಚರ್ಚೆ ನಡೆಯುತ್ತಲೇ ಬಂದಿತ್ತು. ಜತೆಗೆ ರುಬಿಯಲೆಸ್​ ಅದು ಒಮ್ಮತದ ಕಿಸ್​ ಎಂದಿದ್ದರೆ, ಹೆಮೋರ್ಸೊ ತನ್ನ ಒಮ್ಮತ ಇರಲಿಲ್ಲ ಎಂದು ವಾದಿಸಿದ್ದರು. ಇದೀಗ ತನ್ನ ಸಮ್ಮತಿ ಪಡೆಯದೆ ತುಟಿಗೆ ಮುತ್ತಿಡುವ ಮೂಲಕ ರುಬಿಯಲೆಸ್​ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಹೆಮೋರ್ಸೊ ಕ್ರಿಮಿನಲ್​ ಪ್ರಕರಣ ದಾಖಲಿಸಿದ್ದಾರೆ.

ಕಿಸ್​ ಪ್ರಕರಣದಲ್ಲಿ ರುಬಿಯಲೆಸ್​ರನ್ನು ಫಿಫಾ ಈಗಾಗಲೆ ಅಮಾನತುಗೊಳಿಸಿದೆ. ಸ್ಪೇನ್​ ಸರ್ಕಾರ, ಆಟಗಾರರ ಸಂಸ್ಥೆಗಳು, ಆಟಗಾರರ ಮತ್ತು ಸ್ಪೇನ್​ ನಾಗರಿಕರೂ ಹೆಮೋರ್ಸ್​ಗೆ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ ರುಬಿಯಲೆಸ್​ ನನ್ನದೇನೂ ತಪ್ಪಿಲ್ಲ ಎಂದು ಪದತ್ಯಾಗಕ್ಕೆ ನಿರಾಕರಿಸುತ್ತಲೇ ಬಂದಿದ್ದರು. ಅಲ್ಲದೆ ನನ್ನನ್ನು ಬಲಿಪಶು ಮಾಡಲಾಗುತ್ತಿದೆ. ಅಲ್ಲದೆ ನಕಲಿ ಸ್ತ್ರಿವಾದಿಗಳ ಟಾರ್ಗೆಟ್​ ಆಗಿದ್ದೇನೆ ಎಂದಿದ್ದರು.

33 ವರ್ಷದ ಫಾರ್ವರ್ಡ್​ ಆಟಗಾರ್ತಿ ಹೆಮೋರ್ಸೊ ಈಗ ಕಾನೂನು ಕ್ರಮದ ಹಾದಿ ಹಿಡಿದಿದ್ದು, ಅವರ ವಾದವನ್ನು ಮಂಡಿಸಲು ಮ್ಯಾಡ್ರಿಡ್​ ನ್ಯಾಯಾಲಯವೂ ಅವಕಾಶ ಮಾಡಿಕೊಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net