ಹಾಲಿ ಚಾಂಪಿಯನ್ ಆಸೀಸ್ ಮಣಿಸಿ ಫೈನಲ್‌ಗೇರಿದ ಭಾರತ

New Project (2)
Published on

ಮುಂಬೈ: ಹಾಲಿ ಹಾಗೂ ಏಳು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಎದುರು ವಿಶ್ವದಾಖಲೆಯ ಚೇಸಿಂಗ್ ನಡೆಸಿದ ಆತಿಥೇಯ ಭಾರತ ತಂಡ, ಐಸಿಸಿ ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ. ಜೆಮೀಮಾ ರೋಡ್ರಿಗಸ್ (127* ರನ್, 134 ಎಸೆತ, 14 ಬೌಂಡರಿ) ಭರ್ಜರಿ ಬ್ಯಾಟಿಂಗ್ ಹಾಗೂ ನಾಯಕಿ ಹರ್ಮಾನ್‌ಪ್ರೀತ್ ಕೌರ್ (89 ರನ್, 88 ಎಸೆತ, 10 ಬೌಂಡರಿ, 2 ಸಿಕ್ಸರ್) ಸಮಯೋಚಿತ ಆಟದ ನೆರವಿನಿಂದ ಭಾರತ ತಂಡ 2ನೇ ಸೆಮಿೈನಲ್‌ನಲ್ಲಿ ಆಸೀಸ್ ಎದುರು 5 ವಿಕೆಟ್‌ಗಳಿಂದ ಗೆಲುವು ಕಂಡಿತು, ಈ ಮೂಲಕ ಮೂರನೇ ಬಾರಿ ಫೈನಲ್‌ಗೇರಿದ ಭಾರತ ಭಾನುವಾರ ದಕ್ಷಿಣ ಆಫ್ರಿಕಾ ಎದುರು ಚೊಚ್ಚಲ ಪ್ರಶಸ್ತಿಗಾಗಿ ಸೆಣಸಲಿದೆ.

ನವಿಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ, ೆಬಿ ಲಿಚ್‌ಫೀಲ್ಡ್ (119 ರನ್, 93 ಎಸೆತ, 17 ಬೌಂಡರಿ, 3 ಸಿಕ್ಸರ್) ಅಮೋಘ ಶತಕ ಮತ್ತು ಎಲ್ಲಿಸ್ ಪೆರ‌್ರಿ (77 ರನ್, 88 ಎಸೆತ, 6 ಬೌಂಡರಿ, 2 ಸಿಕ್ಸರ್), ಆಶ್ಲೆ ಗಾರ್ಡ್‌ನರ್ (63 ರನ್, 45 ಎಸೆತ, 4 ಬೌಂಡರಿ, 4 ಸಿಕ್ಸರ್) ಅರ್ಧಶತಕದ ನಡುವೆ 49.5 ಓವರ್‌ಗಳಲ್ಲಿ 338 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ 59 ರನ್‌ಗಳಿಗೆ ಆರಂಭಿಕರನ್ನು ಕಳೆದುಕೊಂಡ ಭಾರತ ಚೇಸಿಂಗ್‌ನಲ್ಲಿ ಆಘಾತ ಎದುರಿಸಿತು. ಆಗ ಜೆಮೀಮಾ ಜತೆಯಾದ ಹರ್ಮಾನ್‌ಪ್ರೀತ್ ನಡೆಸಿದ ದಿಟ್ಟ ಜತೆಯಾಟದ ಬಲದಿಂದ ಭಾರತ 48.3 ಓವರ್‌ಗಳಲ್ಲಿ 5 ವಿಕೆಟ್‌ಗೆ 341 ರನ್‌ಗಳಿಸಿ ಜಯಿಸಿತು.

ಆಸ್ಟ್ರೇಲಿಯಾ: 49.5 ಓವರ್‌ಗಳಲ್ಲಿ 338 (ಅಲಿಸ್ಸಾ ಹೀಲಿ 5, ಲಿಚ್‌ಫೀಲ್ಡ್ 119, ಎಲ್ಲಿಸ್ ಪೆರ‌್ರಿ 77, ಬೆಥ್ ಮೂನಿ 24, ಸುದರ್‌ಲ್ಯಾಂಡ್ 3, ಆಶ್ಲೇ ಗಾರ್ಡನರ್ 63, ತಾಹ್ಲಿಯಾ 12, ಕಿಮ್ 17, ಅಲನಾ 4, ಶ್ರೀಚರಣಿ 49ಕ್ಕೆ 2, ದೀಪ್ತಿ ಶರ್ಮ 73ಕ್ಕೆ 2).

ಭಾರತ: 48.3 ಓವರ್‌ಗಳಲ್ಲಿ 5 ವಿಕೆಟ್‌ಗೆ 341 (ಶೆಫಾಲಿ 10, ಸ್ಮತಿ ಮಂದನಾ 24, ಜೆಮೀಮಾ 127*, ಹರ್ಮಾನ್‌ಪ್ರೀತ್ 89, ದೀಪ್ತಿ 24, ರಿಚಾ 26, ಅಮನ್ ಜೋತ್ 15*, ಕಿಮ್ ಗಾರ್ತ್ 46ಕ್ಕೆ 2, ಸುದರ್‌ಲ್ಯಾಂಡ್ 69ಕ್ಕೆ 2).

2. ಜೆಮೀಮಾ ರೋಡ್ರಿಗಸ್ ಐಸಿಸಿ ವಿಶ್ವಕಪ್ ನಾಕೌಟ್‌ನಲ್ಲಿ ಶತಕ ಸಿಡಿಸಿದ ಎರಡನೇ ಭಾರತೀಯ ಸಾಧಕಿ. 2017ರಲ್ಲಿ ಆಸೀಸ್ ಎದುರೇ ಹರ್ಮಾನ್‌ಪ್ರೀತ್ ಈ ಸಾಧನೆ ಮಾಡಿದ ಮೊದಲಿಗರು.

167. ಹರ್ಮಾನ್‌ಪ್ರೀತ್-ಜೆಮೀಮಾ ಭಾರತ ಪರ ಏಕದಿನ ವಿಶ್ವಕಪ್‌ನಲ್ಲಿ ಗರಿಷ್ಠ ರನ್ ಜತೆಯಾಟ (ಯಾವುದೇ ವಿಕೆಟ್) ನೀಡಿದ ಭಾರತೀಯ ಜೋಡಿ. 2017ರಲ್ಲಿ ಹರ್ಮಾನ್‌ಪ್ರೀತ್-ದೀಪ್ತಿ 137 ರನ್ ಸೇರಿಸಿದ್ದು ಹಿಂದಿನ ಗರಿಷ್ಠ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net