ಜೈಸ್ವಾಲ್​ ಸತತ 2ನೇ ಶತಕ: ಭಾರತ ಎ ಉತ್ತಮ ಮೊತ್ತ

ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್​ (102 ರನ್​, 138 ಎಸೆತ, 16 ಬೌಂಡರಿ, 2 ಸಿಕ್ಸರ್​) ಸತತ ಎರಡನೇ ಶತಕದ ನೆರವಿನಿಂದ ಭಾರತ ಎ ತಂಡ, ಆತಿಥೇಯ ನ್ಯೂಜಿಲೆಂಡ್​ ಎ ವಿರುದ್ಧ ಮೂರನೇ ಹಾಗೂ ಅಂತಿಮ ಚತುರ್ದಿನ ಪಂದ್ಯದ ಮೊದಲ ದಿನ ಮಳೆ ಅಡಚಣೆಯ ನಡುವೆಯೂ ಉತ್ತಮ ಮೊತ್ತ ದಾಖಲಿಸಿದೆ. ಮೂರು ಪಂದ್ಯಗಳ ಸರಣಿಯ ಆರಂಭಿಕ ಎರಡು ಪಂದ್ಯಗಳು ಡ್ರಾನಲ್ಲಿ ಮುಕ್ತಾಯಗೊಂಡಿವೆ.
ಯಶಸ್ವಿ ಜೈಸ್ವಾಲ್​ -ಸಾಯಿ ಸುದರ್ಶನ್
ಯಶಸ್ವಿ ಜೈಸ್ವಾಲ್-ಸಾಯಿ ಸುದರ್ಶನ್​ ಸಂಗ್ರಹ ಚಿತ್ರ
Published on: 

ಲಿಂಕ್ಲನ್​: ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್​ (102 ರನ್​, 138 ಎಸೆತ, 16 ಬೌಂಡರಿ, 2 ಸಿಕ್ಸರ್​) ಸತತ ಎರಡನೇ ಶತಕದ ನೆರವಿನಿಂದ ಭಾರತ ಎ ತಂಡ, ಆತಿಥೇಯ ನ್ಯೂಜಿಲೆಂಡ್​ ಎ ವಿರುದ್ಧ ಮೂರನೇ ಹಾಗೂ ಅಂತಿಮ ಚತುರ್ದಿನ ಪಂದ್ಯದ ಮೊದಲ ದಿನ ಮಳೆ ಅಡಚಣೆಯ ನಡುವೆಯೂ ಉತ್ತಮ ಮೊತ್ತ ದಾಖಲಿಸಿದೆ. ಮೂರು ಪಂದ್ಯಗಳ ಸರಣಿಯ ಆರಂಭಿಕ ಎರಡು ಪಂದ್ಯಗಳು ಡ್ರಾನಲ್ಲಿ ಮುಕ್ತಾಯಗೊಂಡಿವೆ.

ಶನಿವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್​ ಸೋತ ಭಾರತ ಎ ಮೊದಲು ಬ್ಯಾಟಿಂಗ್​ಗೆ ಇಳಿಯಿತು. ಯಶಸ್ವಿ ಜೈಸ್ವಾಲ್​ ಹಾಗೂ ಸಾಯಿ ಸುದರ್ಶನ್​ (77* ರನ್​, 205 ಎಸೆತ, 10 ಬೌಂಡರಿ) ಜೋಡಿ ಹಾಕಿಕೊಟ್ಟ ಭದ್ರ ಅಡಿಪಾಯದ ನೆರವಿನಿಂದ ಭಾರತ ಎ ದಿನದಂತ್ಯಕ್ಕೆ 69.3 ಓವರ್​ಗಳಲ್ಲಿ 2 ವಿಕೆಟ್​ಗೆ 227 ರನ್​ಗಳಿಸಿದೆ. ಮಳೆಯಿಂದಾಗಿ ದಿನದಾಟಕ್ಕೆ ಬೇಗನೇ ತೆರೆಬಿದ್ದಿತು. ನವೆಂಬರ್​ 19ರಂದು ಆರಂಭವಾಗಲಿರುವ ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಸರಣಿಗೆ ಮುನ್ನ ಜೈಸ್ವಾಲ್​ ಲಯಕ್ಕೆ ಮರಳಿರುವುದು ಭಾರತಕ್ಕೆ ಪ್ಲಸ್​ ಪಾಯಿಂಟ್​ ಎನಿಸಿದೆ. ಮೊದಲೆರಡು ಪಂದ್ಯದಲ್ಲಿ ಮಿಂಚಿದ್ದ ಕನ್ನಡಿಗ ದೇವದತ್​ ಪಡಿಕ್ಕಲ್​ (15) ನಿರಾಸೆ ಮೂಡಿಸಿದರು. ಸಾಯಿ ಸುದರ್ಶನ್​ ಜತೆಯಾಗಿ ನಾಯಕ ಧ್ರುವ ಜುರೆಲ್​ (12*) ಎರಡನೇ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಭಾರತ ಎ: 69.3 ಓವರ್​ಗಳಲ್ಲಿ 2 ವಿಕೆಟ್​ಗೆ 227 (ಯಶಸ್ವಿ ಜೈಸ್ವಾಲ್​ 102, ಸಾಯಿ ಸುದರ್ಶನ್​ 77*, ದೇವದತ್​ ಪಡಿಕ್ಕಲ್​ 15, ಧ್ರುವ ಜುರೆಲ್​ 12*, ರ್ನ್ಸ್​ 16ಕ್ಕೆ 1, ಮೆಕಾಯ್​ 45ಕ್ಕೆ 1).