ಜೇಮ್ಸ್ ಆಂಡರ್ಸನ್ ಮೇಲಿದೆ ಈ 3 ಫ್ರಾಂಚೈಸಿಗಳ ಕಣ್ಣು! ​ಯಾವ ತಂಡದ ಪಾಲಾಗ್ತಾರೆ ಇಂಗ್ಲೆಂಡ್​ ವೇಗಿ? | IPL 2025 Auction

ವಿಜಯವಾಣಿ - 2024-11-19T165152.178
Published on

ನವದೆಹಲಿ: ಈಗಾಗಲೇ ಐಪಿಎಲ್​ ರಿಟೆನ್ಶನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಹೊರಬಿದ್ದಿರುವ ಸ್ಟಾರ್​ ಆಟಗಾರರೇ ಫ್ರಾಂಚೈಸಿಗಳ ಟಾರ್ಗೆಟ್​ ಆಗಿದ್ದಾರೆ. ಇದೇ ನವೆಂಬರ್​ 24-25ರಂದು ನಡೆಯಲಿರುವ ಐಪಿಎಲ್​ ಹರಾಜಿನತ್ತ 10 ತಂಡಗಳು ಎದುರುನೋಡುತ್ತಿದ್ದು, ಯಾವ ಸ್ಟಾರ್​ ಆಟಗಾರರನ್ನು ತಮ್ಮ ಟೀಮ್​ಗೆ ಎಳೆದುಕೊಳ್ಳುವುದು ಎಂಬ ಲೆಕ್ಕಾಚಾರಗಳಲ್ಲಿ ತೊಡಗಿದೆ. ಒಂದೆಡೆ ಲೆಕ್ಕಾಚಾರಗಳೆನೋ ಜೋರಾಗಿದ್ದರೂ, ಕಣ್ಣಿಟ್ಟ ಆಟಗಾರರನ್ನು ಖರೀದಿ ( IPL Auction) ಮಾಡೋದು ತಂಡಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ರಿಟೆನ್ಶನ್ ಪ್ರಕ್ರಿಯೆಯಲ್ಲಿ ಹೊರಬಿದ್ದ ಐಪಿಎಲ್​ನ ಸ್ಟಾರ್​ ಆಟಗಾರರಾದ ರಿಷಭ್ ಪಂತ್, ಶ್ರೇಯಸ್​ ಅಯ್ಯರ್​, ಫಾಫ್ ಡು ಪ್ಲೆಸಿಸ್​, ಗ್ಲೆನ್ ಮ್ಯಾಕ್ಸ್​ವೆಲ್​, ಶಿಖರ್ ಧವನ್​, ಕೆ.ಎಲ್. ರಾಹುಲ್​ ಸೇರಿದಂತೆ ಮುಂತಾದವರು ಹರಾಜಿನ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರೆಲ್ಲರ ಮೇಲೂ ಕಣ್ಣಿಟ್ಟಿರುವ ಫ್ರಾಂಚೈಸಿಗಳಿಗೆ ಈಗ ಇಂಗ್ಲೆಂಡ್​ನ ದಿಗ್ಗಜ ಆಟಗಾರ, ಸ್ಟಾರ್​ ಬೌಲರ್​ ಜೇಮ್ಸ್ ಆಂಡರ್ಸನ್ ಹೆಸರು ಕೇಳಿ ಸಖತ್ ಖುಷಿಯಾಗಿದೆ. ತಮ್ಮ ವೇಗದ ಬೌಲಿಂಗ್​ ಮೂಲಕ ಎದುರಾಳಿಗಳ ವಿಕೆಟ್​ ಕಿತ್ತುಬಿಸಾಡುವ ಸಾಮರ್ಥ್ಯವಿರುವ ಜೇಮ್ಸ್​, ತಮ್ಮ ತಂಡಕ್ಕೆ ಬಂದರೆ, ಸತತ ಗೆಲುವು ಸಾಧಿಸಲು ಸುಲಭವಾಗಬಹುದು ಎಂಬುದು ಆಯಾ ತಂಡಗಳ ಲೆಕ್ಕಾಚಾರ.

42 ವರ್ಷದ ಜೇಮ್ಸ್ ಆಂಡರ್ಸನ್ ಐಪಿಎಲ್​ ಮೆಗಾ ಹರಾಜಿನಲ್ಲಿ ತಾವು ಭಾಗವಹಿಸುವುದಾಗಿ ಹೇಳಿದ ಹಿನ್ನಲೆ ಇದೀಗ ಆಕ್ಷನ್​ನಲ್ಲಿರುವ ಆಟಗಾರರ ಪಟ್ಟಿಯಲ್ಲಿ ಅವರ ಹೆಸರನ್ನು ಕೂಡ ಸೇರಿಸಲಾಗಿದೆ. ಸದ್ಯ ಹರಾಜಿನಲ್ಲಿ ಇಂಗ್ಲೆಂಡ್​ ವೇಗಿ ಇದ್ದಾರೆ ಎಂಬುದನ್ನು ಅರಿತ ಫ್ರಾಂಚೈಸಿಗಳ ಪೈಕಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಮೊದಲಿಗಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಐಪಿಎಲ್​ ಇತಿಹಾಸದಲ್ಲಿ ಅತೀ ಹೆಚ್ಚು ಫ್ಯಾನ್ ಫಾಲೋಯಿಂಗ್ ಹಾಗೂ ಉತ್ತಮ ಪ್ರದರ್ಶನ ಕೊಡುವ ಮೂರು ಬಲಿಷ್ಠ ತಂಡಗಳೇ ಈ ರೇಸ್​ನಲ್ಲಿವೆ.

ಆ ಮೂರು ತಂಡಗಳು

1, ರಾಯಲ್ ಚಾಲೆಂಜರ್ಸ್​ ಬೆಂಗಳೂರು

2. ಚೆನ್ನೈ ಸೂಪರ್ ಕಿಂಗ್ಸ್

3. ರಾಜಸ್ಥಾನ ರಾಯಲ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net