ವೆಸ್ಟ್ ಇಂಡೀಸ್ ಎದುರು ಭಾರತದ ಮಹಿಳೆಯರ ಗೆಲುವಿನ ಅಭ್ಯಾಸ

New-Project-3-7
Published on

ದುಬೈ: ಜೆಮೀಮಾ ರೋಡ್ರಿಗಸ್ (52 ರನ್, 40 ಎಸೆತ, 5 ಬೌಂಡರಿ) ಅರ್ಧಶತಕದ ನೆರವಿನಿಂದ ಭಾರತ ತಂಡ ಮಹಿಳಾ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು 20 ರನ್‌ಗಳ ಗೆಲುವು ದಾಖಲಿಸಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ, ಜೆಮೀಮಾ ಹಾಗೂ ಯಸ್ತಿಕಾ ಭಾಟಿಯಾ (24) ಜತೆಯಾಟದ ನೆರವಿನಿಂದ 8 ವಿಕೆಟ್‌ಗೆ 141 ರನ್ ಕಲೆಹಾಕಿದೆ. ವಿಂಡೀಸ್ ಪರ ಹ್ಯಾಲಿ ಮ್ಯಾಥ್ಯೂಸ್ 4 ವಿಕೆಟ್ ಪಡೆದು ಕಡಿವಾಣ ಹೇರಿದರು. ಪ್ರತಿಯಾಗಿ ಪೂಜಾ ವಸಕರ್ (20ಕ್ಕೆ 3) ದಾಳಿಗೆ ಸಿಲುಕಿದ ವೆಸ್ಟ್ ಇಂಡೀಸ್ 8 ವಿಕೆಟ್‌ಗೆ 121 ರನ್‌ಗಳಿಸಲಷ್ಟೇ ಶಕ್ತವಾಯಿತು. ಅಭ್ಯಾಸ ಪಂದ್ಯದಲ್ಲಿ ಉಭಯ ತಂಡಗಳ ಎಲ್ಲ 15 ಆಟಗಾರ್ತಿಯರು ಆಡುವ ಅವಕಾಶವಿದ್ದರೂ, 11 ಆಟಗಾರ್ತಿಯರಷ್ಟೇ ಬ್ಯಾಟಿಂಗ್-ಫೀಲ್ಡಿಂಗ್ ಮಾಡಬಹುದಾಗಿದೆ.

ಭಾರತ: 8 ವಿಕೆಟ್‌ಗೆ 141 (ಶೆಾಲಿ ವರ್ಮ 7, ಸ್ಮತಿ ಮಂದನಾ 14, ಹರ್ಮಾನ್‌ಪ್ರೀತ್ ಕೌರ್ 1, ಜೆಮೀಮಾ ರೋಡ್ರಿಗಸ್ 52, ಯಸ್ತಿಕಾ ಭಾಟಿಯಾ 24, ರಿಚಾ ೋಷ್ 7, ದೀಪ್ತಿ ಶರ್ಮ 13, ಅರುಂಧತಿ ರೆಡ್ಡಿ 3, ಪೂಜಾ ವಸಾಕರ್ 9, ಶ್ರೇಯಾಂಕಾ ಪಾಟೀಲ್ 4*, ಹ್ಯಾಲಿ ಮ್ಯಾಥ್ಯೂಸ್ 17ಕ್ಕೆ 4, ಅಶ್ಮಿನಿ ಮುನಿಸರ್ 33ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net