ಇಂಗ್ಲೆಂಡ್‌ನಲ್ಲಿ ಬುಮ್ರಾ ವಿಶೇಷ ನೀರು ಕುಡಿಯುತ್ತಿದ್ದಾರೆ! ಈ ನೀರಿನ ವಿಶೇಷತೆ ಏನು? ..Jasprit Bumrah

jasprit bumrah
Published on

Jasprit Bumrah Drink Special Water: ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಜಸ್ಪ್ರೀತ್ ಬುಮ್ರಾ ವಿಶೇಷ ( NOBL WATR ) ನೀರನ್ನು ಕುಡಿಯುತ್ತಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದ್ದಂತೆ, ಈ ನೀರಿನ ವಿಶೇಷತೆ ಹಾಗೂ ಪ್ರಯೋಜನ ಕುರಿತಾಗಿ ನೆಟ್ಟಿಗರು ಹುಡುಕುತ್ತಿದ್ದಾರೆ. ಈ ಕುರಿತಾಗಿ ನಾವು ಇಂದು ತಿಳಿದುಕೊಳ್ಳೋಣ...

ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಮಾತ್ರ ಕ್ಯಾಸ್ಟೈಲ್ ನೀರು ಕುಡಿಯುತ್ತಾರೆ ಎಂದು ಮಾತ್ರ ನಾವು ಕೇಳಿದ್ದೇವೆ. ಆದರೆ ಈಗ ಜಸ್ಪ್ರೀತ್ ಬುಮ್ರಾ ಕೂಡ ವಿಶೇಷ ( NOBL WATR ) ನೀರು ಕುಡಿಯುತ್ತಿದ್ದಾರೆ. ಲೀಡ್ಸ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಸಮಯದಲ್ಲಿ ಬುಮ್ರಾ ಆ ನೀರನ್ನು ಕುಡಿಯುತ್ತಿರುವುದು ಕಂಡುಬಂದಿದೆ.

ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಕುಡಿದ ( NOBL WATR ) ನೀರು ಇಂಗ್ಲೆಂಡ್‌ನ ನೀರಿನ ಕಂಪನಿಯಾಗಿದ್ದು, ಇದು ವಿಶೇಷ ರೀತಿಯ ನೀರನ್ನು ತಯಾರಿಸುತ್ತದೆ. ಸಾಮಾನ್ಯವಾಗಿ ಆಟಗಾರರು ಹೆಚ್ಚು ವ್ಯಾಯಾಮ ಮಾಡಿದಾಗ, ಕಷ್ಟಪಟ್ಟು ಕೆಲಸ ಮಾಡಿದಾಗ ಅಥವಾ ದಣಿದಿದ್ದಾಗ ಅಥವಾ ದೇಹವು ಊದಿಕೊಂಡಾಗ ಈ ನೀರನ್ನು ಕುಡಿಯುತ್ತಾರೆ. ಅಂತಹ ಸಂದರ್ಭಗಳಲ್ಲಿ, ಆಟಗಾರರು 7 ಕ್ಕಿಂತ ಹೆಚ್ಚಿನ pH ಮೌಲ್ಯವಿರುವ ನೀರನ್ನು ಕುಡಿಯಲು ಬಯಸುತ್ತಾರೆ. ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಕುಡಿದ ನೀರಿನ ವಿಶೇಷವೆಂದರೆ ಅದರ pH ಮೌಲ್ಯ ತಟಸ್ಥವಾಗಿರುತ್ತದೆ. ಪ್ರತಿದಿನ 3–4 ಲೀ ಹೆಚ್ಚು ಕ್ಷಾರೀಯ ಖನಿಜಯುಕ್ತ ( alkaline mineralized) ನೀರನ್ನು ಸೇವಿಸಲು ಶಿಫಾರಸು ಮಾಡಲಾಗುತ್ತದೆ.

NOBL WATR ನೀರಿನ ವಿಶೇಷತೆ:

NOBL WATR ಅನ್ನು UK ಯ ಸೋಮರ್‌ಸೆಟ್‌ನ ಮೆಂಡಿಪ್ ಪ್ರದೇಶದಲ್ಲಿ ಪಡೆಯಲಾಗುತ್ತದೆ ಮತ್ತು ಪ್ಯಾಕ್ ಮಾಡಲಾಗುತ್ತದೆ. ಸೋಶಿಯಲ್​ ಮೀಡಯಾದ ಮಾಹಿತಿ ಪ್ರಕಾರ ಒಂದು ಲೀಟರ್​ ವಾಟರ್​ ಬೆಲೆ 3,604.80 ರೂ. ಎಂದು ಹೇಳಲಾಗಿದೆ. ಕ್ರೀಡಾ ಸ್ಪರ್ಧಿಗಳು ಹೆಚ್ಚಾಗಿ ಕುಡಿಯುವ ಈ ನೀರನ್ನು ಹೇಗೆ ತಯಾರಿಸಲಾಗುತ್ತದೆ ಎನ್ನುವ ಕುರಿತಾಗಿ   ಹೆಚ್ಚಿನ ಮಾಹಿತಿ ಇಲ್ಲ.

NOBL WATR ಪ್ರಯೋಜನಗಳು :

  1. ಈ ನೀರನ್ನು ಕುಡಿಯುವುದರಿಂದ ಆಮ್ಲೀಯತೆ ಕಡಿಮೆಯಾಗುತ್ತದೆ.
  2. ಹೆಚ್ಚಾಗಿ ಆಯಾಸ ಆಗುವುದಿಲ್ಲ.
  3. ಈ ನೀರು ವೇಗವಾಗಿ ಆಯಾಸದಿಂದ ದೇಹ ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬುಮ್ರಾ ಟೀಮ್ ಇಂಡಿಯಾಗೆ ಬಹಳ ಮುಖ್ಯವಾದ ಆಟಗಾರ. ಅಂತಹ ಪರಿಸ್ಥಿತಿಯಲ್ಲಿ, ಗಾಯ ಮತ್ತು ಆಯಾಸದಿಂದ ಅವರನ್ನು ಸುರಕ್ಷಿತವಾಗಿರಿಸುವುದು ಬಹಳ ಮುಖ್ಯ. ಬುಮ್ರಾ ಅವರನ್ನು ಫಿಟ್ ಆಗಿಡಲು ಭಾರತೀಯ ತಂಡದ ಆಡಳಿತ ಮಂಡಳಿ ಮಾಡುತ್ತಿರುವ ಪ್ರಯತ್ನಗಳಲ್ಲಿ ಇದು ಒಂದು. ಅವರಿಗೆ ಕುಡಿಯಲು 7 ಕ್ಕಿಂತ ಹೆಚ್ಚು pH ಮೌಲ್ಯವಿರುವ ವಿಶೇಷ ನೀರನ್ನು ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net