

ಮುಂಬೈ: ಭಾರತೀಯ ಕ್ರೀಡೆಗಳಲ್ಲಿ ಅವರ ಅಸಾಧಾರಣ ನಾಯಕತ್ವ ಮತ್ತು ಪರಿವರ್ತನಾತ್ಮಕ ಪರಿಣಾಮದ ಕುರಿತು ಮನ್ನಣೆ ಸಲ್ಲಿಸುವ ಹಾಗೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿ ಜಯ್ ಷಾ ಅವರಿಗೆ ಸಿಐಐ ಸ್ಪೋರ್ಟ್ಸ್ ಬಿಸಿನೆಸ್ ಅವಾರ್ಡ್ಸ್- 2023ರಲ್ಲಿ ಪ್ರತಿಷ್ಠಿತ ವರ್ಷದ ಕ್ರೀಡಾ ಉದ್ಯಮ ನಾಯಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಟಾಟಾ ಸ್ಟೀಲ್ ಉಪಾಧ್ಯಕ್ಷ ಮತ್ತು ಸಿಐಐ ರಾಷ್ಟ್ರೀಯ ಕ್ರೀಡಾ ಸಮಿತಿಯ ಅಧ್ಯಕ್ಷ ಶ್ರೀ ಚಾಣಕ್ಯ ಚೌಧರಿ ಪ್ರಶಸ್ತಿಯನ್ನು ನೀಡಿದರು, ಭಾರತೀಯ ಕ್ರಿಕೆಟ್ ಅನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಷಾ ಅವರ ಮಹತ್ವದ ಪಾತ್ರವನ್ನು ಒತ್ತಿ ಹೇಳಿದರು. ಅನೇಕ ಅಭೂತಪೂರ್ವ ಗೆಲುವಿನ ಸರಣಿಗಳ ಮೂಲಕ ಕ್ರೀಡೆಯನ್ನು ಉನ್ನತೀಕರಣಗೊಳಿಸಿದ್ದು ಮಾತ್ರವಲ್ಲದೆ ಅದರ ಬೆಳವಣಿಗೆ ದಾರಿಯನ್ನು ಮರುರೂಪಿಸಿದ್ದಕ್ಕೆ ಈ ಮನ್ನಣೆಯು ಸಂದಿದೆ.
ಜಯ್ ಶಾ ಅವರ ದೂರದೃಷ್ಟಿಯುಳ್ಳ ಸಾರಥ್ಯದಲ್ಲಿ ನಡೆದ, ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಪುರುಷರ ವಿಶ್ವಕಪ್ ಸರಣಿಯು ತನ್ನ ಹೆಸರನ್ನು ಇತಿಹಾಸದಲ್ಲಿ ಅತಿ ಹೆಚ್ಚು ಜನ ಭಾಗವಹಿಸಿದ ವಿಶ್ವಕಪ್ ಎಂದು ಕರೆಸಿಕೊಂಡಿದೆ, ಇದು ಅವರ ಕಾರ್ಯತಂತ್ರದ ಕುಶಾಗ್ರಮತಿತ್ವ ಮತ್ತು ಸಾಂಸ್ಥಿಕ ಸಾಧನೆಗೆ ಸಾಕ್ಷಿಯಾಗಿದೆ. ಪಂದ್ಯಾವಳಿಯ ಅದ್ಭುತ ಯಶಸ್ಸು ವಿಶ್ವಾದ್ಯಂತ ಕ್ರಿಕೆಟ್ ಉತ್ಸಾಹಿಗಳ ಹೃದಯ ಗೆದ್ದಿದೆ. ಜೊತೆಗೆ ಜಾಗತಿಕ ಕ್ರಿಕೆಟ್ ಶಕ್ತಿಯಾಗಿ ಭಾರತದ ಸ್ಥಾನಮಾನವನ್ನೂ ಗಟ್ಟಿಗೊಳಿಸಿದೆ.
ಜಯ್ ಷಾ ಅವರ ನಾಯಕತ್ವದಲ್ಲಿನ ಅತ್ಯಂತ ಗಮನಾರ್ಹವಾದ ಮತ್ತೊಂದು ಹೆಜ್ಜೆ ಎಂದರೆ ಭಾರತೀಯ ಕ್ರಿಕೆಟ್‌ನಲ್ಲಿ ವೇತನ ಸಮಾನತೆಯ ಸಾಧನೆ. ಅಡೆತಡೆಗಳನ್ನು ಮುರಿದು ಸಮಾನತೆಯನ್ನು ಸಾಧಿಸಿದ ಶಾ ಅವರು ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನವಾದ ಪರಿಹಾರ ಧನ ತಲುಪುವ ಹಾಗೆ ನೋಡಿಕೊಂಡರು, ಇದು ಭಾರತೀಯ ಕ್ರೀಡಾ ಕ್ಷೇತ್ರದಲ್ಲಿನ ಒಂದು ಮಾದರಿ ಬದಲಾವಣೆ ಎಂದೇ ಗುರುತಿಸಲ್ಪಡುತ್ತದೆ. ಈ ಕ್ರಮವು ನ್ಯಾಯಸಮ್ಮತತೆಯ ಕುರಿತಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಒಳಗೊಳ್ಳುವಿಕೆ ಮತ್ತು ಸಬಲೀಕರಣದ ವಾತಾವರಣದ ಪೋಷಣೆಯೊಂದಿಗೆ ಮಹಿಳಾ ಕ್ರೀಡಾಪಟುಗಳು ಪ್ರದರ್ಶಿಸಿದ ಅಪಾರ ಪ್ರತಿಭೆ ಮತ್ತು ಸಮರ್ಪಣೆಗೆ ಗೌರವ ಸಲ್ಲಿಸಿದಂತಾಗಿದೆ.