ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ಗೆ ಚಾಲೆಂಜ್​ ಹಾಕಲು ಸಿದ್ಧವಾಗುತ್ತಿದ್ದಾರೆ ಮಾಜಿ ನಾಯಕ ಮಿಯಾಂದಾದ್..!

javed final copy for web..............
Published on

ಲಾಹೋರ್: ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್​ ಖಾನ್​ಗೆ ರಾಜಕೀಯ ಕ್ಷೇತ್ರದಲ್ಲಿ ಸವಾಲು ಹಾಕಲು ಸಿದ್ಧವಾಗುತ್ತಿದ್ದಾರೆ ದಿಗ್ಗಜ ಬ್ಯಾಟ್ಸ್​ಮನ್​. ಶೀಘ್ರವೇ ರಾಜಕೀಯ ಸೇರ್ಪಡೆಗೊಳ್ಳಲು ಅಣಿಯಾಗುತ್ತಿರುವ ಮಾಜಿ ನಾಯಕ ಜಾವೇದ್​ ಮಿಯಾಂದಾದ್​ ಯೂಟ್ಯೂಟ್​ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಕೇವಲ ಕ್ರಿಕೆಟ್​ನಲ್ಲಷ್ಟೇ ಅಲ್ಲ, ರಾಜಕೀಯದಲ್ಲೂ ಇಮ್ರಾನ್​ಗೆ ಸವಾಲು ಹಾಕುವೆ ಎಂದಿದ್ದಾರೆ. ನಾನು ರಾಜಕೀಯಕ್ಕೆ ಸೇರುವೆ, ನಂತರವಷ್ಟೇ ನಿಜವಾದ ರಾಜಕೀಯ ಏನು ಅಂತ ಗೊತ್ತಾಗಲಿದೆ ಎಂದಿದ್ದಾರೆ.

ಕೇವಲ ಕ್ರಿಕೆಟ್​ನಲ್ಲಿ ನಾನು ಅವರಿಗೆ ನಾಯಕನಲ್ಲ, ರಾಜಕೀಯದಲ್ಲೂ ನಾಯಕನಾಗುವೆ. ನಾನು ಅವರಿಗೆ ನಾಯಕನಾಗಿದ್ದನ್ನು ಇಮ್ರಾನ್​ ನೆನೆಪಿಸಿಕೊಳ್ಳಲಿ ಎಂದು ಮಿಯಾಂದಾದ್​ ಹೇಳಿದ್ದಾರೆ. ಇಮ್ರಾನ್​ ಖಾನ್​ ಪ್ರಧಾನಿಯಾದ ಬಳಿಕ ಪಾಕ್​ ಎಲ್ಲ ರಂಗದಲ್ಲಿ ವಿಫಲವಾಗಿದೆ. ಅವರೊಬ್ಬರ ವೈಫಲ್ಯ ನಾಯಕ. ಪಾಕಿಸ್ತಾನ ಕ್ರಿಕೆಟ್​ ಮಂಡಳಿಗೆ (ಪಿಸಿಬಿ) ಸೂಕ್ತ ವ್ಯಕ್ತಿಯನ್ನು ನೇಮಿಸಬಹುದಿತ್ತು ಮಿಯಾಂದಾದ್ ಕಿಡಿ ಕಾರಿದ್ದಾರೆ.

63 ವರ್ಷದ ಮಿಯಾಂದಾದ್​ ಪಾಕಿಸ್ತಾನ ತಂಡಕ್ಕೆ ನಾಯಕ, ಕೋಚ್​ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. 124 ಟೆಸ್ಟ್​ ಪಂದ್ಯಗಳಿಂದ 23 ಶತಕ ಸೇರಿದಂತೆ 8832 ರನ್​ ಪೇರಿಸಿದ್ದರೆ, 233 ಏಕದಿನ ಪಂದ್ಯಗಳಿಂದ 8 ಶತಕ ಒಳಗೊಂಡಂತೆ 7381 ರನ್​ ಬಾರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net