

ನವದೆಹಲಿ: ಚೆನ್ನೈನಲ್ಲಿ ಒತ್ತಡದ ಪರಿಸ್ಥಿತಿಯಿಂದ ಪುಟಿದೆದ್ದು ಶುಭಾರಂಭ ಕಂಡಿದ್ದ ಟೀಮ್ ಇಂಡಿಯಾ, 13ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ತನ್ನ 2ನೇ ಪಂದ್ಯದಲ್ಲಿ ಸರಾಗವಾಗಿ ಗೆಲುವು ದಾಖಲಿಸಿದೆ. ನಾಯಕ ರೋಹಿತ್ ಶರ್ಮ (131 ರನ್, 84 ಎಸೆತ, 16 ಬೌಂಡರಿ, 5 ಸಿಕ್ಸರ್) ಅಬ್ಬರದ ಶತಕದೊಂದಿಗೆ ಹಲವು ದಾಖಲೆಗಳನ್ನು ಪುಡಿಗಟ್ಟಿ, ಅ್ಘಾನಿಸ್ತಾನ ಎದುರು 8 ವಿಕೆಟ್‌ಗಳ ಸುಲಭ ಗೆಲುವಿನ ರೂವಾರಿ ಎನಿಸಿದರು.
ಆದರೆ ವೇಗಿ ಜಸ್‌ಪ್ರೀತ್ ಬುಮ್ರಾ ವಿಕೆಟ್ ಪಡೆದು ಸಂಭ್ರಮಿಸಿದ ಪರಿ ವೈರಲ್ ಆಗಿದೆ. ಟೀಮ್ ಇಂಡಿಯಾದ ಹಲವು ಆಟಗಾರರಿಗ ುಟ್‌ಬಾಲ್ ನೆಚ್ಚಿನ ಕ್ರೀಡೆ. ಎದುರಾಳಿ ತಂಡದ ವಿಕೆಟ್ ಪಡೆದಾಗ ಬೌಲರ್‌ಗಳು ತಮ್ಮ ನೆಚ್ಚಿನ ತಾರೆಯರು ಗೋಲು ಸಿಡಿಸಿ ಸಂಭ್ರಮಿಸುವ ರೀತಿಯನ್ನು ಅನುಕರಣೆ ಮಾಡುತ್ತಾರೆ. ವೇಗಿ ಮೊಹಮದ್ ಸಿರಾಜ್ ಪೋರ್ಚುಗಲ್‌ನ ಕ್ರಿಶ್ಚಿಯಾನೊ ರೋನಾಲ್ಡೊ ಅವರ ‘ಸಿ.....ಯು....’ ಶೈಲಿಯನ್ನು ಅನುಕರಣೆ ಮಾಡುತ್ತಾರೆ. ಆ್ಘನ್ ವಿರುದ್ಧ ಪಂದ್ಯದಲ್ಲಿ ಇಬ್ರಾಹಿಂ ಜದ್ರಾನ್ ವಿಕೆಟ್ ಕಬಳಿಸಿದ ವೇಗಿ ಜಸ್‌ಪ್ರೀತ್ ಬುಮ್ರಾ ಸಹ ಟೆಂಪಲ್ ಪಾಯಿಂಟ್ ಸೆಲೆಬ್ರೆಷನ್ ಮೂಲಕ ಸಂಭ್ರಮಿಸಿದರು. ಬಳಿಕ ಕೆಲವೇ ನಿಮಿಷಗಳಲ್ಲಿ ಈ ದೃಶ್ಯ ವೈರಲ್ ಆಗಿದೆ. ಅಸಲಿಗೆ ಇಂಗ್ಲೆಂಡ್ ಫುಟ್‌ಬಾಲ್ ತಾರೆ ಮಾರ್ಕಸ್ ರಾಶ್‌ಪೋರ್ಡ್ ಗೋಲು ಸಿಡಿಸಿದಾಗ ಇದೇ ರೀತಿಯಾಗಿ ಸಂಭ್ರಮಿಸುತ್ತಾರೆ.