VIDEO: ವಾಂಡರರ್ಸ್‌ನಲ್ಲಿ ಬುಮ್ರಾ-ಜಾನ್ಸೆನ್ ಮಾತಿನ ಚಕಮಕಿ

bumrah and jesan for web
Published on

ಜೊಹಾನ್ಸ್‌ಬರ್ಗ್: ಭಾರತ ತಂಡದ ಆಟಗಾರರನ್ನು ಮೈದಾನದಲ್ಲಿ ಎದುರಾಳಿ ತಂಡಗಳ ಆಟಗಾರರು ಕೆಣಕುವುದು, ಕಿಚಾಯಿಸುವುದು ಸಾಮಾನ್ಯ. ಅದರಲ್ಲೂ ಟೆಸ್ಟ್ ಪಂದ್ಯಗಳಲ್ಲೂ ಇದು ಸರ್ವೇ ಸಾಮಾನ್ಯವಾಗಿದೆ. ವಾಂಡರರ್ಸ್‌ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯವೂ ಇಂಥ ಘಟನೆಗೆ ಸಾಕ್ಷಿಯಾಗಿದೆ. ಭಾರತದ ವೇಗಿ ಜಸ್‌ಪ್ರೀತ್ ಬುಮ್ರಾ ಹಾಗೂ ದಕ್ಷಿಣ ಆಫ್ರಿಕಾದ ವೇಗಿ ಮಾರ್ಕೋ ಜಾನ್ಸೆನ್ ಇಬ್ಬರು ಪರಸ್ಪರ ಮಾತಿನ ಚಕಮಕಿ ನಡೆಸಿದ ವಿಡಿಯೋ ವೈರಲ್ ಆಗಿದೆ.

ಬುಮ್ರಾ ಬ್ಯಾಟಿಂಗ್‌ಗೆ ಆಗಮಿಸಿದ ವೇಳೆ ಮಾರ್ಕೋ ಜಾಸ್ಸೆನ್ ಬೌನ್ಸರ್ ಎಸೆದರೆ, ಎರಡೂ ಬಾರಿಗೆ ಚೆಂಡು ಭುಜಕ್ಕೆ ಬಡಿಯಿತು. ಬೌನ್ಸರ್ ಎಸೆದ ಬೆನ್ನಲ್ಲೇ ಜಾನ್ಸೆನ್, ಬುಮ್ರಾ ಕಡೆಗೆ ತಿರುಗಿ ಗುರಾಯಿಸಿದರು. ಇದರಿಂದ ಸಿಟ್ಟಾದ ಬುಮ್ರಾ ಕೂಡ ಜಾನ್ಸೆನ್ ಜತೆ ವಾಗ್ವಾದಕ್ಕಿಳಿದರು. ತಕ್ಷಣವೇ ಮಧ್ಯ ಪ್ರವೇಶಿಸಿದ ಅಂಪೈರ್ ಮಾರಿಯಸ್ ಇರಾಸ್ಮಸ್ ಇಬ್ಬರನ್ನು ಸಮಾಧಾನಪಡಿಸಿ ವಾಪಸ್ ಕಳುಹಿಸಿದರು. ಬಳಿಕ ಬುಮ್ರಾ ರಬಾಡ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಗಮನಸೆಳೆದರು. ಮೊದಲ ಇನಿಂಗ್ಸ್‌ನಲ್ಲೂ ಬುಮ್ರಾ ರಬಾಡ ಎಸೆತದಲ್ಲೇ ಸಿಕ್ಸರ್ ಬಾರಿಸಿದ್ದರು.

ಎರಡನೇ ಇನಿಂಗ್ಸ್‌ನಲ್ಲಿ ಭಾರತ ತಂಡ 266 ರನ್‌ಗಳಿಗೆ ಸರ್ವಪತನ ಕಂಡು, ಆತಿಥೇಯ ತಂಡಕ್ಕೆ 240 ರನ್‌ಗಳ ಗೆಲುವಿನ ಗುರಿ ನೀಡಿದೆ. ಭಾರತ ಮೊದಲ ಇನಿಂಗ್ಸ್ 202 ರನ್‌ಗಳಿಸಿದರೆ, ದಕ್ಷಿಣ ಆಫ್ರಿಕಾ 229 ರನ್ ಗಳಿಸಿ 27 ರನ್ ಮುನ್ನಡೆ ಸಾಧಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net