

ಮುಲ್ಲನ್‌ಪುರ: ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್ (67 ರನ್, 45 ಎಸೆತ, 3 ಬೌಂಡರಿ, 5 ಸಿಕ್ಸರ್) ಅಮೋಘ ಬ್ಯಾಟಿಂಗ್ ಹಾಗೂ ವೇಗಿ ಜೋಫ್ರಾ ಆರ್ಚರ್ (25ಕ್ಕೆ 3) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ 18ನೇ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಎದುರು ಭರ್ತಿ 50 ರನ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಸಂಜು ಸ್ಯಾಮ್ಸನ್ ಪಡೆ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಏರಿದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಗ್ರಸ್ಥಾನ ಭದ್ರಪಡಿಸಿಕೊಂಡಿತು.
ನೂತನ ಪಿಸಿಎ ಕ್ರೀಡಾಂಗಣದಲ್ಲಿ ಭಾನುವಾರದ ಡಬಲ್ ಹೆಡರ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ರಾಜಸ್ಥಾನ ರಾಯಲ್ಸ್‌ಗೆ ನಾಯಕ ಸಂಜು ಸ್ಯಾಮ್ಸನ್ (38) ಹಾಗೂ ಯಶಸ್ವಿ ಜೈಸ್ವಾಲ್ ಉತ್ತಮ ಅಡಿಪಾಯ ಹಾಕಿಕೊಟ್ಟರು. ನಂತರ ಸ್ಲಾಗ್ ಓವರ್‌ಗಳಲ್ಲಿ ರಿಯಾನ್ ಪರಾಗ್ (43*) ಬಿರುಸಿನಾಟದ ಬಲದಿಂದ ರಾಜಸ್ಥಾನ ಅಂತಿಮವಾಗಿ 4 ವಿಕೆಟ್ 205 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಚೇಸಿಂಗ್‌ನಲ್ಲಿ 43 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡ ಪಂಜಾಬ್ ಕಿಂಗ್ಸ್ ಸಂಕಷ್ಟಕ್ಕೆ ಸಿಲುಕಿತು. ಆಗ ನೇಹಲ್ ವಧೇರ (62 ರನ್, 41 ಎಸೆತ, 4 ಬೌಂಡರಿ, 3 ಸಿಕ್ಸರ್) ಏಕಾಂಗಿ ಹೋರಾಟದ ನಡುವೆಯೂ ಪಂಜಾಬ್ ಕಿಂಗ್ಸ್ 9 ವಿಕೆಟ್‌ಗೆ 155 ರನ್‌ಗಳಿಸಲಷ್ಟೇ ಶಕ್ತಗೊಂಡಿತು.
ನೇಹಲ್ ಏಕಾಂಗಿ ಹೋರಾಟ
ಬೃಹತ್ ಮೊತ್ತ ಚೇಸಿಂಗ್‌ಗೆ ಇಳಿದ ಪಂಜಾಬ್ ಆರಂಭ ಆಘಾತಕಾರಿಯಾಗಿತ್ತು. ಜ್ರೋಾಆರ್ಚರ್ ಎಸೆದ ಮೊದಲ ಎಸೆತದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಪ್ರಿಯಾಂಶ್ ಆರ್ಯ (0) ಬೌಲ್ಡ್ ಆದರೆ, ಕೊನೇ ಎಸೆತದಲ್ಲಿ ಾರ್ಮ್‌ನಲ್ಲಿದ್ದ ಶ್ರೇಯಸ್ ಅಯ್ಯರ್ (10) ಬೌಲ್ಡ್ ಆದರು. ಪ್ರಭ್‌ಸಿಮ್ರನ್ ಸಿಂಗ್ (17) ನಿರಾಸೆ ಮೂಡಿಸಿದರು. ಆಗ ಜತೆಯಾದ ನೇಹಲ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಚೇಸಿಂಗ್ ಜೀವಂತವಿರಿಸಿದರು. ನೇಹಲ್ ವಧೇರ ಹೋರಾಟಕ್ಕೆ ಸಾಥ್ ನೀಡಿದ ಮ್ಯಾಕ್ಸ್‌ವೆಲ್ 5ನೇ ವಿಕೆಟ್‌ಗೆ 52 ಎಸೆತಗಳಲ್ಲಿ 88 ರನ್ ಕಸಿದರು. ಸತತ 2 ಎಸೆತಗಳಲ್ಲಿ ಇವರಿಬ್ಬರ ವಿಕೆಟ್ ಪಡೆದ ರಾಜಸ್ಥಾನ ಪಂದ್ಯದಲ್ಲಿ ಸಂಪೂರ್ಣಮೇಲುಗೈ ಸಾಧಿಸಿತು.
2. ಜ್ರೋಾ ಆರ್ಚರ್ ಹಾಲಿ ಆವೃತ್ತಿಯಲ್ಲಿ ಇನಿಂಗ್ಸ್ ಮೊದಲ ಓವರ್‌ನಲ್ಲಿ 2 ವಿಕೆಟ್ ಪಡೆದ 2ನೇ ಬೌಲರ್. ಶಾರ್ದೂಲ್ ಠಾಕೂರ್ ಮೊದಲಿಗ.