

ಮುಂಬೈ: ಕ್ರಿಕೆಟಿಗರ ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಕೈಬಿಡುವ ನಿರ್ಧಾರವನ್ನು ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಕೈಗೊಂಡಿರುವುದು. ಯಾರೂ ಅನಿವಾರ್ಯರಲ್ಲ ಎಂದು ಸಾರುವುದು ಇದರ ಉದ್ದೇಶ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಬಹಿರಂಗಪಡಿಸಿದ್ದಾರೆ.
ಬಿಸಿಸಿಐ ಸೂಚನೆಯ ನಡುವೆಯೂ ದೇಶೀಯ ಕ್ರಿಕೆಟ್ನಲ್ಲಿ ಆಡದ ತಪ್ಪಿಗಾಗಿ ಕಿಶನ್, ಶ್ರೇಯಸ್ರನ್ನು ಗುತ್ತಿಗೆ ಪಟ್ಟಿಯಿಂದ ಹೊರಗಿಡಲಾಗಿತ್ತು. "ಆಯ್ಕೆ ವಿಚಾರದಲ್ಲಿ ನಾನು ಸಂಚಾಲಕ ಮಾತ್ರ. ನಿರ್ಧಾರ ಕೈಗೊಂಡಿರುವುದು ಅಜಿತ್ ಅಗರ್ಕರ್. ನಾನು ಅದನ್ನು ಜಾರಿಗೆ ತರುವವನು ಮಾತ್ರ. ನಾವು ಸ್ಯಾಮ್ಸನ್ರಂಥ ಕೆಲ ಹೊಸ ಆಟಗಾರರನ್ನು ಸೇರಿಸಿದ್ದೇವೆ. ಭಾರತ ತಂಡದಲ್ಲಿ ಸ್ಥಾನ ಬಯಸುವ ಎಲ್ಲ ಆಟಗಾರರು ದೇಶೀಯ ಕ್ರಿಕೆಟ್ನಲ್ಲಿ ಆಡುವುದು ಕಡ್ಡಾಯ' ಎಂದು ಜಯ್ ಷಾ ವಿವರಿಸಿದ್ದಾರೆ.