

ನವದೆಹಲಿ: ಟೆಸ್ಟ್ ಕ್ರಿಕೆಟ್ನಲ್ಲಿ 400 ರನ್ ಸಿಡಿಸಿರುವುದನ್ನೂ ಸೇರಿದಂತೆ ತನ್ನ ಎಲ್ಲ ದಾಖಲೆಗಳನ್ನು ಮುರಿಯುವ ಸಾಮರ್ಥ್ಯ ಭಾರತದ ಯುವ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ಗೆ ಇದೆ ಎಂದು ವೆಸ್ಟ್ ಇಂಡೀಸ್ ಬ್ಯಾಟಿಂಗ್ ದಿಗ್ಗಜ ಬ್ರಿಯಾನ್ ಲಾರಾ ಅಭಿಪ್ರಾಯಪಟ್ಟಿದ್ದಾರೆ.
22 ವರ್ಷದ ಜೈಸ್ವಾಲ್ ಇದುವರೆಗೆ 9 ಟೆಸ್ಟ್ ಪಂದ್ಯಗಳನ್ನಷ್ಟೇ ಆಡಿದ್ದಾರೆ. ಆದರೆ ಈಗಲೇ ಅವರ ಆಟದಿಂದ ಪ್ರಭಾವಿತಗೊಂಡಿರುವ ಮಾಜಿ ಎಡಗೈ ಬ್ಯಾಟರ್ ಲಾರಾ, "ಜೈಸ್ವಾಲ್ಗೆ ದೊಡ್ಡ ಇನಿಂಗ್ಸ್ಗಳನ್ನು ಆಡಬಲ್ಲರು. ಈಗಾಗಲೆ ಕೆಲ ದ್ವಿಶತಕ ಬಾರಿಸಿದ್ದಾರೆ' ಎಂದು ಹೇಳಿದ್ದಾರೆ. ಭಾರತದ ಮತ್ತೋರ್ವ ಎಡಗೈ ಬ್ಯಾಟರ್ ಅಭಿಷೇಕ್ ಶರ್ಮ ಆಟವನ್ನೂ 55 ವರ್ಷದ ಲಾರಾ ಹೊಗಳಿದ್ದಾರೆ.